Advertisement

“ಸೆಮಿಕಂಡಕ್ಟರ್‌ ಉದ್ಯಮದಲ್ಲಿ ವಿಕಾಸ’

12:52 AM Aug 13, 2019 | Sriram |

ಉಡುಪಿ: ಸೆಮಿಕಂಡಕ್ಟರ್‌ ಕೈಗಾರಿಕೆಯಲ್ಲಿ ವಿಕಾಸವಾಗುತ್ತಿದೆ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಮಂದಿರದ (ಐಐಎಸ್‌ಸಿ) ಪ್ರಾಧ್ಯಾಪಕ ಡಾ| ನವಕಾಂತ ಭಟ್‌ ಹೇಳಿದರು.

Advertisement

ಮಣಿಪಾಲ ಎಂಐಟಿ ಸಂಸ್ಥೆ ಐಇಇಇ ಮಂಗಳೂರು ಉಪವಿಭಾಗದ ಸಹಕಾರದಲ್ಲಿ ರವಿವಾರ ಎಂಐಟಿ ಸಭಾಂಗಣದಲ್ಲಿ ಆಯೋಜಿಸಿದ ಡಿಸ್ಟ್ರಿಬ್ಯೂ ಟೆಡ್‌ ಕಂಪ್ಯೂಟಿಂಗ್‌, ವಿಎಲ್‌ಎಸ್‌ಐ, ಎಲೆಕ್ಟ್ರಿಕಲ್‌ ಸರ್ಕ್ನೂಟ್ಸ್‌, ರೊಬೋಟಿಕ್ಸ್‌ ಕುರಿತಾದ ಐಇಇಇ ಡಿಸ್ಕವರ್‌ ಎರಡು ದಿನಗಳ ಸಮ್ಮೇಳನದ ಉದ್ಘಾಟನ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಬಯೋಸೆನ್ಸರ್‌ ಅಪ್ಲಿಕೇಶನ್‌ಗಾಗಿ ಮಿನಿಯೇಚರೈಸೇಶನ್‌ ಮತ್ತು ಆರೋಗ್ಯ ನಿಗಾ ಕ್ಷೇತ್ರದ ತಂತ್ರಜ್ಞಾನದಲ್ಲಿ ಇದರ ಬಳಕೆಯ ಮಹತ್ವವನ್ನು ವಿವರಿಸಿದ ಅವರು, ಉನ್ನತ ಸ್ತರದ ಸಂಕೀರ್ಣ ಎಲೆಕ್ಟ್ರಾನಿಕ್‌ ಸೆನ್ಸರ್‌ ವ್ಯವಸ್ಥೆಯನ್ನು ಸಾಧಿಸುವ ಸವಾಲುಗಳು ಮುಂದಿನ ಕೆಲವು ದಶಕಗಳಲ್ಲಿ ಬರಲಿವೆ ಎಂದರು.

ಕೆನಡದ ಒಂಟಾರಿಯೋ ತಂತ್ರಜ್ಞಾನ ಸಂಸ್ಥೆ ಡಾ| ಶೆಲ್ಡನ್‌ ವಿಲಿಯಮ್‌ಸನ್‌ ಅವರು, ವಿದ್ಯುತ್ಛಕ್ತಿ ಸಂಗ್ರಹ ವ್ಯವಸ್ಥೆಯಲ್ಲಿ ಮತ್ತು ಸ್ಮಾರ್ಟ್‌ ಚಾರ್ಜಿಂಗ್‌ ಮೂಲ ಸೌಕರ್ಯಗಳಲ್ಲಿ ಮುಂದೆ ಬರುವ ಅವಕಾಶಗಳ ಬಗೆಗೆ ವಿವರಿಸಿದರು. ಆಸ್ಟ್ರೇಲಿಯ ಮೆಲ್ಬೋರ್ನ್ನ ಡೀಕಿನ್‌ ವಿ.ವಿ.ಯ ಡಾ| ಅರ್ಕಾಡಿ ಝಲ್ವಿಸ್ಕಿ ಮಾತನಾಡಿದರು.

ಮಾಹೆ ಕುಲಸಚಿವ (ಮೌಲ್ಯಮಾಪನ) ಡಾ| ವಿನೋದ ವಿ. ಥಾಮಸ್‌ ಸಮ್ಮೇಳನವನ್ನು ಉದ್ಘಾಟಿಸಿದರು. ಎಂಐಟಿ ನಿರ್ದೇಶಕ ಡಾ| ಶ್ರೀಕಾಂತ ರಾವ್‌ ಅಧ್ಯಕ್ಷತೆ ವಹಿಸಿ ಹೊಸದಾಗಿ ಉದಯಿಸುತ್ತಿರುವ ತಂತ್ರಜ್ಞಾನಗಳ ಬಗೆಗೆ ಸಮ್ಮೇಳನದ ಗುರಿಯನ್ನು ವಿವರಿಸಿ ಈ ಕ್ಷೇತ್ರದಲ್ಲಿ ಸಂಶೋಧಕರು ಹೆಚ್ಚಿನ ಆಸ್ಥೆ ತಳೆಯಬೇಕೆಂದರು. ಕಾರ್ಯಾಗಾರದ ಕುರಿತು ಮಾತನಾಡಿದ ಐಇಇಇ ಅಧ್ಯಕ್ಷ ಡಾ| ಮನೋಹರ ಪೈ ಎಂ.ಎಂ. ಅವರು ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next