Advertisement

ಎಲ್ಲರೂ ಬೀಫ್ ತಿನ್ನುತ್ತಾರೆ…ಯಾರಿಂದಲೂ ತಡೆಯಲು ಸಾಧ್ಯವಿಲ್ಲ; ಮೇಘಾಲಯ ಬಿಜೆಪಿ ಮುಖ್ಯಸ್ಥ

03:03 PM Feb 23, 2023 | Team Udayavani |

ಶಿಲ್ಲಾಂಗ್(ಮೇಘಾಲಯ): ಮೇಘಾಲಯದಲ್ಲಿ ಗೋ ಮಾಂಸ ತಿನ್ನುವುದಕ್ಕೆ ಯಾವುದೇ ನಿರ್ಬಂಧವಿಲ್ಲ, ನಾನೂ ಕೂಡಾ ಗೋ ಮಾಂಸ ಸೇವಿಸುತ್ತೇನೆ ಎಂದು ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ ಎರ್ನೆಸ್ಟ್ ಮಾರ್ವಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಲಂಚ ಪಡೆಯುತ್ತಿದ್ದ ಹರಿಹರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಎಎನ್ ಐ ಜೊತೆ ಮಾತನಾಡಿದ ಅವರು, ಗೋ ಮಾಂಸದ ಕುರಿತು ಇತರ ರಾಜ್ಯಗಳು ಅಂಗೀಕರಿಸಿದ ನಿರ್ಣಯದ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ನಾವು ಮೇಘಾಲಯದಲ್ಲಿದ್ದೇವೆ, ಇಲ್ಲಿ ಪ್ರತಿಯೊಬ್ಬರು ಗೋ ಮಾಂಸ ತಿನ್ನುತ್ತಾರೆ. ಅದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಹೌದು, ನಾನು ಕೂಡಾ ಗೋ ಮಾಂಸ ತಿನ್ನುತ್ತೇನೆ. ಇದು ಮೇಘಾಲಯ ಜನರ ಜೀವನ ಪದ್ಧತಿಯಾಗಿದೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಗೋ ಮಾಂಸ ಸೇವಿಸಬಾರದು ಎಂಬ ಯಾವ ಕಾನೂನು ಭಾರತದಲ್ಲಿ ಇಲ್ಲ. ಕೆಲವು ರಾಜ್ಯಗಳು ಕೆಲವು ಕಾಯ್ದೆಯನ್ನು ಜಾರಿಗೊಳಿಸಿವೆ. ಆದರೆ ಮೇಘಾಲಯದಲ್ಲಿ ಗೋ ಮಾಂಸದ ಮಾರಾಟದ ಅಂಗಡಿಗಳಿವೆ. ಮೇಘಾಲಯದ ಜನರು ಗೋವು, ಹಂದಿ ಮಾಂಸವನ್ನು ಹೆಚ್ಚಾಗಿ ತಿನ್ನುತ್ತಾರೆ. ಇದು ನಮ್ಮ ಆಹಾರ ಪದ್ಧತಿಯಾಗಿದೆ ಎಂದು ಹೇಳಿದ್ದಾರೆ.

ಆದರೆ ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಗೋ ವಧೆ, ಸಾಗಣೆ ಮತ್ತು ಗೋ ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಹಿಂದುಗಳು ವಾಸಿಸುವ ಪ್ರದೇಶದಲ್ಲಿ ಗೋ ಮಾಂಸ ತಿನ್ನುವುದನ್ನು ನಿರ್ಬಂಧಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

ಭಾರತೀಯ ಜನತಾ ಪಕ್ಷ ಕ್ರಿಶ್ಚಿಯನ್ ವಿರೋಧಿ ಎಂಬ ಕೆಲವು ರಾಜಕೀಯ ಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಮೇಘಾಲಯ ಬಿಜೆಪಿ ಅಧ್ಯಕ್ಷ ಮಾರ್ವಿ, ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟ ಆಡಳಿತದಲ್ಲಿದೆ, ಆದರೆ ದೇಶದಲ್ಲಿ ಯಾವುದೇ ಒಂದು ಚರ್ಚ್ ಮೇಲೆ ದಾಳಿ ನಡೆದಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next