Advertisement

ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಳ್ಳಿ

08:52 AM Jan 28, 2019 | Team Udayavani |

ಕಾಳಗಿ: ರಾಷ್ಟ್ರದ ಕುರಿತು ಪ್ರತಿಯೊಬ್ಬರೂ ಶ್ರದ್ಧೆ, ಪ್ರೀತಿ, ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಮಹಿಬೂಬಿ ಹೇಳಿದರು. ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 70ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಅಭ್ಯಸಿಸಿ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.

Advertisement

ಇದೆ ವೇಳೆ ಸ್ವಾತಂತ್ರ್ಯ ಹೋರಾಟಗಾರ ಅಮೃತರಾವ್‌ ನಡಗಟ್ಟಿ ಅವರನ್ನು ಸನ್ಮಾನಿಸಲಾಯಿತು. ಗ್ರೇಡ್‌2 ತಹಶೀಲ್ದಾರ್‌ ಶಾಂತಗೌಡ ಬಿರೆದಾರ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ಉಪಾಧ್ಯಕ್ಷ ದೇವಜಿ ಜಾಧವ್‌ ಮತ್ತಿತರರು ಇದ್ದರು.

ವಿವಿಧೆಡೆ ಧ್ವಜಾರೋಹಣ: ಗ್ರಾಪಂನಲ್ಲಿ ಅಧ್ಯಕ್ಷೆ ಶಿವಲೀಲಾ ಸಲಗೂರ, ಶಿವಬಸವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್‌ನಲ್ಲಿ ಸಂಸ್ಥೆ ಅಧ್ಯಕ್ಷ ಪೂಜ್ಯ ಶಿವಬಸವ ಶಿವಾಚಾರ್ಯರು, ಕಾಳೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಥೆ ಅಧ್ಯಕ್ಷ ಸಂಗಪ್ಪ ಅರಣಕಲ್‌, ಬಿಜೆಪಿ ಕಾರ್ಯಾಲಯದಲ್ಲಿ ಎಪಿಎಂಸಿ ಸದಸ್ಯ ರಾಮಶೆಟ್ಟಿ ಮಾಲಿಪಾಟೀಲ, ಕಾಂಗ್ರೆಸ್‌ ಕಚೇರಿಯಲ್ಲಿ ತಾಪಂ ಸದಸ್ಯೆ ರತ್ನಮ್ಮ ಗುತ್ತೇದಾರ, ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಕಾವೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯಶಿಕ್ಷಕ ಸಿದ್ಧರೆಡ್ಡಿ ಭರತನೂರ, ಜಗಜ್ಯೋತಿ ಬಸವೇಶ್ವರ ಪಪೂ ಕಾಲೇಜಿನಲ್ಲಿ ಪ್ರಾಚಾರ್ಯ ಕಾಶಿನಾಥ ಗುತ್ತೇದಾರ, ಸರಕಾರಿ ಪಪೂ ಕಾಲೇಜಿನಲ್ಲಿ ಪ್ರಾಚಾರ್ಯ ಆಂಜನೇಯ ಕಂದಿ ಧ್ವಜಾರೋಹಣ ಮಾಡಿದರು.

ಚಾಮುಂಡೇಶ್ವರಿ ಶಾಲೆಯಲ್ಲಿ ಮುಖ್ಯಶಿಕ್ಷಕ ರಮೇಶ ನಾಮದಾರ, ರೈತ ಸೇವಾ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಪರಮೇಶ್ವರ ಮಡಿವಾಳ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ರುಚಿ ಕೆಂಗಾಪುರ, ಪಶು ಚಿಕಿತ್ಸಾಲಯದಲ್ಲಿ ಡಾ| ಅಣ್ಣಾರಾವ್‌ ಪಾಟೀಲ, ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಕಾಳಪ್ಪ ಬಡಿಗೇರ, ದೇವರಾಜ ಮಾಲಿ ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಪಾಚಾರ್ಯ ಚಂದನಾ ಪಾಟೀಲ, ಗಾಜರೆ ಚಾರಿಟೇಬಲ್‌ ಟ್ರಸ್ಟ್‌ನಲ್ಲಿ ಸಂಸ್ಥೆ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಗಾಜರೆ, ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಭರತ ದೊಡ್ಡಮನಿ, ಬಸ್‌ ನಿಲ್ದಾಣದಲ್ಲಿ ಘಟಕ ವ್ಯವಸ್ಥಾಪಕ ಯಶವಂತರಾಯ ಯಾತನೂರ ಧ್ವಜಾರೋಹಣ ಮಾಡಿದರು.

ಕಾಳಗಿ: ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಮಹಿಬೂಬಿ ಧ್ವಜಾರೋಹಣ ನೆರವೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next