Advertisement

ಪ್ರತಿ ಮನೆ ಮಗು ಯೋಧನಾಗಲಿ: ಸಿದ್ಧಲಿಂಗ ಶ್ರೀ

05:50 AM Mar 11, 2019 | Team Udayavani |

ಯಡ್ರಾಮಿ: ದೇಶದಲ್ಲಿನ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಬೇರೆ ಏನೇ ಆಗಿರಲಿ. ಅವನು ದೇಶ ಕಾಯುವ ಯೋಧನಿಗೆ  ಸಮನಾಗುವುದಿಲ್ಲ. ತನ್ನ ಪ್ರಾಣದ ಹಂಗನ್ನೇ ತೊರೆದು ನಿಸ್ವಾರ್ಥದಿಂದ ಮಾಡುವ ದೇಶದ ರಕ್ಷಣೆ ಕಾರ್ಯ ಶ್ರೇಷ್ಠವಾಗಿದೆ ಎಂದು ಯಡ್ರಾಮಿ ವಿರಕ್ತ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ವಿರಕ್ತ ಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆದರ್ಶ ಪಬ್ಲಿಕ್‌ ಸ್ಕೂಲ್‌ನ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ತಾಯಂದಿರು ಮಕ್ಕಳಿಗೆ ವಿದ್ಯೆ ಜತೆಗೆ ದೇಶಾಭಿಮಾನ ತುಂಬಬೇಕು ಮತ್ತು ದೇಶ ಕಾಯುವ ಯೋಧರ ಪರಿಶ್ರಮದ ಬಗ್ಗೆ ತಿಳಿಸಬೇಕು. ಆವಾಗ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ದೇಶಾಭಿಮಾನ ಬೆಳೆಯುತ್ತದೆ. ಪ್ರತಿ ಮನೆಯಿಂದಲೂ ಒಬ್ಬೊಬ್ಬರು ಯೋಧರಾಗುವಂತೆ ಪಾಲಕರು ಮಕ್ಕಳನ್ನು ಬೆಳೆಸಲಿ ಎಂದು ಹೇಳಿದರು.

ಐಟಿಬಿಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಅಶೋಕ ಹೊಸಮನಿ ಅವರನ್ನು ಸನ್ಮಾನಿಸಿರುವುದು ನಿಜಕ್ಕೂ ಶ್ಲಾಘನಿಯ ಕಾರ್ಯ ಎಂದು ಹೇಳಿದರು. ಆದರ್ಶ ಶಾಲೆ ಮಕ್ಕಳಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯಡ್ರಾಮಿ
ವಿರಕ್ತ ಮಠದ ಹಿರಿಯ ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದರ್ಶ ಪಬ್ಲಿಕ್‌ ಸ್ಕೂಲ್‌ಅಧ್ಯಕ್ಷ ರೇವಣಸಿದ್ದಪ್ಪ ಜಿ. ಅಂಕಲಕೋಟಿ, ಜಿಪಂ ಸದಸ್ಯ ದಂಡಪ್ಪ ಸಾಹು ಕುಳಗೇರಿ, ತಾಪಂ ಸದಸ್ಯ ಪ್ರಶಾಂತ ರಾಠೊಡ, ಗ್ರಾಪಂ ಅಧ್ಯಕ್ಷೆ ಮಂಜುಳಾ ಡಂಬಳ, ಉಪಾಧ್ಯಕ್ಷ ಈರಣ್ಣ ಸುಂಕದ ಪ್ರಮುಖರಾದ ಸಿದ್ದನಗೌಡ ಮಾಲಿಪಾಟೀಲ, ಮಹಾಂತಯ್ಯ ಹಿರೇಮಠ, ದೇವಿಂದ್ರಪ್ಪಗೌಡ ಸರಕಾರ, ರವೀಂದ್ರ ಡಗ್ಗಾ, ನಾಗಣ್ಣ ಹಾಗರಗುಂಡಗಿ, ನಿಂಗನಗೌಡ ಜವಳಗಿ, ಗುರುಬಸಪ್ಪ ಸಾಹು ಸನ್ನಳ್ಳಿ, ಬಸವರಾಜ ದೊಡ್ಡಳ್ಳಿ,
ಶಿವಲಿಂಗ ಸುಂಕದ, ಗೊಲ್ಲಾಳಪ್ಪ ಗೆಜ್ಜಿ, ಬಸವರಾಜ ಲಿಂಗದಳ್ಳಿ, ಶ್ರೀಶೈಲ ರಾಠೊಡ, ಮಹಾಂತಪ್ಪ ಮುಳ್ಳೊಳ್ಳಿ, ಸಿದ್ದನಗೌಡ
ಪಾಟೀಲ ತೆಲಗಬಾಳ, ಖಾಜಾಹುಷೇನಸಾಬ್‌ ಬಾಗವಾನ, ಬಸಯ್ಯಸ್ವಾಮಿ ಕಕ್ಕೇರಾ, ಶಿವಪುತ್ರ ನೆಲ್ಲಗಿ ಇದ್ದರು. ಆದರ್ಶ ಸ್ಕೂಲ್‌ ಶಿಕ್ಷಕಿ ಇಂದುಮತಿ ಕುಂದಾಪುರ ಸ್ವಾಗತಿಸಿದರು. ಶಿಕ್ಷಕ ದಸ್ತಗೀರ ಚೌದ್ರಿ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next