Advertisement

‘ಎವೆರಿ ಡೆ ಈಸ್ ನಾಟ್ ಸಂಡೆ’ ಕೆ.ಆರ್ ಪೇಟೆಯಂತೆ ಶಿರಾದಲ್ಲಿ ಕಮಲ ಅರಳಿಸಲಾಗದು: ಕುಮಾರಸ್ವಾಮಿ

04:21 PM Oct 21, 2020 | keerthan |

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಹಣಬಲದ ಮೂಲಕ ಗೆಲುವು ಸಾಧಿಸಲು ಬಿಜೆಪಿ ಹೊರಟಿದೆ. ಆದರೆ ಶಿರಾದಲ್ಲಿ ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಹಣಬಲದಿಂದ ಶಿರಾದಲ್ಲಿ ಗೆಲ್ಲಲು ಆಗಲ್ಲ. ಹಣಬಲದಿಂದ ಗೆಲ್ಲುತ್ತೇವೆ ಅನ್ನೋದು ಭ್ರಮೆ. ಕೆ.ಆರ್ ಪೇಟೆಯಲ್ಲಿ ಕಮಲ ಅರಳಿಸಿದಂತೆ ಶಿರಾದಲ್ಲಿ ಕಮಲ ಅರಳಿಸಲು ಆಗಲ್ಲ. ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ವ್ಯತ್ಯಾಸವಿದೆ. ‘ಎವರಿ ಡೇ ಈಸ್ ನಾಟ್ ಸಂಡೆ’ ಎಂದು ಹೇಳಿದರು.

ನಳೀನ್ ಕುಮಾರ್ ಕಟೀಲ್ ಗೆ ಘನತೆಯೇ ಇಲ್ಲ. ಸಿಎಂ ಆಗಿದ್ದಾಗ ಹೇಗಿದ್ದೆ ಎಂದು ಜನತೆಗೆ ಗೊತ್ತು. ನನ್ನಷ್ಟು ಜನಸಾಮಾನ್ಯರಿಗೆ ಸಿಗುವವವರು ಯಾರು ಇಲ್ಲ. ಅಧಿಕಾರ ಇಲ್ಲದಿದ್ದರೂ ಜನ ನಮ್ಮ ಮನೆಗೆ ಬರುತ್ತಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಎಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next