Advertisement

ಇವಿಎಂ ತಿರುಚಿ ತೋರಿಸಿ, ಆಯೋಗದ ಸವಾಲಿನಲ್ಲಿ  ಎನ್ ಸಿಪಿ, ಸಿಪಿಎಂ ಭಾಗಿ

02:29 PM Jun 03, 2017 | Team Udayavani |

ನವದೆಹಲಿ:ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಲಾಗುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ಆದ್ಮಿ ಪಕ್ಷ ಸೇರಿದಂತೆ ವಿಪಕ್ಷಗಳು ಆರೋಪಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವಂತೆ ಹಾಕಿರುವ ಸವಾಲಿನಲ್ಲಿ ಕೇವಲ 2 ರಾಜಕೀಯ ಪಕ್ಷಗಳು ಮಾತ್ರ ಶನಿವಾರ ಭಾಗವಹಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ವಿದ್ಯುನ್ಮಾನ ಮತಯಂತ್ರ ಹ್ಯಾಕಥಾನ್ ಸವಾಲಿನಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಮತ್ತು ಎನ್ ಸಿಪಿ ಮಾತ್ರ ಭಾಗವಹಿಸಿವೆ. ಎರಡು ಪಕ್ಷಗಳು ಇವಿಎಂ ಪರೀಕ್ಷೆಗೆ ತಲಾ ಮೂವರನ್ನು ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿದೆ.ವಿದ್ಯುನ್ಮಾನ ಮತಯಂತ್ರವನ್ನು ಪರೀಕ್ಷಿಸಲು ಎನ್ ಸಿಪಿ ಮತ್ತು ಸಿಪಿಎಂಗೆ ಪ್ರತ್ಯೇಕ ಹಾಲ್ ನೀಡಲಾಗಿದೆ ಎಂದು ವರದಿ ಹೇಳಿದೆ.

ಪಂಜಾಬ್, ಉತ್ತರಾಖಂಡ್, ಉತ್ತರಪ್ರದೇಶ ಚುನಾವಣೆಯಲ್ಲಿ ಬಳಸಲ್ಪಟ್ಟ ಒಟ್ಟಾರೆ 14 ಇವಿಎಂಗಳನ್ನು ಎರಡು ಪಕ್ಷಗಳಿಗೆ ನೀಡಿದೆ. ಇವಿಎಂ ಅನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲು ಚುನಾವಣಾ ಅಯೋಗ ಈ ಕ್ರಮ ಕೈಗೊಂಡಿದೆ.

ಹ್ಯಾಕಥಾನ್ ನಲ್ಲಿ ಎರಡೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಾಲ್ಕು ಇವಿಎಂಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next