Advertisement

Dr. Veerendra Heggade ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಅಗತ್ಯ

12:16 AM Jul 08, 2024 | Team Udayavani |

ಮಂಗಳೂರು: ಕಾನೂನಿನ ಕುರಿತಂತೆ ಪ್ರತಿಯೊಬ್ಬರೂ ಕನಿಷ್ಠ ಜ್ಞಾನ ಹೊಂದುವುದು ಇಂದಿನ ಅಗತ್ಯವಾಗಿದೆ. ಕಾನೂನಿಗೆ ಬದ್ಧರಾಗಿ ಕಾನೂನು ಚೌಕಟ್ಟಿನಲ್ಲಿ ವ್ಯವಹರಿಸುವುದರಿಂದ ಯಾವುದೇ ಅಪಾಯವೂ ಉಂಟಾಗುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಮೂಡುಬಿದಿರೆ ಚೌಟರ ಅರಮನೆಯ ಡಾ| ಅಕ್ಷತಾ ಆದರ್ಶ್‌ ಅವರು ಬರೆದಿರುವ ಕಾನೂನು ಮಾಹಿತಿ ಕುರಿತಾದ “ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ!’ ಕೃತಿಯನ್ನು ರವಿವಾರ ನಗರದ ಕೊಡಿಯಾಲಬೈಲ್‌ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಸ್ಪರ ನಂಬಿಕೆ – ವಿಶ್ವಾಸವಿದ್ದರೆ ಯಾವುದೇ ಕಾನೂನಿನ ಅಗತ್ಯವಿಲ್ಲ. ಆದರೆ ಇಂದು ಹಲವರು ನಂಬಿಕೆ ವಿಶ್ವಾಸಕ್ಕೆ ವಿರುದ್ಧವಾಗಿ ಹೋಗುವುದು ಕಂಡು ಬರುತ್ತಿದೆ. ವ್ಯವಹಾರದಲ್ಲಿಯೂ ಮೋಸ ಮಾಡುವುದು, ಮೋಸ ಹೋಗುವುದು ಕೂಡ ಸಾಮಾನ್ಯ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಕಾನೂನಿನ ಅರಿವು ಇದ್ದಾಗ ಮೋಸದಿಂದ ದೂರವಿರಬಹುದು. ಇಂತಹ ಪುಸ್ತಕಗಳಿಂದ ಜನಸಾಮಾನ್ಯರಿಗೆ ಕಾನೂನಿನ ಕುರಿತು ಹೆಚ್ಚಿನ ಅರಿವು ಮೂಡುತ್ತದೆ ಎಂದರು.

ಕೃತಿಯಿಂದ ಕಾನೂನು ನೆರವು
ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಮಾತನಾಡಿ, ಕಾನೂನಿನ ಪ್ರತಿಯೊಂದು ಅಂಶವನ್ನು ಎಲ್ಲರೂ ತಿಳಿಯಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ನಮಗೆ ಇಂತಹ ಕೃತಿಗಳು ನೆರವಾಗುತ್ತದೆ ಎಂದು ಹೇಳಿದರು.

ಕಾನೂನಿನಲ್ಲಿ ಜೀವನದಲ್ಲಿ ಶಿಸ್ತು
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್‌.ವಿ.ರಾಘವೇಂದ್ರ ಮಾತನಾಡಿ, ಹುಟ್ಟಿನಿಂದ ಸಾವಿನ ವರೆಗೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನಿನ ನೆರವು ಅಗತ್ಯವಿದೆ. ಜನರಲ್ಲಿ ಶಿಸ್ತು ಬರಲು ಕಾನೂನು ಅಗತ್ಯ ಎಂದರು.

Advertisement

ಕಾನೂನಿಲ್ಲದೆ ಬದುಕಿಲ್ಲ
ಲೇಖಕಿ, ವಕೀಲೆ ಡಾ| ಅಕ್ಷತಾ ಆದರ್ಶ್‌ ಮಾತನಾಡಿ, ಕಾನೂನಿನ ಅಜ್ಞಾನಕ್ಕೆ ಕ್ಷಮೆ ಇಲ್ಲ. ಕಾನೂನಿಲ್ಲದೆ ಬದುಕಲೂ ಸಾಧ್ಯವಿಲ್ಲ. ಈ ಕೃತಿಯಿಂದ ಜನರಿಗೆ ಸಹಾಯವಾದರೆ ಜೀವನ ಸಾರ್ಥಕವಾದಂತೆ ಎಂದರು.

ಅಕ್ಷತಾ ಅವರ ತಂದೆ ಧರ್ಮರಾಜ್‌ ಜೈನ್‌, ಪತಿ ಆದರ್ಶ್‌ ಎಂ.ಉಪಸ್ಥಿತ ರಿದ್ದರು. ಡಾ| ಆಕಾಶ್‌ ರಾಜ್‌ ಜೈನ್‌ ಸ್ವಾಗತಿಸಿದರು. ಮೂಡುಬಿದಿರೆ ಜೈನ್‌ ಕಾಲೇಜು ಪ್ರಾಂಶುಪಾಲ ಡಾ| ಪ್ರಭಾತ್‌ ಬಳ್ನಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next