ತುರುವೇಕೆರೆ: ನಾಗರಿಕರ ಮನೆ ಬಾಗಿ ಲಿಗೆ ಸೇವೆ ತಲುಪಿಸುವ ನಿಟ್ಟಿನಲ್ಲಿ ಇನ್ಮುಂದೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ತಾಲೂಕು ಕೇಂದ್ರಕ್ಕೆ ತೆರಳಿ ತಾಲೂಕು ಕಚೇರಿಯಲ್ಲಿ ವಾಸ್ತವ್ಯ ಮಾಡಬೇಕೆಂದು ಕಂದಾಯ ಸಚಿವ ಆರ್. ಅಶೋಕ್ ಆದೇಶಿಸಿದ್ದಾರೆ.
ತಾಲೂಕಿನ ಮಾಯಸಂದ್ರದ ಸರ್ಕಾರಿ ಪಾಠಶಾಲೆ ಆವರಣದಲ್ಲಿ ಗ್ರಾಮವಾಸ್ತವ್ಯ ಪ್ರಯುಕ್ತ ವಿವಿಧ ಇಲಾಖೆಗಳ ಅಡಿಯಲ್ಲಿ ಸವಲತ್ತು ವಿತರಣೆ ಮಾಡಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯಾದರೂ ಮಂತ್ರಿಯಾ ದರೂ ಜನರಿಗೋಸ್ಕರವೇ ಕೆಲಸ ಮಾಡಬೇಕೆಂದು ಹೇಳಿದರು.
ಗ್ರಾಮ ವಾಸ್ತವ್ಯ ನನ್ನ ಮಹಾತ್ವಾಕಾಂಕ್ಷಿ ಯೋಜನೆ. ಇದೊಂದು ಪಾಠಶಾಲೆ. ಇಲ್ಲಿ ಕಲಿಯಬೇಕಾದ್ದು ಬಹಳ ಇದೆ ಎಂದು ತಿಳಿಸಿದರು. ಕಂದಾಯ ಇಲಾಖೆಯಲ್ಲಿ ಪರಿ ವರ್ತನೆ ತರಬೇಕೆಂಬ ಉದ್ದೇಶದಿಂದ ಹಲವು ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳಲಾಗಿದೆ. ಮನೆ ಬಾಗಿಲಿಗೆ ಪಿಂಚಣಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ರೈತರ ಮನೆ ಬಾಗಿಲಿಗೆ ದಾಖಲೆ ಹೀಗೆ ಹಲವು ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲ ಬಡವರಿಗೂ ಪಿಂಚಣಿ ಹಾಗೂ ಸರ್ಕಾರದ ಸವಲತ್ತು ತಲುಪು ವಂತೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ 72 ಗಂಟೆಗಳಲ್ಲಿ ಪಿಂಚಣಿ ಮಂಜೂರು ಮಾಡ ಲಾಗುತ್ತಿದೆ. ರಾಜ್ಯದಲ್ಲಿ ಯಾರೂ ಪಿಂಚಣಿ ಗಾಗಿ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡಬಾರದು ಎಂದು ತಿಳಿಸಿದರು.
ಇಂದು ರಾಜ್ಯದ 31 ಜಿಲ್ಲೆಗಳ 200 ಕಡೆ ಗ್ರಾಮ ವಾಸ್ತವ್ಯ ನಡೆದಿದೆ. ಗ್ರಾಮ ವಾಸ್ತವ್ಯದಿಂದ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಇಲ್ಲಿ 5331 ಫಲಾನುಭವಿಗಳಿಗೆ ವಿವಿಧ ಸವಲತ್ತು ನೀಡಲಾಗಿದೆ ಎಂದು ಹೇಳಿದರು.
ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಮಾಯಸಂದ್ರಕ್ಕೆ ಆಗಮಿಸಿದ ಕಂದಾಯ ಮಂತ್ರಿ ಅಶೋಕ್ ಅವರನ್ನು ಶಾಸಕ ಜಯರಾಮ್ ಹಾಗೂ ನೂತನ ಸಂಸದ ಜಗ್ಗೇಶ್ ಹೂಗುಚ್ಚ ನೀಡಿ ಸ್ವಾಗತಿಸಿ ನೂರಾರು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.
ಮಂತ್ರಿಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ರಾತ್ರಿ ಸಚಿವರು ಮಾಯಸಂದ್ರ ಟಿ.ಬಿ. ಕ್ರಾಸ್‌ನ ಕಲ್ಪತರು ಆಶ್ರಮದಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಗ್ಗಿನ ಉಪಹಾರ ದಲಿತ ಸಮುದಾಯದ ನವೀನ್ ಎಂಬುವರ ಮನೆಯಲ್ಲಿ ಸೇವಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.