Advertisement

ಪ್ರತಿ 15 ದಿನಕ್ಕೊಂದು ಬಡವರ ಪರ ಯೋಜನೆ ಜಾರಿಗೆ ತಂದಿದ್ದೇವೆ: ಪ್ರಹ್ಲಾದ್ ಜೋಶಿ

12:31 PM Jul 10, 2022 | Team Udayavani |

ಬೆಂಗಳೂರು: ದೇಶದಲ್ಲಿ ಹಿಂದೆ ಆಳ್ವಿಕೆ ಮಾಡಿದ ಕೇಂದ್ರ ಸರ್ಕಾರಗಳು ಬಡವರ ಬಗ್ಗೆ ಮಾತನಾಡುತ್ತಿದ್ದರು. ಆದರೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ.  ಅವರಿಗೆ ಯಾವುದೇ ಯೋಜನೆ ಜಾರಿಗೆ ತರಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಇ ಶ್ರಮ ಕಾರ್ಡ್ ಮಾಡಿದ್ದೇವೆ. ದೇಶದಲ್ಲಿ 28 ಕೋಟಿ ಕಾರ್ಡ್ ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Advertisement

ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಒಂದು ನೇಷನ್ ಒಂದು ಕಾರ್ಡ್ ಯೋಜನೆಯಿಂದ ನಗರ ಪ್ರದೇಶಗಳಿಗೆ ಬರುವ ಕಾರ್ಮಿಕರಿಗೆ ಯಾವ ನಗರಕ್ಕೆ ಹೋದರೂ ರೇಷನ್ ಸಿಗುತ್ತದೆ. ಸ್ವವ್ಯಾಪಾರ ಮಾಡಲು ಸ್ವನಿಧಿ ಯೋಜನೆ ಮೂಲಕ 10 ಸಾವಿರ ರೂ. ನೀಡಲಾಗುವುದು. ನಮ್ಮ ಸರ್ಕಾರ ಪ್ರತಿ 15 ದಿನಕ್ಕೊಂದು ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.

ನಾವು ಇದುವರೆಗೂ 2 ಬಿಲಿಯನ್ ಜನರಿಗೆ ಕೋವಿಡ್ ಲಸಿಕೆ ನೀಡಿದ್ದೇವೆ. ಇದನ್ನು ನಾನು ಆಸ್ಟ್ರೇಲಿಯಾಕ್ಕೆ ಹೋದಾಗ ಹೇಳಿದ್ದೆ ಅಲ್ಲಿನ ಸಚಿವರು ಆಶ್ಚರ್ಯದಿಂದ ಕೇಳಿದರು ಎಂದು ಜೋಶಿ ಹೇಳಿದರು.

ಕಾಂಗ್ರೆಸ್ ನವರು ಬಿಜೆಪಿಯವರಿಗೆ ಉಗ್ರರ ನಂಟಿದೆ ಅಂತ ಹೇಳುತ್ತಾರೆ. ಬಾಟ್ಲಾ ಹಗರಣದಲ್ಲಿ ಉಗ್ರನ ಹತ್ಯೆಯಾದಾಗ ಸೋನಿಯಾ ಗಾಂಧಿ ರಾತ್ರಿಯಿಡೀ ಕಣ್ಣೀರು ಹಾಕಿದ್ದರು. ಇದು ಇವರ ಬದ್ದತೆ. ಆರ್ಟಿಕಲ್ 370 ಕಾಯ್ದೆ ರದ್ದು ಪಡಿಸಿದ್ದರಿಂದ ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ನಡೆಯುತ್ತಿಲ್ಲ. ನಮ್ಮ ಸರ್ಕಾರದ ಬಗ್ಗೆ ಯಾವುದೇ ಭ್ರಷ್ಟಾಚಾರದ ಹಗರಣ ಇಲ್ಲದಿರುವುದರಿಂದ ಜನರ ಗಮನ ಸೆಳೆಯಲು ಈ ರೀತಿಯ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಕಾಣಿಯೂರು: ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ಪತ್ತೆ!; ಕಾರ್ಯಾಚರಣೆ ವೇಳೆ ಲಾಠಿಚಾರ್ಜ್

Advertisement

ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಮರಳಿ ಬರುತ್ತಿರುವುದರಿಂದ ಅವರಿಗೆ ಏನು ಮಾಡಲಾಗುತ್ತಿಲ್ಲ. ಯುಪಿ ಯಲ್ಲಿ ಯೋಗಿ ಸರ್ಕಾರ ಮರಳಿ ಬಂದಿದೆ. ರಾಜ್ಯದಲ್ಲಿ ಬೊಮ್ಮಾಯಿ ನೇತೃತತ್ವದ ಸರ್ಕಾರ ಮೋದಿ ಮಾರ್ಗದರ್ಶನದಲ್ಲಿ ಚೆನ್ನಾಗಿ ನಡೆಯುತ್ತಿದೆ. ಕಾಂಗ್ರೆಸ್ ನವರು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದೆ. ಸಿದ್ದರಾಮಯ್ಯ ಅವರಂತೂ ಸುಳ್ಳಿನ ಫ್ಯಾಕ್ಟರಿ ತೆಗೆದಿದ್ದಾರೆ. ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಅಂತ್ಯೋತ್ಸವ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೋಶಿ ಟೀಕೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next