Advertisement

ಮಲೇರಿಯಾ ಮುಕ್ತಗೊಳಿಸಲು ಪ್ರತಿಯೊಬ್ಬರು ಕೈ ಜೋಡಿಸಿ

01:25 PM Jun 03, 2019 | Team Udayavani |

ಬೆಳಗಾವಿ: ಭಾರತವನ್ನು 2022ರೊಳಗೆ ಮಲೇರಿಯಾ ಮುಕ್ತ ಮಾಡಬೇಕಾಗಿದ್ದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಎಂ.ಎಸ್‌. ಪಲ್ಲೇದ ಹೇಳಿದರು.

Advertisement

ಜಿಲ್ಲಾ ಮಟ್ಟದ ಮಲೇರಿಯಾ ಮಾಸಾಚರಣೆ ನಿಮಿತ್ತ ಮಲಪ್ರಭಾ ನಗರ ಹಾಗೂ ವಡಗಾವಿಯ ಮಾಧವಪುರದಲ್ಲಿ ಶನಿವಾರ ನಡೆದ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಲೇರಿಯಾ ನಿರ್ಮೂಲನೆ ಕಾರ್ಯ ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎನ್ನುವ ಘೋಷಣೆಯೊಂದಿಗೆ ಆರಂಭವಾಗಿದ್ದು, ಮಲೇರಿಯಾ ನಿರ್ಮೂಲನೆಯಲ್ಲಿ ಪ್ರಮುಖವಾಗಿ ಸೊಳ್ಳೆಗಳ ನಿಯಂತ್ರಣ, ಜೈವಿಕ ಪರಿಸರ ನಿಯಂತ್ರಣ ಕ್ರಮಗಳು ಪರಿಸರ ನೈರ್ಮಲ್ಯ, ಪತ್ತೆಗೊಂಡ ರೋಗಿಗಳಿಗೆ ಶೀಘ್ರ ಚಿಕಿತ್ಸೆ ನೀಡುವುದು. ಮುಖ್ಯವಾಗಿ ಸಮುದಾಯದ ಸಹಭಾಗಿತ್ವದಿಂದ ಮಲೇರಿಯಾ ನಿರ್ಮೂಲನೆ ಸಾಧ್ಯವಾಗುವುದು. 2018ರಲ್ಲಿ 24 ಕೇಸುಗಳಾಗಿದ್ದು, ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದರು.

ಮಾಜಿ ಸದಸ್ಯ ರತನ ಮಾಸೇಕರ ಮಲೇರಿಯಾ ಮಾಸಾಚರಣೆಯ ಆರೋಗ್ಯ ಶಿಕ್ಷಣಕ್ಕೆ ಸಂಬಂಧಪಟ್ಟ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಕೀಟ ಶಾಸ್ತ್ರತಜ್ಞ ಗಣಪತಿ ಬಾರ್ಕಿ, ಕೀಟ ಶಾಸ್ತ್ರತಜ್ಞೆ ಶಿಲ್ಪಾ ಹಳೆಮನಿ, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಯಲಿಗಾರ ಸ್ವಾಗತಿಸಿದರು. ಸಿ.ಜಿ. ಅಗ್ನಿಹೋತ್ರಿ ವಂದಿಸಿದರು. ಅಹ್ಮದ ಕಲೀಮುಲ್ಲಾ ನಿರೂಪಿಸಿದರು.

ಜಾಥಾ ಕಾರ್ಯಕ್ರಮ: ಪಾಲಿಕೆ ಮಾಜಿ ಸದಸ್ಯ ರಮೇಶ ಸೊಂಟಕ್ಕಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಎಂ.ಎಸ್‌. ಪಲ್ಲೇದ, ಐಸಿಎಂಆರ್‌ ಅಧಿಕಾರಿ ಡಾ| ಬನಪ್ಪಾ ಉಂಗುರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಬಿ.ಎನ್‌. ತುಕ್ಕಾರ, ತಾಲೂಕಾ ಆರೋಗ್ಯಾಧಿಕಾರಿ ಡಾ| ಎಸ್‌.ಆರ್‌. ಡುಮ್ಮಗೋಳ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ನ.14ನೇ ಶಾಲೆಯ ಶಿಕ್ಷಕ ವೃಂದದವರು, ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next