Advertisement
ಎಂಡಿಎಚ್‌ನ ಮದ್ರಾಸ್ ಕರಿ ಪೌಡರ್, ಮಿಕ್ಸೆಡ್ ಮಸಾಲಾ ಪೌಡರ್ ಮತ್ತು ಸಾಂಬಾರ್ ಮಸಾಲ ಹಾಗೂ ಎವೆರೆಸ್ಟ್‌ನ ಫಿಶ್ ಕರಿ ಮಸಾಲಾದಲ್ಲಿ ಎಥೈಲೀನ್ ಆಕ್ಸೆ„ಡ್ ಪತ್ತೆಯಾಗಿರುವುದಾಗಿ ಎ.5ರಂದು ಸೆಂಟರ್ ಫಾರ್ ಫುಡ್ ಸೇಫ್ಟಿ(ಸಿಎಫ್ಎಸ್) ಘೋಷಿ ಸಿತ್ತು. ಇದು ಕ್ಯಾನ್ಸರ್ ಕಾರಕ ಎಂದು ವರ್ಗಿಕರಿಸಲಾದ ಕೀಟನಾಶಕವಾಗಿದೆ. ಇದು ಮಾನವರು ಬಳಸಲು ಯೋಗ್ಯ ವಲ್ಲ ಎಂದು ಹೇಳಿತ್ತು. ಈಗ ಈ 4 ಮಸಾಲಾ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಹಾಕಾಂಗ್ ನಿಷೇಧ ಹೇರಿದೆ. ಜತೆಗೆ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.ಗುಣಮಟ್ಟ ಪರೀಕ್ಷೆ ಆರಂಭ?: ಈ ಬೆಳವಣಿಗೆ ಬೆನ್ನಲ್ಲೇ ಭಾರತದ ಆಹಾರ ಸುರಕ್ಷ ಪ್ರಾಧಿಕಾರ ಎವರೆಸ್ಟ್,
ಎಂಡಿಎಚ್ ಸೇರಿ ದೇಶದಲ್ಲಿ ಮಾರಾಟವಾಗುತ್ತಿರುವ ಎಲ್ಲ ಬ್ರ್ಯಾಂಡ್‌ಗಳ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆ ನಡೆಸಲು ಮುಂದಾಗಿದೆ.