Advertisement

ಮಾಜಿ ಸಿಎಂ ಡೆತ್‌ನೋಟಲ್ಲಿ ನಿವೃತ್ತ ಜಡ್ಜ್ ಗಳ ಹೆಸರು?

03:45 AM Feb 18, 2017 | Team Udayavani |

ನವದೆಹಲಿ: ಅರುಣಾಚಲ ಪ್ರದೇಶದ ಮಾಜಿ ಸಿಎಂ ದಿ.ಕಾಲಿಕೋ ಪುಲ್‌ರ ಆತ್ಮಹತ್ಯೆ ನೋಟ್‌ ಹೊರಬಿದ್ದಿದೆ. ಅದರಲ್ಲಿ ಕೆಲವೊಂದು ಸ್ಫೋಟಕ ಮಾಹಿತಿಗಳು ಇವೆ ಎಂದು “ದ ಕ್ವಿಂಟ್‌’ ವರದಿ ಮಾಡಿದೆ. ರಾಜ್ಯ ಸರ್ಕಾರದ ಪ್ರಮುಖ ಹಗರಣದ ತೀರ್ಪಿಗೆ ನಿವೃತ್ತ ಜಡ್ಜ್ಗಳು ಲಂಚದ ಬೇಡಿಕೆ ಇರಿಸಿದ್ದರು ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಇಬ್ಬರು ಜಡ್ಜ್ಗಳ ಹೆಸರಲ್ಲದೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಹೆಸರನ್ನೂ ಅದರಲ್ಲಿ ಪ್ರಸ್ತಾಪಿಸಲಾಗಿದೆ. 

Advertisement

“ಜಡ್ಜ್ ಪುತ್ರ ಡೀಲ್‌ ಕುದುರಿಸಿದ್ದು, ಇದಕ್ಕಾಗಿ 34 ಕೋಟಿ ರೂ. ಲಂಚ ಪಡೆದಿದ್ದರು. ಮತ್ತೂಬ್ಬ ಜಡ್ಜ್ಗೆ 28  ಕೋಟಿ ರೂ. ನೀಡಿರುವುದಾಗಿ ಹೇಳಿದ್ದಾರೆ.  ಪಡಿತರ ವ್ಯವಸ್ಥೆಯಲ್ಲಿ ಆದಂಥ ಹಗರಣ ಇದಾಗಿದ್ದು, ತೀರ್ಪನ್ನು ಮಧ್ಯವರ್ತಿಗಳಿಗೆ ಅನುಕೂಲವಾಗುವಂತೆ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಆಹಾರ ನಿಗಮದ ಪಾತ್ರ ಇರಲಿಲ್ಲ’ ಎಂದು ಡೆತ್‌ ನೋಟ್‌ನಲ್ಲಿ ಹೇಳಿದ್ದಾರೆ. ಪುಲ್‌ ಸಿಎಂ ಆಗಿದ್ದಾಗ 2016ರ ಆಗಸ್ಟ್‌ 9ರಂದು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next