Advertisement

ಎಲ್ಲರೂ ಸಂವಿಧಾನ ಅರಿತುಕೊಳ್ಳಬೇಕು

06:38 PM Jan 27, 2021 | Team Udayavani |

ಬನಹಟ್ಟಿ: ದೇಶದ ಪ್ರತಿಯೊಬ್ಬರು ಸಂವಿಧಾನ ಅರಿಯುವಂತಾಗಬೇಕು. ಸಂವಿಧಾನವನ್ನು ಓದುವುದರಿಂದ ದೇಶದ ಕಾನೂನು, ನಿಯಮಗಳು, ಉದ್ದೇಶ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶರಾದ ರೇಶ್ಮಾ ಗೋಣಿ ಹೇಳಿದರು.

Advertisement

ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧjಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶದ ನಿರ್ಮಾಣದಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದರು. ಪ್ರತಿಯೊಬ್ಬರಿಗೂ ಕಾನೂನು ತಿಳಿವಳಿಕೆಯನ್ನು ನೀಡಲು ವಕೀಲರುಮುಂದಾಗಬೇಕು ಎಂದರು.

ಇದನ್ನೂ ಓದಿ:ಗಣತಂತ್ರ ವ್ಯವಸ್ಥೆಗೆ ಜನರ ಜೈಕಾರ

ಕಿರಿಯ ಶ್ರೇಣಿಯ ನ್ಯಾಯಾ  ಧೀಶ ಮಹೇಶ ಚಂದ್ರಕಾಂತ, ಬಾಗಲಕೋಟೆಯ ಸರ್ಕಾರಿ ಅಭಿಯೋಜಕ ಎಂ.ಐ.ಸಂಗ್ರತಾಸ್‌, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಮಸಳಿ, ಎಂ.ಜಿ. ಕೆರೂರ, ವಿಜಯ ಹೂಗಾರ, ವೆಂಕಟೇಶ ನಿಂಗಸಾನಿ, ಸುರೇಶ ಗೊಳಸಂಗಿ, ಸುಜಾತಾ ನಡೋಣಿ, ಸಿದ್ದು ಗೌಡಪ್ಪನವರ, ಜಿ.ಎಸ್‌.ಅಮ್ಮಣಗಿಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next