Advertisement

ಆಯುರ್ವೇದದಿಂದ ಸರ್ವರೋಗ ದೂರ

12:20 PM Dec 09, 2018 | Team Udayavani |

ಬೆಂಗಳೂರು: ಆಯುರ್ವೇದ ಅಮೃತದಂತೆ. ಅದರ ಬಳಕೆಯಿಂದ ಸರ್ವ ರೋಗವನ್ನು ದೂರಮಾಡಬಹುದು ಎಂದು ರಾಜ್ಯಪಾಲ ವಿ.ಆರ್‌.ವಾಲಾ  ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕೇಂದ್ರ ಅಯುಷ್‌ ಇಲಾಖೆ, ರಾಜ್ಯ ಆಯುಷ್‌ ಇಲಾಖೆ, ತಾರುಣ್ಯ ಶಿಕ್ಷಣ ಸೇವಾ ಟ್ರಸ್ಟ್‌  ಹಾಗೂ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸಹಯೋಗದಲ್ಲಿ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಜ್ಞಾಸ-ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ರಾಷ್ಟ್ರೀಯ ಆರೋಗ್ಯ ಮೇಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕದ ಆಯುರ್ವೇದ ವಿದ್ಯಾರ್ಥಿಗಳು ಪ್ರಾಚಿನ ವೈದ್ಯ ಪದ್ಧತಿಯನ್ನು ಉಳಿಸಿ-ಬೆಳೆಸುತ್ತಿದ್ದಾರೆ. ಇದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. 4 ವೇದದಲ್ಲಿ ಆಯುರ್ವೇದವೂ ಒಂದಾಗಿದೆ ಎಂದರು. ಆಯುಷ್‌ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಮಾತನಾಡಿ. ಆರೋಗ್ಯ ಜಗತ್ತಿನಲ್ಲಿ ಆಯುರ್ವೇದ ಒಂದು ದೊಡ್ಡ ಇತಿಹಾಸ ಹೊಂದಿದೆ. ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಹೊಸ ಆಯುರ್ವೇದವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್‌.ರಘುನಂದನ್‌ ಮಾತನಾಡಿ, ಜಿಜ್ಞಾಸ ಆಯುರ್ವೇದ ವಿದ್ಯಾರ್ಥಿಗಳಿಗೆ ದೊಡ್ಡ ವೇದಿಕೆಯಾಗಿದೆ. ಆಯುರ್ವೇದಕ್ಕೆ ಅಮೆರಿಕದಲ್ಲಿ ಮನ್ನಣೆ ಸಿಕ್ಕಿದ್ದು, ಅಲ್ಲಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜಗತ್ತಿಗೆ ಸ್ವಾಮಿ ವಿವೇಕಾನಂದರಿಂದ ಹಿಂದೂ ಧರ್ಮ ಪ್ರಚಾರವಾದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಯೋಗ ಪರಿಚಯವಾಗಿದೆ. ಇಡೀ ಜಗತ್ತಿಗೆ ಗುರುವಾಗುವ ಶಕ್ತಿ ಭಾರತಕ್ಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next