Advertisement

Road mishap: ಭೀಕರ ಕಾರು ಅಪಘಾತ; ಮಾಜಿ ಶಾಸಕರ ಪತ್ನಿ ಮೃತ್ಯು

11:51 AM Jun 13, 2023 | Team Udayavani |

ದೆಹಲಿ: ಕಾರು ಅಪಘಾತದಲ್ಲಿ ಮಾಜಿ ಶಾಸಕರೊಬ್ಬರ ಪತ್ನಿ ಮೃತಪಟ್ಟಿರುವ ಘಟನೆ ಉತ್ತರ ದೆಹಲಿಯ ಕಾಶ್ಮೀರೆ ಗೇಟ್ ಪ್ರದೇಶದಲ್ಲಿ ಸೋಮವಾರ (ಜೂ.12 ರಂದು) ನಡೆದಿರುವುದು ವರದಿಯಾಗಿದೆ.

Advertisement

ಕಾಂಗ್ರೆಸ್‌ ನ ಮಾಜಿ ಶಾಸಕ ರಾಜೇಶ್ ಲಿಲೋಥಿಯಾ ಅವರ ಪತ್ನಿ ಮಧು ಲಿಲೋಥಿಯಾ ಚಲಾಯಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ವೇಗದಿಂದ ಬಂದ ಎಸ್‌ಯುವಿ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಮಧು ಲಿಲೋಥಿಯಾ ಅವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಅವರು ಮೃತಪಟ್ಟಿದ್ದಾರೆ.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ಅಜಾಗರೂಕ ಚಾಲನೆ ಅಥವಾ ಸವಾರಿ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಕಾಶ್ಮೀರೆ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಕೆಲ ದೊಡ್ಡ ನಾಯಕರು ಮತ್ತು ಸಿದ್ದರಾಮಯ್ಯ ನಡುವೆ ಒಳ ಒಪ್ಪಂದ: ಪ್ರತಾಪ್ ಸಿಂಹ ಬಾಂಬ್

ಮೊದಲು ಅಪಘಾತವೆಸಗಿ ಕಾರಿನ ಆರೋಪಿ ಪರಾರಿಯಾಗಿದ್ದಾನೆ.  ಆ ಬಳಿಕ ಸಿಸಿಟವಿ ದೃಶ್ಯದ ಆಧಾರ ಮೇಲೆ ಬಂಧಿಸಲಾಗಿದೆ.  ನ್ಯೂ ಸೀಲಂಪುರದ ನಿವಾಸಿ ಜೈನುಲ್ ಎಂಬಾತನನ್ನು ಬಂಧಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಪಿಟಿಐಗೆ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next