Advertisement

ಸಂವಿಧಾನ ಪ್ರತಿ ಸುಟ್ಟವರಿಗೆ ಕಠಿಣ ಶಿಕ್ಷೆ ನೀಡಿ

04:53 PM Aug 24, 2018 | |

ಬಾಗಲಕೋಟೆ: ನವದೆಹಲಿಯ ಜಂತರ-ಮಂತರ ಪ್ರದೇಶದಲ್ಲಿ ಸಂವಿಧಾನದ ಪ್ರತಿ ಸುಟ್ಟ ಪ್ರಕರಣ ಖಂಡಿಸಿ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಡಿಎಸ್‌ ಎಸ್‌ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಮೂಲಕ ಆಗಮಿಸಿ, ಬಳಿಕ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ದೇಶಕ್ಕೆ ದಿಕ್ಸೂಚಿ ಎನಿಸಿಕೊಂಡಿರುವ ಸಂವಿಧಾನವನ್ನು ಆರಕ್ಷಣ ವಿರೋಧಿ  ಪಕ್ಷ, ಭೂಮಿಹಾರ ಸೇನಾ, ಬ್ರಾಹ್ಮಣ ಏಕತಾ ಮಂಚ್‌, ಹಿಂದೂ ಆಜಾದ್‌ ಸೇನಾ ಮುಂತಾದ ಸಂಘಟನೆಗಳು ಸೇರಿ ಸುಡುತ್ತಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದಾರೆ. ದೇಶದ್ರೋಹಿಗಳು ಸಂವಿಧಾನ ಸುಟ್ಟಾಗ ಪ್ರತಿಭಟನೆ ಮಾಡುವುದು ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕರ್ತವ್ಯ ಮಾತ್ರವಲ್ಲ, ದೇಶವನ್ನು ಪ್ರೀತಿಸಿ-ಗೌರವಿಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಡುವ ದುಷ್ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ದೇಶಪ್ರೇಮಿ ಜನರು ಕೂಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂವಿಧಾನಕ್ಕೆ ಬೆಂಕಿ ಹಾಕಿದ ದೇಶದ್ರೋಹಿ ಪುಂಡರಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದರು.

ಡಿಎಸ್‌ಎಸ್‌ನ ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಅನಗವಾಡಿ, ಪ್ರಮುಖರಾದ ಬಸವರಾಜ ಪಾತ್ರೋಟ, ಬಸವರಾಜ ದೊಡಮನಿ, ಸುರೇಶ ಮೀಸಿ, ದೇವರಾಜ ರತ್ನಾಕರ, ಯಲ್ಲಪ್ಪ ಮಾದರ ಮುಂತಾದ ಪ್ರಮುಖರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next