Advertisement

ಎವರ್‌ಗ್ರೀನ್‌ ಖಾದಿ ಫ್ಯಾಷನ್‌

06:00 AM Jul 13, 2018 | |

ಕಾಲಕ್ಕೆ ತಕ್ಕಂತೆ ನಮ್ಮ ದಿರಿಸು ಬದಲಾಗುತ್ತಿರುತ್ತದೆ. ಹೊಸ ಮಾದರಿಯ ಫ್ಯಾಶನೇಬಲ್‌ ಬಟ್ಟೆ ತೊಡಲು ಹೆಚ್ಚು ಇಷ್ಟ ಪಡುತ್ತೇವೆ. ತುಂಬಾ ಬೆಲೆ ಕೊಟ್ಟು ತಂದು ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಮತ್ತೂಂದು ಹೊಸ ಫ್ಯಾಷನ್‌ ಬಂದಿರುತ್ತದೆ. ಅಷ್ಟರಲ್ಲಿ ನಾವು ಕೊಂಡುಕೊಂಡಿದ್ದ ಬಟ್ಟೆ ಔಟ್‌ ಆಫ್ ಫ್ಯಾಷನ್‌ ಆಗಿ ಬಿಟ್ಟಿರುತ್ತದೆ. ಆದರೆ ಕೆಲವೊಂದು ಬಟ್ಟೆಗಳಿವೆ ಅವು ಯಾವತ್ತಿಗೂ ಔಟ್‌ ಡೇಟೆಡ್‌ ಫ್ಯಾಷನ್‌ ಅಂತ ಆಗುವುದೇ ಇಲ್ಲ. ಅಂತಹ ಬಟ್ಟೆಗಳೆಂದರೆ ನಮ್ಮ ಸಂಸ್ಕೃತಿಯ ಬಟ್ಟೆಗಳಾದ ರೇಷ್ಮೆ ಮತ್ತು ಖಾದಿ. ಇದರಲ್ಲಿ ರೇಷ್ಮೆ  ಸಿರಿವಂತಿಕೆಯ ಬಟ್ಟೆ ಆದರೆ ಖಾದಿ ಎಲ್ಲಾ ವರ್ಗಗಳಿಗೂ ಒಪ್ಪುವಂತಹ ಬಟ್ಟೆಯಾಗಿದೆ. ಆದ್ದರಿಂದಲೇ ಸ್ವತಂತ್ರಪೂರ್ವದಿಂದಲೂ ಜನಪ್ರಿಯವಾಗಿರುವ ಖಾದಿ ಬಟ್ಟೆ ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಈಗ ಖಾದಿ ಬಟ್ಟೆಯ ಕುರ್ತಾ, ಸ್ಯಾರಿ- ಹೀಗೆ ಅನೇಕ ವಿನ್ಯಾಸದ ಬಟ್ಟೆಗಳು ದೊರೆಯುತ್ತಿದ್ದು ಸಾಮಾನ್ಯ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲೂ ಈ ಬಟ್ಟೆಗಳು ದೊರೆಯುತ್ತದೆ. 

Advertisement

ಖಾದಿ ಸಾರಿ
    ಖಾದಿ ಸಾರಿಯು ಸಾಮಾನ್ಯ ಮಹಿಳೆಯರು ಮಾತ್ರವಲ್ಲದೆ ಸೆಲೆಬ್ರೆಟಿಯವರೆಗೂ ಅಚ್ಚುಮೆಚ್ಚಿನ ಉಡುಗೆಯಾಗಿದೆ. ಖಾದಿ ಸಾರಿ ಉಟ್ಟು ಹಣೆಗೆ ಒಂದು ಬೊಟ್ಟು , ಕೊಲಾಪುರಿ ಚಪ್ಪಲ್‌ ಧರಿಸಿದರೆ ಇದು ನಿಮಗೆ ಮಾರ್ಡನ್‌ ಲುಕ್‌ ಜೊತೆ ತುಂಬಾ ಪ್ರೊಫೆಷನಲ್‌ ಲುಕ್‌ ಕೂಡ ನೀಡುತ್ತದೆ. ಈ ಸಾರಿಗಳು ಈಗ ಕೇವಲ ಪ್ಲೆ„ನ್‌ ಆಗಿ ಉಳಿಯದೆ ಇವುಗಳ ಬಾರ್ಡರ್‌, ಕಸೂತಿಗಳ ಮೂಲಕ ಹೊಸ ಲುಕ್‌ ನೀಡಿ ಇನ್ನೂ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. 

ಖಾದಿ ದುಪ್ಪಟ್ಟಾ
    ಖಾದಿ ದುಪ್ಪಟ್ಟಾ ಈಗ ಲೇಟೆಸ್ಟ್‌  ಫ್ಯಾಷನ್‌. ಈ ದುಪ್ಪಟ್ಟಾವನ್ನು ಜೀನ್ಸ್‌ ಮತ್ತು ಟೀಶರ್ಟ್‌ ಜೊತೆ ನಿಮಗೆ ಇಷ್ಟ ಬಂದ ರೀತಿಯಲ್ಲಿ ಧರಿಸಿದರೆ ಒಳ್ಳೆಯ ಲುಕ್‌ ನೀಡುತ್ತದೆ. ಇದಕ್ಕೆ ಮ್ಯಾಚಿಂಗ್‌ ಶಾಲ್‌ಗ‌ಳ ಅಗತ್ಯವಿಲ್ಲ. 

ಖಾದಿ ಟಾಪ್‌
    ಖಾದಿ ಟಾಪ್‌ನಲ್ಲಿ ಸಿಂಪಲ್‌ ಟಾಪ್‌ನಿಂದ ಹಿಡಿದು ಆಕರ್ಷಕ ವಿನ್ಯಾಸದ ಟಾಪ್‌ವರೆಗೂ ಲಭ್ಯವಿದೆ. ಖಾದಿಯಲ್ಲೂ ಅನೇಕ ವಿಧಗಳಿವೆ. ಫ್ಯಾಬ್ರಿಕ್‌ ಮಿಶ್ರಿತ ಖಾದಿ, ಶುದ್ಧ ಖಾದಿ ಬಟ್ಟೆ ಹೀಗೆ ಅನೇಕ ವಿಧಗಳಲ್ಲಿ ಟಾಪ್‌ಗ್ಳು ಲಭ್ಯವಿದೆ. ಜೀನ್ಸ್‌ ಪ್ಯಾಂಟ್‌ ಮತ್ತು ಖಾದಿ ಟಾಪ್‌ ಉತ್ತಮ ಕಾಂಬಿನೇಷನ್‌.

ಖಾದಿ ಚೂಡಿದಾರ್‌
    ಖಾದಿ ಚೂಡಿದಾರ್‌ಗಳು ಈಗ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇದಕ್ಕೆ ಬಿಳಿ ದುಪ್ಪಟ್ಟಾ ಮತ್ತು ಬಿಳಿ ಬಣ್ಣದ ಬಾಟಮ್‌ ಸುಂದರವಾಗಿ ಕಾಣುತ್ತದೆ. ವಿವಿಧ ಕಸೂತಿ ಕೆಲಸವನ್ನು ಖಾದಿ ಬಟ್ಟೆ ಮೇಲೆ ಮಾಡಿರುವ ಚೂಡಿದಾರ್‌ಗಳು ಈಗಿನ ಹೊಸ ಟ್ರೆಂಡ್‌.
ಖಾದಿ ಪರ್ಸ್‌ ಮತ್ತು ಬ್ಯಾಗ್‌

Advertisement

    ಖಾದಿ ಬಟ್ಟೆ ಧರಿಸಿ ಖಾದಿ ಬ್ಯಾಗ್‌ ಮತ್ತು ಪರ್ಸ್‌ ಕೈಯಲ್ಲಿ ಹಿಡಿದರೆ ಮತ್ತಷ್ಟು ಫ್ಯಾಶನೇಬಲ್‌ ಆಗಿ ಕಾಣಬಹುದು. ಈ ಬ್ಯಾಗ್‌ ಮತ್ತು ಪರ್ಸ್‌ಗಳು ಎಲ್ಲಾ ವಯೋಮಾನದ ಮಹಿಳೆಯರಿಗೆ ಮೆಚ್ಚುತ್ತದೆ.

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next