Advertisement

ಇವಿಎಂ ಬೇಡ ಅಂಚೆ ಚಳವಳಿ

11:15 PM Jun 25, 2019 | Lakshmi GovindaRaj |

ಬೆಂಗಳೂರು: ಚುನಾವಣೆಗಳಲ್ಲಿ ಇವಿಎಂ ಬಳಕೆ ಬೇಡ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ವತಿಯಿಂದ ಅಂಚೆ ಚಳವಳಿ ನಡೆಸಲಿದ್ದಾರೆ. ಚುನಾವಣೆಗಳಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ನ್ಯಾಯಸಮ್ಮತ ಫ‌ಲಿತಾಂಶ ಹೊರ ಬರದಿರುವುದರಿಂದ, ಇವಿಎಂಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂಬ ಕಾರಣಕ್ಕೆ ಇವಿಎಂ ಬೇಡವೆಂಬ ಚಳುವಳಿಯನ್ನು ಮಹಿಳಾ ಕಾಂಗ್ರೆಸ್‌ ಹಮ್ಮಿಕೊಂಡಿದೆ.

Advertisement

ಬುಧವಾರ ಬೆಳಗ್ಗೆ ವಿಧಾನಸೌಧದ ಎದುರಿನ ಸರ್ಕಾರಿ ಅಂಚೆ ಕಚೇರಿ ಎದುರು ಹಮ್ಮಿಕೊಂಡಿರುವ ಅಂಚೆ ಚಳವಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಜಯನಗರ ಶಾಸಕ ಸೌಮ್ಯಾ ರೆಡ್ಡಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next