Advertisement

ಆಫ್ರಿಕಾದಲ್ಲಿ ಇವಿಎಂ ಹ್ಯಾಕಥಾನ್‌!

11:39 AM May 14, 2017 | Harsha Rao |

ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆ ಸಂಬಂಧ ಭಾರತದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರತಿಧಿಪಕ್ಷಗಳ ಟೀಕೆಗೆ ಉತ್ತರವಾಗಿ ಚುನಾವಣಾ ಆಯೋಗ ಈ ತಿಂಗಳ ಅಂತ್ಯದಲ್ಲಿ ಎರಡು ದಿನಗಳ ಇವಿಎಂ ಹ್ಯಾಕಥಾನ್‌ ನಡೆಸುತ್ತಿದೆ. ಈ ಬೆಳವಣಿಗೆಗಳ ಮಧ್ಯೆ ಇವಿಎಂ ತಿರುಚುವಿಕೆ ಕುರಿತ ಚರ್ಚೆಯ ಬಿಸಿ ದೂರದ ಆಫ್ರಿಕಾ ಖಂಡಕ್ಕೂ ತಲುಪಿದೆ! ಮುಂದಿನ ಚುನಾವಣೆಯಲ್ಲಿ ಭಾರತ ಮೂಲದ ಸಂಸ್ಥೆ ನಿರ್ಮಿಸಿರುವ ಇವಿಎಂಗಳನ್ನು ಬಳಸಲು ನಿರ್ಧರಿಸಿರುವ ಆಫ್ರಿಕಾದ ಬೂಟ್‌ಸ್ವಾನಾದ ಚುನಾವಣೆ ಆಯೋಗ, ಇವಿಎಂಗಳನ್ನು ಹ್ಯಾಕ್‌ ಮಾಡಿ ತೋರಿಸುವಂತೆ ಪರಿಣಿತರು ಮತ್ತು ಪ್ರತಿಪಕ್ಷಗಳಿಗೆ ಸವಾಲು ಹಾಕಿದೆ.

Advertisement

ಈ ಮೂಲಕ ಭಾರತಕ್ಕೂ ಮೊದಲೇ ಬೂಟ್‌ಸ್ವಾನಾದಲ್ಲಿ ಇವಿಎಂಗಳ ಸತ್ವ ಪರೀಕ್ಷೆ ನಡೆಯಲಿದೆ. 2019ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಬಾರಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಪರಿಚಯಿಸಲು ಬೂಟ್‌ಸ್ವಾನಾ ಸರಕಾರ ಮುಂದಾಗಿದೆ. ಆದರೆ ಇವಿಎಂಗಳ ಸುರಕ್ಷತೆ ಬಗ್ಗೆ ಅಲ್ಲಿನ  ಪ್ರತಿಪಕ್ಷಗಳೂ ಅನುಮಾನ ಪಟ್ಟಿರುವ ಹಿನ್ನೆಲೆಯಲ್ಲಿ ಮೇ 18ರಂದು ಇವಿಎಂಗಳ ಹ್ಯಾಕಥಾನ್‌ ನಡೆಸಲು ಅಲ್ಲಿನ ಚುನಾವಣೆ ಆಯೋಗ ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next