Advertisement

ಪ್ರತಿದಿನ ಶ್ರೀಗಳ ನೆನೆದು ದಿನಚರಿ ಆರಂಭಿಸುವೆ: ಸಿಎಂ ಯಡಿಯೂರಪ್ಪ

07:56 PM Jan 22, 2021 | Team Udayavani |

ತುಮಕೂರು: ಶ್ರೀಮಠಕ್ಕೆ ಭೇಟಿ ನೀಡಿದಾಗಲೆಲ್ಲಾ ಮಾರ್ಗದರ್ಶನ ಮಾಡುತ್ತಿದ್ದ ಶ್ರೀಗಳು ನಾನು ದಾಹೋಹ ಮಾಡದೇ ವಾಪಾಸಾಗಲು ಬಿಡುತ್ತಿರಲಿಲ್ಲ. ಧರ್ಮ, ಜಾತಿ ಭೇದವಿಲ್ಲದೇ ಕಾಯಕ ಮಾಡಿದ ಶ್ರೀಗಳು ಬಸವಣ್ಣ ಅವರ ತತ್ವಗಳನ್ನು ಅನುಸರಿಸಿ ಧಾರ್ಮಿಕ ಸಂಸ್ಥೆಗಳ ಮಾನವೀಯ ಮುಖವನ್ನು ಜಗತ್ತಿಗೆ ತೋರಿಸಿ ನಾಡಿಗೆ ದೇವರಾಗಿದ್ದಾರೆ. ಪ್ರತಿನಿತ್ಯ ನನ್ನ ದಿನಚರಿಯನ್ನು ಶ್ರೀಗಳ ಸ್ಮರಣೆ ಮಾಡಿಕೊಂಡು ಆರಂಭಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ತಿಳಿಸಿದರು.

Advertisement

ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂ. ಡಾ. ಶ್ರೀ ಶಿವಕುಮಾರಸ್ವಾಮೀಜಿ ಅವರ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೂರನ್ನೊಂದು ವರ್ಷಗಳ ಕಾಲ ಭಕ್ರರ ಪಾಲಿಗೆ ನಡೆದಾಡುವ ದೇವರೆಂದೇ ಬದುಕಿದ ಶ್ರೀಗಳ ಬದುಕು ಮತ್ತು ವ್ಯಕ್ತಿತ್ವ ಸಾರುವ ಉದ್ದೇಶದಿಂದ ಅವರ ಹುಟ್ಟೂರಾದ ವೀರಾಪುರದಲ್ಲಿ 111 ಅಡಿ ಪುತ್ಥಳಿ ಸ್ಥಾಪನೆಗೆ 80 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.

ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಮಾತನಾಡಿ, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಕಳೆದ  ಎರಡು ವರ್ಷಗಳ ಹಿಂದೆ ಭಕ್ತರಿಗೆ ನೋಡುವ ಭಾಗ್ಯವಿತ್ತು. ಎರಡು ವರ್ಷದ ನಂತರ ಅವರ ಸ್ಮರಣೆಯೇ ದರ್ಶನವಾಗಿದೆ. ಶ್ರೀಗಳನ್ನು ಪಡೆದ ಈ ನಾಡೇ ಪುಣ್ಯ ಎನ್ನುವ ಭಾವನೆ ಭಕ್ತಗಣದಲ್ಲಿದೆ ಎಂದು ಹೇಳಿದರು.

ಇದನ್ನೂ ಓದಿ:ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ  ಅನುಭಾವಿ ಪಂಡಿತ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವಪ್ರತಾಪ್‌ ಚಂದ್ರ ಸಾರಂಗಿ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಪಂಚಮಸಾಲಿ ಮಠದ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ ಮಾತನಾಡಿದರು. ಕೈಗಾರಿಕಾ ಸಚಿವಜಗದೀಶ್‌ ಶೆಟ್ಟರ್‌, ಸಂಸದ ಜಿ.ಎಸ್‌. ಬಸವರಾಜು, ಶಾಸಕರಾದ  ಜಿ.ಬಿ. ಜ್ಯೋತಿಗಣೇಶ್‌, ಜಯರಾಂ, ರಾಜೇಶ್‌ಗೌಡ, ಚಿದಾನಂದಗೌಡ, ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ, ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ಕ್ರೇಡಲ್‌ ಅಧ್ಯಕ್ಷ ರುದ್ರೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌, ಜಿಪಂ ಸಿಇಒ ಶುಭಾ ಕಲ್ಯಾಣ್‌ ಸೇರಿದಂತೆ ಮಠಾಧ್ಯಕ್ಷರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next