Advertisement
ಈ ತಂಡದಲ್ಲಿ ಮುಕ್ತವಾದ ವಾತಾ ವರಣವಿದೆ. ಡ್ರೆಸ್ಸಿಂಗ್ ರೂಂನಲ್ಲಿ ಸಹ ಆಟಗಾರರನ್ನು ಬೈಯುವ ಪದ್ಧತಿ ಮಾಯವಾಗಿದೆ. ಪ್ರತಿಯೊಬ್ಬರಿಗೂ ಬಿಚ್ಚು ಮನಸ್ಸಿನಿಂದ ಮಾತನಾಡಲು ಅಧಿಕಾರವಿದೆ. ಅವರು ಪೂರ್ಣ ಪ್ರಮಾಣದಲ್ಲಿ ತಮ್ಮತನವನ್ನು ತೋರಲು ಇಲ್ಲಿ ಸ್ವಾತಂತ್ರ್ಯವಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಯಾವುದೇ ಆಟಗಾರ ತಾನು ಕುಸಿದು ಹೋಗಿದ್ದೇನೆ ಅನಿಸಿದಾಗ, ನನ್ನ ಬಳಿ ಬಂದು ಮುಕ್ತವಾಗಿ ಹೇಳಿಕೊಳ್ಳಬಹುದು. ಧೋನಿ ಜತೆಗೆ ಎಷ್ಟು ಸ್ನೇಹದಿಂದ ವರ್ತಿಸುತ್ತೇನೋ, ಅಷ್ಟೇ ಸ್ನೇಹದಿಂದ ಕುಲದೀಪ್ ಯಾದವ್ ಜತೆಗೂ ವರ್ತಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. ನಾನು ಆಟಗಾರರ ಬಳಿ ಆಗಾಗ, ನಾನು ಮಾಡಿದ ತಪ್ಪನ್ನು ನೀವು ಮಾಡಬೇಡಿ ಎಂದು ಹೇಳುತ್ತೇನೆ. ನೀನು ಮಾಡಬೇಕಿದ್ದು ಇದನ್ನು, ಆದರೆ ಮಾಡುತ್ತಿರುವುದೇ ಬೇರೆ. ಈ ತಪ್ಪುಗಳನ್ನು ನೀನು ಈಗಲೇ ತಿದ್ದಿಕೊಳ್ಳದೇ ಹೋದರೆ, ನನ್ನಂತಾಗುತ್ತೀಯ. ನಿನ್ನ ಅಮೂಲ್ಯ 2-3 ವರ್ಷದ ವೃತ್ತಿಜೀವನ ಹಾಳಾಗುವುದು ನನಗೆ ಬೇಕಿಲ್ಲ. ಈಗ ಏನು ಆಡಿದ್ದೀಯೋ, ಅದಕ್ಕಿಂತ ಹೆಚ್ಚಿಗೆ ಆಡುವುದನ್ನು ನಾನು ಬಯಸುತ್ತೇನೆಂದು ಆಟಗಾರರಿಗೆ ಹೇಳುತ್ತೇನೆಂದು ಕೊಹ್ಲಿ ಹೇಳಿದ್ದಾರೆ.