ಮೈಸೂರು: ಪೋಷಕರು ತಮ್ಮ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪೋ›ತ್ಸಾಹಿಸುವ ಜತೆಗೆ ಪ್ರತಿಯೊಂದು ವಿಷಯದ ಕುರಿತು ಸಮಾಧಾನದಿಂದ ಕಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉದಯವಾಣಿ ಪತ್ರಿಕೆಯ ಮ್ಯಾಗಜಿ‚ನ್ ವಿಭಾಗದ ಅಂಕಣಕಾರ ಎ.ಆರ್. ಮಣಿಕಾಂತ್ ಹೇಳಿದರು. ನಗರದ ಮಾನಸಗಂಗೋತ್ರಿಯ ಅಖೀಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಬುಧವಾರ ಆಯುಷ್‌ನ ಪಂಚವಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೇ ಮಸ್ತಿ ಶೀರ್ಷಿಕೆಯ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿನ ಬಗ್ಗೆ ಸಾಕಷ್ಟು ಕನಸು ಹೊಂದಿದ್ದು, ಮಕ್ಕಳು ಮಾತನಾಡುತ್ತಿದ್ದಂತೆ ಸಂತಸಗೊಳ್ಳುತ್ತಾರೆ. ಆದರೆ ಕೆಲವು ಸಂದಭ ìಗಳಲ್ಲಿ ಮಕ್ಕಳು ಮಾತನಾಡದಿದ್ದಲ್ಲಿ ಪೋಷಕರಲ್ಲಿ ಆತಂಕ ಮೂಡಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಆತಂಕಗೊಳ್ಳದೆ ಆಯುಷ್‌ನಂಹತ ಸಂಸ್ಥೆಗಳಿಗೆ ಕರೆತಂದು ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದರು.
ಕೆಲವೊಮ್ಮೆ ಮಾತು ಬಾರದ ಮಗು ಏನಾಗುತ್ತದೆ ಎಂಬ ಆತಂಕ ಪೋಷಕರಲ್ಲಿರುತ್ತದೆ. ಆದರೆ ಪ್ರತಿಯೊಬ್ಬ ಮಗು ಸಹ ತಮ್ಮದೇ ಆದ ಪ್ರತಿಭೆ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪೋ›ತ್ಸಾಹಿಸಬೇಕು. ಜತೆಗೆ ಎಲ್ಲಾ ವಿಷಯಗಳನ್ನು ಅತ್ಯಂತ ತಾಳ್ಮೆಯಿಂದ ಕಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪುಟ್ಟ ಮಕ್ಕಳಲ್ಲಿ ಯಾವುದೇ ಕೆಟ್ಟ ಮನೋಭಾವ ಇರುವುದಿಲ್ಲ ಎಂದರು.
ಸಮಾರೋಪ ಅಂಗವಾಗಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿಶೇಷ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅದರಂತೆ ಯೋಗ ಮತ್ತು ದೈಹಿಕ ವ್ಯಾಯಾಮ, ಗೀತ ಗಾಯನ, ನೃತ್ಯ ಪ್ರದರ್ಶನದ ಜತೆಗೆ ನೀಲಿ ಕುದುರೆ ನಾಟಕ ಪ್ರದರ್ಶನ ನಡೆಯಿತು. ಆಯುಷ್ ನಿರ್ದೇಶಕಿ ಪೊ›.ಎಸ್.ಆರ್.ಸಾವಿತ್ರಿ, ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ.ಎಂ.ಪುಷ್ಪಾವತಿ ಸೇರಿದಂತೆ ಇನ್ನಿತರರು ಹಾಜರಿದ್ದರು.