Advertisement

ಇವಿಎಂಗಳು ಸ್ಟ್ರಾಂಗ್‌ ರೂಂನಲ್ಲಿ ಭದ್ರ

12:44 PM Mar 29, 2019 | pallavi |

ಹೊನ್ನಾಳಿ: ಏ.23ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಅಗತ್ಯವಿರುವ ಮತಗಟ್ಟೆ ಕೇಂದ್ರದ ಎಲ್ಲ
ಪರಿಕರಗಳನ್ನು ಜಿಲ್ಲಾ ಕೇಂದ್ರದಿಂದ ತಂದು ಪಟ್ಟಣದ ಹಿರೇಕಲ್ಮಠದ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಕೈಗಾರಿಕಾ
ಶಿಕ್ಷಣ ಸಂಸ್ಥೆ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ದಾವಣಗೆರೆ ಲೋಕಸಭಾ ಚುನಾವಣೆ ಹೊನ್ನಾಳಿ ವಿಧಾನಸಭಾ
ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸುರೇಶರೆಡ್ಡಿ ಹೇಳಿದರು.

Advertisement

ಗುರುವಾರ ಬೆಳಗ್ಗೆ ದಾವಣಗೆರೆಯಿಂದ ಚುನಾವಣಾ ಪರಿಕರಗಳನ್ನು ತಂದು ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಟ್ಟ
ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಚುನಾವಣಾ ಬ್ಯಾಲೆಟ್‌ ಯುನಿಟ್‌, ವಿವಿಪ್ಯಾಟ್‌ ಸೇರಿದಂತೆ ಎಲ್ಲಾ ಉಪಕರಣಗಳನ್ನು ದಾವಣಗೆರೆಯಲ್ಲಿ ರ್‍ಯಾಂಡಮೈಜೇಶನ್‌ ಮಾಡಿದ ನಂತರ ತರಲಾಗಿದೆ. ಮತ್ತೂಂದು ಬಾರಿ ರ್‍ಯಾಂಡಮೈಜೇಶನ್‌ ಮಾಡಿ ಮತಗಟ್ಟೆ ಕೇಂದ್ರಗಳಿಗೆ ಕಳಿಸಿಕೊಡಲಾಗುವುದು ಎಂದು ಹೇಳಿದರು. 270 ಬ್ಯಾಲೆಟ್‌ ಯುನಿಟ್‌, 269 ಕಂಟ್ರೋಲ್‌ ಯುನಿಟ್‌, 269 ವಿವಿಪ್ಯಾಟ್‌ ಹಾಗೂ ವಿವಿಧ ಪರಿಕರಗಳನ್ನು 2 ಮಿನಿ ಲಾರಿಗಳಲ್ಲಿ ಪೊಲೀಶ್‌ ಭದ್ರತೆಯೊಂದಿಗೆ ತರಲಾಗಿದೆ.

ಪರಿಕರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿ, ಕೊಠಡಿಯನ್ನು ಲಾಕ್‌ ಹಾಗೂ ಸೀಲ್‌ ಮಾಡಿ ಪೊಲೀಸರ ವಶಕ್ಕೆ
ಕೊಡಲಾಗುವುದು. ಮಸ್ಟ್‌ರಿಂಗ್‌ ದಿನ ಸಾಮಗ್ರಿ ಹೊರತೆಗೆದು ಮತಗಟ್ಟೆ ಕೇಂದ್ರಗಳ ಅಧಿಕಾರಿಗಳಿಗೆ ವಿತರಿಸಲಾಗುವುದು.
ತಾಲೂಕಿನಲ್ಲಿ ಒಟ್ಟು 245 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್‌ ಮಲ್ಲಿಕಾರ್ಜುನ, ವಿವಿಧ ಪಕ್ಷಗಳ ಕಾರ್ಯಕರ್ತರು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

Advertisement

ಮಲೇಬೆನ್ನೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಯುಕ್ತ ಪಟ್ಟಣದಲ್ಲಿ ಪುರಸಭೆ ವತಿಯಿಂದ ಸ್ವೀಪ್‌ ಕಾರ್ಯಕ್ರಮದಡಿ ಜನರಿಗೆ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಮಹತ್ವ ಸಾರುವ ರೇಖಾ ಚಿತ್ರಗಳನ್ನು ಬರೆಯುವ ಮೂಲಕ, ಮತದಾನದ ಮಹತ್ವ ಸಾರುವ ಕರಪತ್ರಗಳನ್ನು ಹಂಚುವುದರ ಮೂಲಕ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲಾಯಿತು.

ಚಿತ್ರಕಲಾ ಶಿಕ್ಷಕ ಅಚ್ಯುತಾನಂದ ಪಟ್ಟಣದ ಬಸ್‌ ನಿಲ್ದಾಣದಲ್ಲಿ ವಿಕಲಚೇತನನೊಬ್ಬ ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಹೋಗಿ ಮತದಾನ ಮಾಡುವ ರೇಖಾಚಿತ್ರ ಬಿಡಿಸಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಘೋಷ ವಾಕ್ಯವನ್ನು ಬರೆದು ಜನರಲ್ಲಿ ಮತದಾನದ ಜಾಗೃತಿ ಮೂಡಿಸಿದರು.

ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ, ಮತದಾನ ಜಾಗೃತಿ ಸಹಿ
ಸಂಗ್ರಹಣಾ ಅಭಿಯಾನದಲ್ಲಿ ಪಾಲ್ಗೊಂಡರು. ಪುರಸಭೆ ಮುಖ್ಯಾಧಿಕಾರಿ ಗಣೇಶ್‌ ರಾವ್‌ ಮಾತನಾಡಿ, ವಿಕಲಚೇತನ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪುರಸಭೆ ವತಿಯಿಂದ ವೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಮತದಾನ ಮಾಡಲು ನೆರವು ನೀಡುತ್ತೇವೆ ಎಂದರು.

18 ವರ್ಷ ತುಂಬಿದ ಭಾರತದ ಎಲ್ಲಾ ಪೌರರು ಮತದಾನಕ್ಕೆ ಅರ್ಹರಿದ್ದು, ಮತದಾನ ನಾಗರಿಕನ ಹಕ್ಕು. ಯಾವುದೇ ಆಮಿಷಕ್ಕೆ ಮರುಳಾಗಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಎಂದರು. ಪುರಸಭೆ ಪರಿಸರ ಅಭಿಯಂತರು, ಹಿರಿಯ ಆರೋಗ್ಯ ನಿರೀಕ್ಷಕರು, ಪುರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next