ಚಿಂಚೋಳಿ: ಪರಿಸರ ರಕ್ಷಣೆ ಮತ್ತು ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಸಸಿಗಳನ್ನು ಪೋಷಿಸಿ ಬೆಳೆಸಿದರೆ ನಮಗೆ ಉತ್ತಮ ಗಾಳಿ ಮತ್ತು ಬೆಳಕು ಸಿಗಲಿದೆ ಎಂದು ಚಿಂಚೋಳಿ ಪ್ರಧಾನ ಸಿವಿಲ್ ನ್ಯಾಯಾ ಧೀಶ ಪ್ರೇಮಕುಮಾರ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಚಂದಾಪುರ ಕಸ್ತೂರಿಬಾ ಗಾಂಧಿ ವಸತಿ ಶಾಲೆಯಲ್ಲಿ ಸೋಮವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಆರೋಗ್ಯಕರವಾಗಿರಬೇಕಾದರೆ ನಮ್ಮ ಸುತ್ತಲಿನ ಪರಿಸರ ಒಳ್ಳೆಯದಾಗಿರಬೇಕು. ಅದಕ್ಕಾಗಿ ನಾವು ಮರಗಳನ್ನು ಕಡಿಯಬಾರದು. ಮಕ್ಕಳು ತಮ್ಮ ಶಾಲಾ ಆವರಣದಲ್ಲಿರುವ ಗಿಡ ಮರಗಳನ್ನು ರಕ್ಷಣೆ ಮಾಡಿದರೆ ಒಳ್ಳೆಯ ವಾತಾವರಣ ಸಿಗುತ್ತದೆ. ಮುಂದಿನ ಪೀಳಿಗೆಗಾಗಿ ನಾವೆಲ್ಲರೂ ಅರಣ್ಯ ರಕ್ಷಣೆ ಮಾಡಬೇಕು.
ಕಾಡು ಬೆಳೆಸಿ ನಾಡು ಉಳಿಸಬೇಕಾಗಿದೆ ಎಂದು ಹೇಳಿದರು. ತಹಶೀಲ್ದಾರ ದಯಾನಂದ ಪಾಟೀಲ, ನ್ಯಾಯವಾದಿಗಳಾದ ಶರಣರೆಡ್ಡಿ ಪೊಂಗಾ, ಚಂದ್ರಶೇಖರ ಮಲಸಾ ಪರಿಸರ ನಿರ್ವಹಣೆ ಮತ್ತು ಪರಿಸರ ನಿಸರ್ಗ ನೀಡುವ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.
ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಸರಕಾರಿ ಸಹಾಯಕ ಅಭಿಯೋಜಕ ರವಿಕುಮಾರ ಬಾಚಿಹಾಳ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ, ಪ್ರಾಚಾರ್ಯ ಅಶೋಕ ಶಾಸ್ತ್ರೀ, ಕಸ್ತೂರಿಬಾ ಗಾಂಧಿ ವಸತಿ ಶಾಲೆ ಮುಖ್ಯ ಶಿಕ್ಷಕಿ ಅಶ್ವಿನಿ ಮೂಲಗೆ,
-ಶ್ರೀಮಂತ ಕಟ್ಟಿಮನಿ, ಮಾಣಿಕ ಕಳಸ್ಕರ,ಅರಣ್ಯ ರಕ್ಷಕ ಸಿದ್ದಾರೂಢ ಹೊಕ್ಕುಂಡಿ, ಸಂತೋಷಕುಮಾರ ಪಾಟೀಲ, ಸಿದ್ರಾಮ, ಮಹೇಶಕುಮಾರ ಚಂದಾಪುರ ಇದ್ದರು. ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಶಾಮರಾವ ಮೋಘಾ ನಿರೂಪಿಸಿದರು. ಸಿದ್ದಾರೂಢ ವಂದಿಸಿದರು.