Advertisement

ಉತ್ಪಾದಕರಿಗೆ ಪ್ರತೀ ಲೀ. ಹಾಲಿಗೆ 0.50 ರೂ. ಹೆಚ್ಚಳ

12:30 AM Mar 10, 2019 | |

ಮಂಗಳೂರು: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಸದಸ್ಯರಿಗೆ ಮಾ. 8ರಿಂದ ಮೇ 31ರ ವರೆಗೆ ಪ್ರತಿ ಲೀಟರ್‌ ಹಾಲಿಗೆ 0.50 ರೂ.ಗಳಂತೆ ಪ್ರೋತ್ಸಾಹಧನ ನೀಡಲು ಒಕ್ಕೂಟದ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ.

Advertisement

ಉಭಯ ಜಿಲ್ಲೆಗಳಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ನೀಡುತ್ತಿರುವ ಪ್ರತಿ ಲೀಟರ್‌ ಗುಣಮಟ್ಟದ ಹಾಲಿಗೆ (ಶೇ. 3.5 ಫ್ಯಾಟ್‌ ಮತ್ತು ಶೇ.8.5 ಎಸ್‌ಎನ್‌ಎಫ್‌) 28.67 ರೂ.ಗೆ 0.50 ರೂ. ಹೆಚ್ಚಿಸಿ ಹಾಲಿನ ಪರಿಷ್ಕೃತ ಮೂಲ ಬೆಲೆ 29.17 ರೂ. ಆಗಲಿದೆ ಎಂದು ದ‌.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ತಿಳಿಸಿದ್ದಾರೆ.

ಒಕ್ಕೂಟಕ್ಕೆ ಗುಣಮಟ್ಟದ ಹಾಲಿನ ಆವಶ್ಯಕತೆ ಇದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೇಸಗೆ ಕಾಲದಲ್ಲಿ ತೀವ್ರ ಬಿಸಿಲು ಇರುವುದರಿಂದ ಜಾನುವಾರುಗಳಿಗೆ ಮೇವು ಮತ್ತು ನೀರಿನ ಅಭಾವದಿಂದ ಹಾಲಿನ ಇಳುವರಿಗೆ ತಗಲುವ ಖರ್ಚು ಹೆಚ್ಚಾಗುವುದನ್ನು ಮನಗಂಡು ಪ್ರೋತ್ಸಾಹಧನ ನೀಡಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next