Advertisement

Everest Hill: ನೀರ್ಗಲ್ಲು ಸರೋವರದಲ್ಲಿ ಪ್ರವಾಹ: ಗ್ರಾಮವೇ ನಾಶ!

12:47 AM Aug 19, 2024 | Team Udayavani |

ಕಠ್ಮಂಡು: ಎವರೆಸ್ಟ್‌ ಶಿಖರದ ತಪ್ಪಲಿನ ಲ್ಲಿದ್ದ ಗ್ರಾಮವೊಂದು ನೀರ್ಗಲ್ಲು ಸರೋ ವರದಲ್ಲಿ ಉಂಟಾದ ಪ್ರವಾಹದಿಂದಾಗಿ ನಿರ್ನಾ ಮ ಗೊಂಡ ಘಟನೆ ನೇಪಾಲದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಸಾವು ಸಂಭವಿಸಿರುವ ಬಗ್ಗೆ ವರದಿಗಳಾಗಿಲ್ಲವಾದರೂ ಓರ್ವ ಕಾಣೆಯಾಗಿದ್ದಾನೆ ಎನ್ನಲಾಗಿದೆ.

Advertisement

ನೀರ್ಗಲ್ಲು ಸರೋವರದಲ್ಲಿ ಉಂಟಾದ ಪ್ರವಾಹದಿಂದಾಗಿ ದೊಡ್ಡ ಗಾತ್ರದ ಬಂಡೆಗಳು ಕುಸಿದು ಬಿದ್ದಿದ್ದು, ಥಾಮೆ ಗ್ರಾಮದಲ್ಲಿದ್ದ ಅರ್ಧಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಸೈನ್ಯಾಧಿ ಕಾರಿಗಳು ಮತ್ತು ವಿಜ್ಞಾನಿಗಳು ತಿಳಿಸಿ ದ್ದಾರೆ. ಘಟನೆಯಲ್ಲಿ ಸಿಲುಕಿಕೊಂಡಿದ್ದ 93 ಗ್ರಾಮಸ್ಥರನ್ನು ರಕ್ಷಿಸಲಾಗಿದೆ. ಇವರಿಗೆ ಸೇನೆಯ ಕ್ಯಾಂಪ್‌ಗ್ಳಲ್ಲಿ ಪರ್ಯಾಯ ವ್ಯವಸ್ಥೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಜ್ಞರಿಂದ ಸರ್ವೇಕ್ಷಣೆ: ಪ್ರವಾಹಪೀಡಿತ ಪ್ರದೇಶವನ್ನು ಹೆಲಿಕಾಪ್ಟರ್‌ ಮೂಲಕ ತಜ್ಞರು ಪರಿಶೀಲನೆ ನಡೆಸಿದ್ದಾರೆ. ತತ್‌ಕ್ಷ ಣದ ಪ್ರವಾಹಕ್ಕೆ ಕಾರಣವೇನಾಗಿರಬ ಹುದು ಎಂದು ಪರಿಶೀಲನೆ ನಡೆಸಲಾ ಗಿದೆ. ನೀರ್ಗಲ್ಲುಗಳು ಕರಗುವ ಕಾರಣ ಇಂತಹ ಸರೋವರಗಳಲ್ಲಿ ಪ್ರವಾಹ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಪ್ರದೇಶ ಆಪ ಶೆರ್ಪಾ, ಕಮಿ ರಿಟಾ ಶೆರ್ಪಾ ಮತ್ತು ರಿಟಾ ಶೆರ್ಪಾ ಅವರ ತವರು ಪ್ರದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next