Advertisement

‘ಹಸಿರು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯ’

10:55 PM Jun 07, 2019 | Team Udayavani |

ಮಲ್ಪೆ : ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನದಲ್ಲಿ ಮನೆಯಲ್ಲಿ ಆದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನಮ್ಮ ಭಾರತದ ಜನಸಂಖ್ಯೆಯ ಮೂವತ್ತಮೂರು ಶೇಖಡಾವಾರು ಅರಣ್ಯ ಪ್ರದೇಶವಿರಬೇಕಿದ್ದು ಇದೀಗ ತುಂಬ ಕಡಿಮೆ ವನ ಸಂಪತ್ತು ನಮ್ಮದಾಗಿದೆ. ಹಾಗಾಗಿ ಹಸಿರು ಬೆಳೆಸಿ ಉಳಿಸುವ ಕೆಲಸ ಕಾರ್ಯಗಳನ್ನು ಪ್ರತಿಯೊಬ್ಬ ನಾಗರಿಕ ತನ್ನ ಕರ್ತವ್ಯವೆಂಬಂತೆ ಮಾಡಬೇಕಾಗಿದೆ ಎಂದು ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ ಅವರು ಹೇಳಿದರು.

Advertisement

ಅವರು ಕೊಡ ವೂರುಶಂಕರನಾರಾಯಣ ದೇವಸ್ಥಾನ, ಸುಮನಸಾ ಸಂಸ್ಥೆ, ಅರಣ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೊಡವೂರು ದೇವಳದ ವಠಾರದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ ಆಧುನಿಕತೆಯ ನೆಪದಲ್ಲಿ ಒಂದೊಂದು ಮರ ಉರುಳಿದಾಗ ಎರಡೆರಡು ಸಸಿನೆಡುವ ಸಂಕಲ್ಪ ಮಾಡಿದರೆ ಮಾತ್ರ ಮುಂದಿನ ಜನಾಂಗ ಶುದ್ಧ ಗಾಳಿ, ನೀರು, ಆಹಾರ ಪಡೆಯಲು ಸಾಧ್ಯ ಎಂದು ಹೇಳಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ ಬಾಚನಬೈಲು, ಎ. ರಾಜ ಶೇರಿಗಾರ್‌, ದೇವಳದ ಪಿಆರ್‌ಒ ಉಮೇಶ್‌ ರಾವ್‌, ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್‌, ಕೊಡವೂರು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಹಿರಿಯ ಶಿಕ್ಷಕಿ ಮಲ್ಲಿಕಾ ಕೊಡವೂರು, ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಸರೋಜಿನಿ ಉಪಸ್ಥಿತರಿದ್ದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಸ್ವಾಗತಿಸಿದರು. ಸದಸ್ಯ ಜನಾರ್ದನ ಕೊಡವೂರು ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next