Advertisement

Udupi ಎಲ್ಲವೂ ಭಕ್ತರ ಕೊಡುಗೆ, ನಮ್ಮದೇನಿಲ್ಲ: ಕೃಷ್ಣಾಪುರ ಮಠಾಧೀಶರು

12:28 AM Jan 17, 2024 | Team Udayavani |
ಶ್ರೀಕೃಷ್ಣ ಮಠದಲ್ಲಿ 2022-24ರ ಅವಧಿಯಲ್ಲಿ ಚತುರ್ಥ ಪರ್ಯಾಯ ಪೂಜೆಯನ್ನು ನೆರವೇರಿಸಿ ನಿರ್ಗಮಿಸುತ್ತಿರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸದಾ ಅಂತರ್ಮುಖಿ. ಲೌಕಿಕ ವೇದಿಕೆಗಳಲ್ಲಿ ಅವರನ್ನು ಕಾಣುವುದು ಬಲು ಅಪರೂಪ. ಅವರಿಗೆ ಅಂತಹ ಆಸಕ್ತಿಯೂ ಇಲ್ಲ. ಪರ್ಯಾಯ ಕಾಲದಲ್ಲಿ ಏನಾದರೂ ದೇವರಿಗೆ ಸಮರ್ಪಣೆ ಆಗಿದ್ದರೆ ಅದೆಲ್ಲವೂ ಭಕ್ತರ ಸಹಕಾರದಿಂದ. ನಮ್ಮ ಪಾತ್ರ ಏನೂ ಇಲ್ಲ ಎನ್ನುತ್ತಾರೆ ಉದಯವಾಣಿ ಮಾತುಕತೆಯಲ್ಲಿ.

ಅಪರೂಪದ ಚತುರ್ಥ ಪರ್ಯಾಯಪೂಜೆ ಸಂಪನ್ನಗೊಳ್ಳುತ್ತಿರುವಾಗ ತಮಗೇನು ಅನಿಸುತ್ತಿದೆ?
ಸಂಪ್ರದಾಯದಂತೆ ಇಂತಹ ಅವಕಾಶವನ್ನು ದೇವರು ಒದಗಿಸಿಕೊಟ್ಟು ಅನುಗ್ರಹಿಸಿದ್ದಾನೆ ಅಷ್ಟೇ.
ಪರ್ಯಾಯ ಅವಧಿಗೂ ಉಳಿದ ಅವಧಿಗೂ ಇರುವ ವ್ಯತ್ಯಾಸ ಏನು?

ಪರ್ಯಾಯ ಅವಧಿಯಲ್ಲಿ ಕೇವಲ ಲೌಕಿಕ ವ್ಯವಹಾರಗಳು ಮಾತ್ರ ಹೆಚ್ಚಿಗೆ ಅಲ್ಲ, ಧಾರ್ಮಿಕ ಪ್ರಕ್ರಿಯೆಗಳೂ ಹೆಚ್ಚಿಗೆ ಇರುತ್ತವೆ. ಅನುಭೂತಿಗಳು ಸ್ಪಷ್ಟವಾಗಿ ಗೋಚರಿಸವು. ಕೆಲಸ ಆದ ಬಳಿಕ ದೇವರ ಅನುಗ್ರಹದಿಂದ ಆಯಿತು ಎನಿಸುತ್ತದೆ.

ಈ ಪರ್ಯಾಯ ಅವಧಿಯಲ್ಲಿ ಸಮರ್ಪಣೆಗೊಂಡ ಯೋಜನೆಗಳಾವುವು?
ಶ್ರೀಕೃಷ್ಣ ದೇವರಿಗೆ 2 ಕೋಟಿ ರೂ. ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಿಸಿದ್ದೇವೆ. ರಾಜಾಂಗಣ ಬಳಿಯ ಛತ್ರವನ್ನು ಹೊಸದಾಗಿ ನಿರ್ಮಿಸಿದ್ದೇವೆ. ಇದರ ತಳ ಅಂತಸ್ತಿನಲ್ಲಿ ರಾಜಾಂಗಣದಲ್ಲಿ ಕಾರ್ಯಕ್ರಮ ನೀಡುವ ಕಲಾವಿದರು ಗ್ರೀನ್‌ ರೂಮ್‌ ಆಗಿ ಬಳಸುತ್ತಾರೆ. ಮೇಲಿನ 2ಮಹಡಿಗಳಲ್ಲಿ ಶ್ರೀಕೃಷ್ಣ ಮಠದ ಸಿಬಂದಿ ಇರುತ್ತಾರೆ.
ತಾವು ಇಂತಹ ಕಾರ್ಯಗಳನ್ನು ಗುಪ್ತವಾಗಿಯೇ ವ್ಯವಹರಿಸುತ್ತೀರಿ. ಇದೇಕೆ?
ಇದೆಲ್ಲವನ್ನು ನಮ್ಮ ಕೈಯಿಂದ ಹಾಕಿ ಮಾಡಿದ್ದಲ್ಲ. ಭಕ್ತರ ಸಹಕಾರದಿಂದ ನಡೆದದ್ದು. ಭಕ್ತರೇ ಮಾಡುವಾಗ ನಾವೇಕೆ ಮುಂದೆ ಬರಬೇಕು?
ಶಿಷ್ಯ ಸ್ವೀಕಾರದ ಬಗೆಗೆ ತೀರ್ಮಾನ?
ಸೂಕ್ತ ಶಿಷ್ಯನಿಗಾಗಿ ಅರಸುತ್ತಿದ್ದೇವೆ. ಸದ್ಯ ಸಿಕ್ಕಿಲ್ಲ. ಸೂಕ್ತ ವಯಸ್ಸು ಆಗಿರಬೇಕು. ಹೊಣೆ ಹೊರುವ ಮಟ್ಟದಲ್ಲಿರಬೇಕು. ಧಾರ್ಮಿಕ ಆಚರಣೆಗಳನ್ನು ಚಾಚೂ ತಪ್ಪದೆ ಪಾಲಿಸುವವರು ಆಗಬೇಕು. ಜಾತಕವೂ ಕೂಡಿ ಬರಬೇಕು. ತೀರಾ ವಯಸ್ಸು ಹೆಚ್ಚಾದರೂ ಆಗದು. ತೀರಾ ಕಡಿಮೆಯಾದರೂ ಆಗದು.
Advertisement
Advertisement

Udayavani is now on Telegram. Click here to join our channel and stay updated with the latest news.

Next