ಶಿರಸಿ: “ಆರ್.ವಿ.ದೇಶಪಾಂಡೆ ಮಾಡುತ್ತಾರೆ, ದೇಶಪಾಂಡೆ ಹೇಳುತ್ತಾರೆ’ ಇದು ಕಳೆದೆರಡು ದಿನಗಳಿಂದ ಇಲ್ಲಿನ ಜೆಡಿಎಸ್-ಕಾಂಗ್ರೆಸ್ ವಲಯದಲ್ಲಿ ಏಕಕಂಠಸ್ಥವಾದ ಮಾತು. ಮೈತ್ರಿ ಅಭ್ಯರ್ಥಿಸಚಿವ ದೇಶಪಾಂಡೆ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎನ್ನುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಗೆ ಆಗಮಿಸುವ ಉಭಯ ಪಕ್ಷಗಳ ಪ್ರಮುಖರು, ಜಿಲ್ಲೆಯ ಮುಖ್ಯಸ್ಥರೂ ದೇಶಪಾಂಡೆ ಅವರು ಇನ್ನೊಂದೆರಡು ದಿನಗಳಲ್ಲಿ ಜಿಲ್ಲೆಗೆ ಬಂದು ನಮ್ಮ ನಡೆ ತಿಳಿಸುತ್ತಾರೆ ಎನ್ನುತ್ತಿದ್ದಾರೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಕೂಡ ಜಿಲ್ಲಾಧ್ಯಕ್ಷರು ಹೇಳಿದರೂ ದೇಶಪಾಂಡೆ ಅವರು ಹೇಳಲಿ ಎಂದೂ ಒಬ್ಬ ಪ್ರಮುಖರು ಹೇಳಿದ್ದೂ ನಡೆ ಯಿತು. ಇದು ನಾಯಕರಿಗೆ ನುಂಗಲಾರದ ತುಪ್ಪ ವಾದಂತಾಗಿದೆ.
ಸೋತರೂ- ಗೆದ್ದರೂ ಸ್ತುವಾರಿ ಸಚಿವ ದೇಶಪಾಂಡೆ ಅವರು ಕಾರಣ ಎಂಬ ಸ್ಥಿತಿಗೆ ಬಂದು ನಿಲ್ಲುವುದು ಖಚಿತ ವಾಗುತ್ತಿದೆ. ಮೈತ್ರಿ ಸ್ಥಿತಿ ಮಾತ್ರ, “ಓವರ್ ಟು ದೇಶಪಾಂಡೆ’ ಎಂಬಂತಾಗಿದೆ.