Advertisement

ಭೂತಾನ್‌ ಪ್ರಧಾನಿಯ ತಪ್ಪು ಪೋಟೋ ಬಳಸಿ ಅವಮಾನ: ಮಾಜಿ ಪ್ರಧಾನಿ ಟೀಕೆ

05:00 PM Jun 01, 2019 | Team Udayavani |

ಥಿಂಪು : ಭೂತಾನಿನ ಹಾಲಿ ಪ್ರಧಾನಿಯ ತಪ್ಪು ಫೋಟೋ ಬಳಸಿಕೊಂಡು ದೇಶವನ್ನು ಅವಮಾನಿಸಿರುವ ಕೆಲವು ಭಾರತೀಯ ಟಿವಿ ಚ್ಯಾನಲ್‌ಗ‌ಳನ್ನು ಭೂತಾನ್‌ ಮಾಜಿ ಪ್ರಧಾನಿ ಶೆರಿಂಗ್‌ ಟೋಗೇ ಟೀಕಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ಭೂತಾನ್‌ ನ ಹಾಲಿ ಪ್ರಧಾನಿ ಲೋತೇ ಶೆರಿಂಗ್‌ ಬಂದಿದ್ದರು.

ಇವರ ಆಗಮನವನ್ನು ವರದಿ ಮಾಡಿದ ಕೆಲವು ಚ್ಯಾನಲ್‌ಗ‌ಳು ಹಾಲಿ ಪ್ರಧಾನಿಯ ಫೋಟೋ ಪ್ರದರ್ಶಿಸುವ ಬದಲು ಭೂತಾನಿನ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿರುವ ಶೆರಿಂಗ್‌ ವಾಂಗ್‌ಚುಕ್‌ ಅವರ ಚಿತ್ರವನ್ನು ಪ್ರದರ್ಶಿಸಿ ಹಾಲಿ ಪ್ರಧಾನಿಯ ಹೆಸರನ್ನು ಕಾಣಿಸಿದ್ದವು. ಇನ್ನು ಕೆಲವು ಚ್ಯಾನಲ್‌ಗ‌ಳು ಟೋಗೇ ಅವರ ಇಮೇಜ್‌ ಟೆಲಿಕ್ಯಾಸ್ಟ್‌ ಮಾಡುವಾಗ ಅವರನ್ನು ಹಾಲಿ ಭೂತಾನ್‌ ಪ್ರಧಾನಿ ಎಂದು ಕರೆದರು.

ಈ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಬೇಸರ ತೋಡಿಕೊಂಡಿರುವ ಟೋಗೇ, ತಮ್ಮ ಟ್ವೀಟ್‌ ಜತೆ ಎರಡು ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ. ಇದರಲ್ಲಿ ಶೆರಿಂಗ್‌ ಅವರನ್ನು ತಪ್ಪಾಗಿ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next