Advertisement

ಬೇಸಿಗೆ ಶಿಬಿರದಿಂದ ಮಕ್ಕಳ ವ್ಯಕ್ತಿತ್ವ ವಿಕಸನ

09:04 PM May 04, 2019 | Team Udayavani |

ಹೊಳೆನರಸೀಪುರ: ಬೇಸಿಗೆ ಶಿಬಿರದಿಂದ ಮಕ್ಕಳಲ್ಲಿನ ಬುದ್ದಿ ಶಕ್ತಿ ಚುರುಕಾಗುವುದರ ಜೊತೆಗೆ ಬೌ ಕ್ಕ ಮಟ್ಟ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಹಶೀಲ್ದಾರ್‌ ಕೆ.ಆರ್‌. ಶ್ರೀನಿವಾಸ್‌ ನುಡಿದರು.

Advertisement

ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದರು.

ಬೇಸಿಗೆ ಶಿಬಿರದಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಹಾಗೂ ಮಕ್ಕಳು ವೇದಿಕೆಯ ಮೇಲೆ ನಿಂತು ಸುಲಲಿತವಾಗಿ ಮಾತನಾಡುವುದನ್ನು ಕಲಿಯಲು ಇಂತಹ ವೇದಿಕೆಗಳಿಂದ ಅವಕಾಶವನ್ನು ಪಡೆದುಕೊಳ್ಳಿ ಎಂದರು.

ಈ ವಯಸ್ಸಿನ ಮಕ್ಕಳು ಹಿಂದೆ ಕಲಿತಿರುವ ಚಟುವಟಿಕೆಗಳ ಬಗ್ಗೆ ತಿಳಿಸಿ ಮುಂದಿನ ಭಾವಿ ಪ್ರಜೆಗಳಾಗಿ ನಿರ್ಮಿಸುವ ಶಕ್ತಿ ಬೇಸಿಗೆ ಶಿಬಿರದಲ್ಲಿ ಕಲಿಯುವುದು ಬಹಳಷ್ಟು ಇದೆ ಎಂದು ತಿಳಿಸಿದರು.

ಟೀವಿ, ಮೊಬೈಲ್‌ನಿಂದ ದೂರವಿರಿ: ಸ್ವಾಮಿ ವಿವೇಕಾನಂದ ಯುವವೇದಿಕೆಯ ಅಧ್ಯಕ್ಷ ರೆಹಮಾನ್‌ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದಿನ ಯುವಪೀಳಿಗೆ ಟೀವಿ ಹಾಗೂ ಮೊಬೈಲ್‌ಗ‌ಳಿಗೆ ಮಾರುಹೋಗಿರುವುದು ಅಂತಕದ ವಿಚಾರ. ಇದರಲ್ಲಿ ಒಳ್ಳೆಯದು ಕೆಟ್ಟದು ರಡೂ ಇದೆ. ಳ್ಳೆಯದನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಸೈನಿಕರಾಗಿ ದೇಶ ಸೇವೆ ಮಾಡಿ: ನಿವೃತ್ತ ಯೋಧ ವಸಂತಕುಮಾರ್‌ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಇಂದಿನ ಯುವಕರು ದೇಶ ಸೇವೆ ಮಾಡಲು ಹಿಂಜರಿಯುತ್ತಿದ್ದು ಸೈನಿಕರಾಗಿ ದೇಶಸೇವೆ ಮುಂದಾಗಿ ಎಂದು ತಿಳಿಸಿದರು.

ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪ್ರೇಮಮಂಜುನಾಥ ನಿವೃತ್ತ ಯೋಧ ಮಂಜುನಾಥ್‌ ಅವರು ನೀತಿಕಥೆಯನ್ನು ಹೇಳಿದರು. ವೇದಿಕೆಯಲ್ಲಿ ನಿವೃತ್ತ ಯೋಧರಾದ ಮಂಜುನಾಥ್‌,ಶಂಕರನಾರಾಯಣ್‌ ಐತಾಳ್‌ , ಮಂಜುನಾಥ್‌ ಗುಪ್ತ ಅವರು ಉಪಸ್ಥಿತರಿದ್ದರು.

ಸ್ಕೌಟ್‌ ಮತು ಗೈಡ್ಸ್‌ ಕಾರ್ಯದರ್ಶಿ ನಾರಾಯಣ್‌ ಶೆಟ್ಟರು ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿಗಳಾದ ಕುಮುದಾ ರಂಗನಾಥ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಜಿ.ಜೆ. ನಾಗವೇಣಿ ಅವರು ಸ್ಕೌಟ್‌ ಮತ್ತು ಗೈಡ್ಸ್‌ನ ವಾರ್ಷಿಕ ವರದಿಯನ್ನು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next