Advertisement

ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ನಮ್ಮ ಗುರಿ: ಶ್ವೇತಾ

04:51 PM May 31, 2020 | Suhan S |

ಹಾವೇರಿ: ಪ್ರತಿಯೊಬ್ಬರ ಆರೋಗ್ಯರಕ್ಷಣೆಯೇ ನಮ್ಮ ಆದ್ಯ ಕರ್ತವ್ಯ. ಕೋವಿಡ್ ವೈರಸ್‌ ತಡೆಗಟ್ಟುವ ಕೆಲಸ ಎಲ್ಲರ ಸಹಭಾಗಿತ್ವದಲ್ಲಿ ಮಾಡಬೇಕು. ಸಾರ್ವಜನಿಕರು ಸರ್ಕಾರ ಮತ್ತು ಆರೋಗ್ಯ ಇಲಾಖೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ವೇತಾ ಟಿ.ವಿ. ಹೇಳಿದರು.

Advertisement

ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಸ್ವಾರಿದುರಗಮ್ಮದೇವಿ ದೇವಸ್ಥಾನದಲ್ಲಿ ಅಮ್ಮಾ ಸಂಸ್ಥೆ ಹಾಗೂ ಗ್ರಾಮದ ವತಿಯಿಂದ ಕೋವಿಡ್ ವಾರಿಯರ್ಸ್‌ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ದೇಹದ ಭಾಗಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳುಬೇಕು. ಹೊರಗೆ ಹೋದಾಗ ಮಾಸ್ಕ್ ಹಾಕಿಕೊಳ್ಳಬೇಕು. ಗ್ರಾಮಕ್ಕೆ ಬೇರೆ ಕಡೆಯಿಂದ ಯಾರಾದರೂ ಬಂದರೆ ಮಾಹಿತಿ ನೀಡಬೇಕು. ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದರು.

ಊರಿನ ಹಿರಿಯರಾದ ಪರಮಯ್ಯಸ್ವಾಮಿ ಹಿರೇಮಠ ಮಾತನಾಡಿ, ಕೋವಿಡ್ ಎದುರಿಸಲು ವಾರಿಯರ್ಸ್‌ಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಅವರ ಸೇವೆ ಪ್ರೋತ್ಸಾಹಿಸಲು ಸನ್ಮಾನಿಸುತ್ತಿರುವ ಅಮ್ಮಾ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ಪಿಡಿಓ ಯೋಗೇಶ ಚಾಕರಿ ಮಾತನಾಡಿ, ಕೊರೂನಾ ವಾರಿಯರ್ಸ್‌ ಸೇವೆ ಅಭಿನಂದನಾರ್ಹ. ಅವರಿಗೆ ಪಂಚಾಯಿತಿ ವತಿಯಿಂದ ಅಭಿನಂದಿಸಲಾಗುವುದು ಎಂದರು.

ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಹರಿಮುರಿ, ಆಶಾ ಕಾರ್ಯಕರ್ತೆ ರೇಣುಕಾ ಪವಾರ ಮಾತನಾಡಿದರು. ಕಿರಿಯ ಆರೋಗ್ಯ ಸಹಾಯಕಿ ಶ್ವೇತಾ ಟಿ.ವಿ., ಆಶಾ ಕಾರ್ಯಕರ್ತೆ ರೇಣುಕಾ ಪವಾರ, ಮುತ್ತಕ್ಕ ಅರಳ್ಳಿಹಳ್ಳಿ, ಲಕ್ಷ್ಮೀ ನಡುವಿನಮನಿ, ಅಂಗನವಾಡಿ ಕಾರ್ಯಕರ್ತೆ ವನಿತಾಶ್ರೀ ಪಾಟೀಲರಿಗೆ ಸನ್ಮಾನಿಸಲಾಯಿತು.

ಊರಿನ ಹಿರಿಯರಾದ ಮರಿಯಪ್ಪ ನಡುವಿನಮನಿ, ಕೋಟೆಪ್ಪ ಆರೇರ, ಫಕ್ಕಿರೇಶ ಕಾಳಿ, ಅಮ್ಮಾ ಸಂಸ್ಥೆಯ ರುಕ್ಮಿಣಿ ಆರೇರ, ನಿಂಗಪ್ಪ ಆರೇರ, ಕವಿತಾ ಮರಾಠೆ, ಮಂಜುನಾಥ ಕೋಳೂರ, ದೀಪಾ ಆರೇರ, ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next