Advertisement
ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೂ, ಐಷಾರಾಮಿ ವಸ್ತುಗಳ ಖರೀದಿಗೂ ವ್ಯತ್ಯಾಸವಿದೆ. ಗೃಹಿಣಿಯರು ಹೆಚ್ಚಾಗಿ ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವುದಕ್ಕಾಗಿ ಗಳಿಗೊಮ್ಮೆಯಾದರೂ ಮಾರುಕಟ್ಟೆ ಕಡೆ ತೆರಳುತ್ತಾರೆ. ಯುವತಿಯರು ಬಟ್ಟೆಬರೆಗಳಿಗಾಗಿ ವಾರಕ್ಕೊಮ್ಮೆ ಮಾಲ್ ಗಳತ್ತ ಕಣ್ಣು ಹಾಯಿಸುತ್ತಾರೆ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಶಾಪಿಂಗ್ ಮಾಡಬೇಕು ಎಂದು ಕನಸು ಕಾಣುವ ಜನರ ಸಂಖ್ಯೆಗೇನೂ ಕಡಿಮೆ ಇಲ್ಲ.
· ಮನೆ ಅಥವಾ ಕಚೇರಿಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಮುನ್ನ ಮಾಲ್, ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಹೋಲಿಕೆ ಮಾಡಿಕೊಳ್ಳುವುದು ಉತ್ತಮ.
Related Articles
ಹಣವನ್ನು ಇರಿಸಿಕೊಳ್ಳುವುದು ಒಳ್ಳೆಯದು.
Advertisement
· ಶಾಪಿಂಗ್‌ಗೆ ತೆರಳುವಾಗ ಖರೀದಿಸಬೇಕಿರುವ ವಸ್ತುಗಳ ಪಟ್ಟಿ ಮಾಡಿಕೊಳ್ಳಬೇಕು. ಯಾವ ವಸ್ತು ಬೇಕು ಅದರತ್ತ ಮಾತ್ರ ಗಮನಹರಿಸಬೇಕು.
· ನಾವು ಹಿಂದೆ ಖರೀದಿಸಿದ ವಸ್ತುವನ್ನೇ ಮತ್ತೂಮ್ಮೆ ಖರೀದಿಸದಂತೆ ಎಚ್ಚರ ವಹಿಸಬೇಕು. ಬಟ್ಟೆ ಅಥವಾ ಇನ್ನಿತರ ವಸ್ತುಗಳು ನಮಗೆ ಒಪ್ಪುತ್ತವೆಯೋ ಎಂದು ಪರಿಶೀಲಿಸಿಕೊಳ್ಳಬೇಕು.
· ಮಾಲ್‌ಗಳಲ್ಲಿ ಹಬ್ಬಹರಿದಿನಗಳಲ್ಲಿ ಆಫರ್‌ಗಳಿರುತ್ತವೆ. ಇದರ ಪ್ರಯೋ ಜನ ಪಡೆ ದು ಕೊಂಡರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ.
· ದುಬಾರಿ ವಸ್ತುಗಳ ಖರೀದಿ ಸಮಯದಲ್ಲಿ ಬೇರೆ ಬೇರೆ ಶಾಪ್ ಗಳ ಬೆಲೆಯನ್ನು ಪರಿಶೀಲಿಸಿಕೊಳ್ಳಿ.
· ಉಳಿತಾಯದ ಶಾಪಿಂಗ್ ಮಾಡಬೇಕೆಂದಿದ್ದರೆ ಶಾಪಿಂಗ್‌ಗೆ ತೆರಳುವಾಗ ಕ್ರೆಡಿಟ್‌ಕಾರ್ಡ್ ಬದಲು ಡೆಬಿಟ್ ಕಾರ್ಡ್ ಬಳಸಿ.
.ಡೆಬಿಟ್ ಕಾರ್ಡ್ಗಿಂತ ನಗದು ಬಳಕೆ ಉತ್ತಮ ಎಂಬುದನ್ನು ಮರೆಯದಿರಿ.
· ಶಾಪಿಂಗ್ ಮಾಲ್ ಗಳಲ್ಲಿರುವ ವಿವಿಧ ವೋಚರ್ ಕಾರ್ಡ್ ಗಳ ಲಾಭ ಪಡೆಯಿರಿ. ಇದ ರಿಂದ ಶಾಪಿಂಗ್ ನಲ್ಲಿ ನಿಮಗೆ ವಿಶೇಷ ರಿಯಾಯಿತಿ ಸಿಗಲಿದೆ.
· ಮಾರು ಕಟ್ಟೆ ಹತ್ತಿರದಲ್ಲೇ ಇದ್ದರೆ ನಡೆದುಕೊಂಡೇ ಹೋಗಿ. ಇದರಿಂದ ಉಳಿತಾಯವಾಗುವ ಹಣದಲ್ಲಿ ನೀವು ಬೇರೆಯಾವುದಾದರೂ ವಸ್ತುವನ್ನು ಖರೀದಿಸಬಹುದು. · ಉಳಿತಾಯದ ನೆಪದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ತರಬೇಡಿ. ದೀರ್ಘ ಕಾಲ ಬಳಸಬಹುದಾದ ವಸ್ತುಗಳಿಗೆ ಕೊಂಚ ಹಣ ಹೆಚ್ಚು ಕೊಟ್ಟು ತಂದರೂ ತೊಂದರೆಯಿಲ್ಲ ಎಂಬುದನ್ನು ಮರೆಯದಿರಿ. ಪ್ರಜ್ಞಾ ಶೆಟ್ಟಿ