Advertisement

Ex-cricketer: ಮಾಜಿ ಕ್ರಿಕೆಟಿಗ ಸುಧೀರ್‌ ನಾೖಕ್‌ ನಿಧನ

12:28 AM Apr 06, 2023 | Team Udayavani |

ಮುಂಬಯಿ: ಭಾರತೀಯ ಕ್ರಿಕೆಟಿನ ಮಾಜಿ ಆರಂಭಕಾರ ಸುಧೀರ್‌ ನಾೖಕ್‌ (78) ಬುಧವಾರ ಮುಂಬಯಿಯ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.

Advertisement

ಸುಧೀರ್‌ ನಾೖಕ್‌ 1974ರಲ್ಲಿ 3 ಟೆಸ್ಟ್‌ ಪಂದ್ಯಗಳನ್ನಾಡಿದ್ದರು. 1970-71ರ ರಣಜಿ ಟ್ರೋಫಿ ವಿಜೇತ ಮುಂಬಯಿ ತಂಡದ ನಾಯಕರೂ ಆಗಿದ್ದರು. 85 ಪ್ರಥಮ ದರ್ಜೆ ಪಂದ್ಯಗಳಲ್ಲಿ 4,376 ರನ್‌ ಪೇರಿಸಿದ ಸಾಧನೆ ಇವರದಾಗಿತ್ತು.

ಇತ್ತೀಚೆಗೆ ಸ್ನಾನಗೃಹದಲ್ಲಿ ಬಿದ್ದು ತಲೆಗೆ ಬಲವಾದ ಏಟಾದ ಕಾರಣ ಅವರು ಕೋಮಾಕ್ಕೆ ಜಾರಿದ್ದರು ಎಂಬುದಾಗಿ ಪುತ್ರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next