ಗುಜರಾತ್: ಚುನಾವಣಾ ಮತ ಎಣಿಕೆ ಸಂದರ್ಭ ಇವಿಎಂ ದುರ್ಬಳಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿ ಮತ ಎಣಿಕೆ ಕೇಂದ್ರದಲ್ಲೇ ಪ್ರತಿಭಟನೆ ನಡೆಸಿ ಬಳಿಕ ಕುತ್ತಿಗೆಗೆ ಕರವಸ್ತ್ರ ಸುತ್ತಿಕೊಂಡ ಘಟನೆ ನಡೆದಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ ಸಂದರ್ಭ ಇವಿಎಂ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಗಾಂಧಿಧಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಭಾರತಭಾಯ್ ವೆಲ್ಜಿಭಾಯ್ ಸೋಲಂಕಿ ಅವರು ತಮ್ಮ ಕುತ್ತಿಗೆಗೆ ವಸ್ತ್ರದಿಂದ ಸುತ್ತಿಕೊಂಡು ಪ್ರತಿಭಟಿಸಿದ್ದಾರೆ.
ಸೋಲಂಕಿ ಅವರು ಬಿಜೆಪಿಯ ಮಾಲ್ತಿ ಕಿಶೋರ್ ಮಹೇಶ್ವರಿ ಅವರಿಗಿಂತ 12,000 ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ಬೇಸರಗೊಂಡ ಸೋಲಂಕಿ ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ದುರ್ಬಳಕೆ ಮಾಡಿದ್ದಾರೆ ಎಂದು ಕೇಂದ್ರದ ಒಳಗೆ ಪ್ರತಿಭಟನೆ ನಡೆಸಿದರು ಬಳಿಕ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ತಮ್ಮ ಬಳಿ ಇದ್ದ ವಸ್ತ್ರವನ್ನು ಕುತ್ತಿಗೆಗೆ ಸುತ್ತಿಕೊಂಡು ಪ್ರತಿಭಟಿಸಿದ್ದಾರೆ, ಈ ವೇಳೆ ಅಲ್ಲಿದ್ದ ಕಾರ್ಯಕರ್ತರು ಸೋಲಂಕಿ ಅವರು ಕುತ್ತಿಗೆಗೆ ಸುತ್ತಿದ್ದ ವಸ್ತ್ರವನ್ನು ತೆಗೆದಿದ್ದಾರೆ.
ಸಾಮಾನ್ಯವಾಗಿ ಮತ ಎಣಿಕೆ ನಡೆಯುವಾಗ, ಮತಗಳ ಪ್ರಮಾಣವನ್ನು ಮತ ಎಣಿಕೆ ಮೇಲ್ವಿಚಾರಕರು ಅರ್ಜಿಯೊಂದರಲ್ಲಿ ಭರ್ತಿ ಮಾಡುತ್ತಾರೆ. ನಮೂನೆ 17ಸಿ ಯ ಭಾಗ II ಅನ್ನು ಪೂರ್ಣಗೊಳಿಸಿದ ನಂತರ ಯಾವುದೇ ವ್ಯತ್ಯಾಸವಿಲ್ಲದಿದ್ದರೆ, ಅಧಿಕಾರಿಯು ನಮೂನೆಗೆ ಸಹಿ ಮಾಡುತ್ತಾರೆ, ಅಭ್ಯರ್ಥಿ ಅಥವಾ ಅವರ ಪ್ರತಿನಿಧಿಯಿಂದ ಅದಕ್ಕೆ ಪ್ರತಿಸಹಿಯನ್ನು ಪಡೆಯುತ್ತಾರೆ ಮತ್ತು ನಂತರ ಅದನ್ನು ಚುನಾವಣಾಧಿಕಾರಿಗೆ ಹಸ್ತಾಂತರಿಸುತ್ತಾರೆ.
ಇದನ್ನೂ ಓದಿ: ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲುವು ಸಾಧಿಸಲು ಯಶಸ್ವಿಯಾದ ಜಿಗ್ನೇಶ್ ಮೇವಾನಿ