Advertisement

ಮಹತ್ವ ಅರಿತು ಎಲ್ಲರೂ ರಕ್ತದಾನಕ್ಕೆ ಮುಂದಾಗಲಿ: ಡಾ|ಪಿ.ಎಸ್‌. ರಾಮಚಂದ್ರ ಶಾಸ್ತ್ರಿ

07:56 PM May 01, 2019 | Sriram |

ವಿಟ್ಲ: ವಾಹನ ಅಪಘಾತಗಳಿಂದ ಹಲವರಿಗೆ ರಕ್ತದ ಆವಶ್ಯಕತೆ ಬರುತ್ತದೆ. ರಕ್ತದಾನದ ಮಹತ್ವವನ್ನು ಗ್ಯಾರೇಜುಗಳಲ್ಲಿ ಗ್ರಾಹಕರಿಗೆ ತಿಳಿಸಬೇಕು. ಆಗ ಇಂಥ ಕಾರ್ಯಕ್ರಮಗಳ ಆಯೋಜನೆಗೆ ಬೆಲೆ ಬರುತ್ತದೆ ಎಂದು ಜಿಲ್ಲಾ ನಿವೃತ್ತ ಕ್ಷಯರೋಗ ಅಧಿಕಾರಿ ಡಾ| ಪಿ.ಎಸ್‌. ರಾಮಚಂದ್ರ ಶಾಸ್ತ್ರಿ ಹೇಳಿದರು.

Advertisement

ಬುಧವಾರ ವಿಟ್ಲ ವಿಟuಲ ಪದವಿಪೂರ್ವ ಕಾಲೇಜು ಸುವರ್ಣ ರಂಗ ಮಂದಿರದಲ್ಲಿ ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘ ಮಂಗಳೂರು ವಿಟ್ಲ ವಲಯದ ವತಿಯಿಂದ ಕಾರ್ಮಿಕರ ದಿನದ ಅಂಗವಾಗಿ ನಡೆದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ, ರಕ್ತದಾನ ಶಿಬಿರ, ಸಮ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜಂಟ್‌ ಶ್ರೀಪ್ರಕಾಶ್‌ ಕುಕ್ಕಿಲ ಮಾತನಾಡಿ, ಗ್ರಾಹಕರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಸೇವೆ ನೀಡಿದಾಗ ಮೆಚ್ಚುಗೆ ಜತೆಗೆ ಹೆಸರು ಗಳಿಸಬಹುದು. ಸೇನೆಗೆ ಸೇರಲು ಇಚ್ಛಿಸುವ 23 ವರ್ಷ ಪ್ರಾಯದ ಒಳಗಿನ ಯುವಕರಿಗೆ ಗದಗದಲ್ಲಿ ಮೇ 28ಕ್ಕೆ ರ್ಯಾಲಿ ನಡೆಯಲಿದೆ. ಸೇನೆಗೆ ಸೇರಲು ಇಚ್ಛಿಸುವ ದಕ್ಷಿಣ ಕನ್ನಡದ ಯುವಕರಿಗೆ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಉಚಿತ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷ ಲಕ್ಷ್ಮ¾ಣ ಪೂಜಾರಿ ಆರ್‌.ಎಸ್‌. ಅಧ್ಯಕ್ಷತೆ ವಹಿಸಿದ್ದರು. ವೆನಾÉಕ್‌ ಜಿಲ್ಲಾ ಆಸ್ಪತ್ರೆ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ರಕ್ತನಿಧಿ ಅಧಿಕಾರಿ ಡಾ| ಶರತ್‌ ಕುಮಾರ್‌ ರಾವ್‌ ಜಿ. ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.

ವಿಟ್ಲ ಸಮುದಾಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ| ಪ್ರಶಾಂತ್‌ ಬಿ.ಎನ್‌., ದ.ಕ. ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್‌ ಮಾಲಕರ ಸಂಘದ ಅಧ್ಯಕ್ಷ ಗುಣಪಾಲ್‌ ಎಂ., ವಿಟ್ಲ ವಲಯ ಗೌರವಾಧ್ಯಕ್ಷ ಹರೀಶ್‌ ಆಚಾರ್ಯ ವಿ. ಮತ್ತಿತರರು ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭ ವಿಟ್ಲ ಆರೋಗ್ಯ ಇಲಾಖೆಯ ನಿವೃತ್ತ ವಾಹನ ಚಾಲಕ ಉಮೇಶ್‌ ಶೆಟ್ಟಿ, ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಪಿ.ಕೆ. ಶಶಿಕಲಾ ಅವರನ್ನು ಸಮ್ಮಾನಿಸಲಾಯಿತು. ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಟ್ಲದ ಎಲ್ಲ ಗ್ಯಾರೇಜ್‌ಗಳನ್ನು ಬಂದ್‌ ಮಾಡಿ ಶಿಬಿರವನ್ನು ಆಯೋಜಿಸಲಾಯಿತು. 60ಕ್ಕೂ ಅಧಿಕ ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.

ಗೌರವ ಸಲಹೆಗಾರ ಸುಂದರ ಆಚಾರ್ಯ ನೆಗಳಗುಳಿ ಸ್ವಾಗತಿಸಿ, ಪ್ರಸ್ತಾವಿಸಿದರು. ವೈಷ್ಣವಿ ಪಿ.ವಿ. ಆಶಯಗೀತೆ ಹಾಡಿದರು. ಚಂದ್ರಿಕಾ ವೆಂಕಟೇಶ್‌ ಸಮ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರಕಾಶ್‌ ಅಡ್ಯನಡ್ಕ ವಂದಿಸಿದರು. ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next