Advertisement

ಪ್ರತಿಯೊಬ್ಬ ರೈತನೂ ಸತ್ಯಾಗ್ರಹಿ: ಈ ಚಳುವಳಿಯಿಂದ ಅವರ ಹಕ್ಕುಗಳು ಮರಳಿ ಸಿಗುತ್ತವೆ: ರಾಹುಲ್

08:37 PM Jan 03, 2021 | Team Udayavani |

ನವದೆಹಲಿ: ಕೇಂದ್ರದ ನೂತನ  ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ ರೈತ ಚಳುವಳಿಯ ಕುರಿತಾಗಿ ದನಿ ಎತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ರೈತ ಚಳುವಳಿಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ರೈತನೂ ಸತ್ಯಾಗ್ರಹಿ’ ಎಂದು ಹೇಳಿಕೆ ನೀಡಿದ್ದಾರೆ.

Advertisement

ಪಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿಯನ್ನು ಬೆಂಬಲಿಸಿರುವ ರಾಹುಲ್, ಈ ಸಂದರ್ಭವನ್ನು ಬ್ರಿಟೀಷರ ಕಾಲದ ಚಂಪಾರಣ್ ಹೋರಾಟಕ್ಕೆ ಹೋಲಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ಟೀಟ್ ಮಾಡಿರುವ ಅವರು, ದೇಶ ಸದ್ಯ ಬ್ರಿಟೀಷರ ಕಾಲದಲ್ಲಿದ್ದ  ಚಂಪಾರಣ್ ಹೋರಾಟದ ಪರಿಸ್ಥಿತಿಯಲ್ಲಿದೆ. ಅಂದಿನ ಕಾಲದಲ್ಲಿ ಬ್ರಿಟೀಷರು ಕಂಪನಿ ಬಹಾದ್ದೂರ್ ಗಳಾಗಿದ್ದರು. ಆದರೆ ಈಗ ಪ್ರಧಾನಿ ಮೋದಿ ಮತ್ತವರ ಗೆಳೆಯರು ಬಹಾದ್ದೂರ್ ಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಜೈಲಿನಲ್ಲಿದ್ದ ಬಾಲಕಿ ಸಾವು ಪ್ರಕರಣ: ರಸ್ತೆಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

ಈ ಚಳುವಳಿಯಲ್ಲಿ ರೈತರಿಗೆ ಅವರ ಹಕ್ಕುಗಳು ಮತ್ತೆ ಮರಳಿ ಸಿಗುತ್ತದೆ ಎಂದಿರುವ ರಾಹುಲ್ ಗಾಂಧಿ, 1917 ರಲ್ಲಿ ಬಿಹಾರದ ಚಂಪಾರಣ್ ನಲ್ಲಿ ಆರಂಭಗೊಂಡಿದ್ದ ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದ ರೈತರ ಹೋರಾಟವನ್ನು ನೆನಪಿಸಿಕೊಂಡು ಈ ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿತ್ತು. ಇದರ ನೇತೃತ್ವವನ್ನು ಮಹಾತ್ಮಾ‍ಗಾಂಧಿ ಅವರು ವಹಿಸಿಕೊಂಡಿದ್ದರು ಎಂದು ಹೇಳಿದರು.

Advertisement

ಪ್ರಸ್ತುತ ರೈತ ಮಸೂದೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ  ಚಳುವಳಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಈ ಕಾಯ್ದೆಯನ್ನು ರದ್ದುಗೊಳಿಸಬೇಂದು ಕೆಂದ್ರಕ್ಕೆ ಒತ್ತಾಯ ಹೇರಿದೆ.

ಇದನ್ನೂ ಓದಿ:ಕೇಂದ್ರ ಸಚಿವ ಸದಾನಂದ ಗೌಡ ಅಸ್ವಸ್ಥ: ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್ ಗೆ ಸಿದ್ದತೆ

Advertisement

Udayavani is now on Telegram. Click here to join our channel and stay updated with the latest news.

Next