Advertisement
ಕಾರಣಗಳು ಹಲವುಹಾವೇರಿ ಜಿಲ್ಲೆಯಲ್ಲಿ ಹೆಚ್ಚಾಗಿ ಬಡತನ, ಅನಕ್ಷರತೆ, ಕುಟುಂಬದ ಆಸ್ತಿಯನ್ನು ಕುಟುಂಬಸ್ಥರಲ್ಲಿಯೇ ಉಳಿಸಿಕೊಳ್ಳಲು, ವೃದ್ಧರ ಹಾಗೂ ಅನಾರೋಗ್ಯ ಪೀಡಿತರ ಆಸೆ ಈಡೇರಿಸುವ ಉದ್ದೇಶ, ದೊಡ್ಡ ಮಗಳೊಂದಿಗೆ ಸಣ್ಣ ಮಗಳ ಮದುವೆಯನ್ನೂ ಮಾಡಿದರೆ ಖರ್ಚು ಕಡಿಮೆ ಆಗುತ್ತದೆ ಎಂಬ ಭಾವನೆ, ಬೆಳೆದು ನಿಂತ ಹೆಣ್ಣುಮಗುವನ್ನು ರಕ್ಷಿಸಿಕೊಳ್ಳಲಾಗದ ಆತಂಕ ಸೇರಿ ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗುತ್ತಿವೆ.
ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಹೆತ್ತವರನ್ನು ಕಳೆದು ಕೊಂಡು ತಬ್ಬಲಿಯಾಗಿದ್ದ ಬಾಲಕಿ ದೊಡ್ಡಮ್ಮಳ ಆಶ್ರಯ ದಲ್ಲಿದ್ದಳು. ಆಕೆಯ ದೊಡ್ಡಮ್ಮಳಿಗೆ ವಯಸ್ಸಾಗಿದ್ದರಿಂದ ಬಾಲಕಿಗೆ ಮದುವೆ ಮಾಡಿಕೊಟ್ಟು, ಜವಾಬ್ದಾರಿಯಿಂದ ಮುಕ್ತರಾಗಬೇಕೆಂದು ನಿರ್ಧರಿಸಿ ಪರಿಚಿತರ ಯುವಕ ನೊಂದಿಗೆ ಮದುವೆ ಗೊತ್ತು ಮಾಡಲಾಗಿತ್ತು. ಈ ಕುರಿತು ಮಾಹಿತಿ ಪಡೆದಿದ್ದ ಅಧಿ ಕಾರಿಗಳು ಸ್ಥಳಕ್ಕೆ ತೆರಳುವಷ್ಟರಲ್ಲಿ ಮದುವೆ ಶಾಸ್ತ್ರ ಮುಗಿದಿತ್ತು! ಕದ್ದು ಮುಚ್ಚಿ ಮದುವೆ
ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದಲ್ಲಿ ಕೆಲ ತಿಂಗಳಿಂದ ಹೆಚ್ಚು ಬಾಲ್ಯ ವಿವಾಹ ನಡೆಯುತ್ತಿವೆ. ಕದ್ದು ಮುಚ್ಚಿ ಮದುವೆ ಮಾಡುತ್ತಿರುವುದು ಈಚೆಗೆ ಬೆಳಕಿಗೆ ಬಂದಿದೆ. ಈ ಹಿಂದೆ ಹೈಸ್ಕೂಲ್ ಪೂರೈಸಿ ಕಾಲೇಜು ಮೆಟ್ಟಿಲು ಹತ್ತಿದ್ದ ಇಬ್ಬರು ಅಪ್ರಾಪೆ¤ ಯರು, ಯುವಕರನ್ನು ಪ್ರೀತಿಸಿ ಓಡಿ ಹೋದ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಮಕ್ಕಳನ್ನು ಕಾಲೇಜಿಗೆ ಕಳಿಸುವ ಬದಲು ಮದುವೆ ಮಾಡಿದರೆ ಅವರ ಗಂಡನ ಮನೆ ಯಲ್ಲಿ ನೆಮ್ಮದಿಯಿಂದ ಇರುತ್ತಾಳೆಂಬ ಧೋರಣೆ ಬಂದಿದೆ.
Related Articles
ಅಪ್ರಾಪ್ತ ವಯಸ್ಸಿನಲ್ಲೇ ಪ್ರೀತಿ ಬಲೆಗೆ ಬಿದ್ದಿದ್ದ ಯುವತಿಯ ಪೋಷಕರು (ಓರ್ವ ಜನಪ್ರತಿನಿಧಿ) ಮರ್ಯಾದೆಗೆ ಅಂಜಿ ಅವಸರದಲ್ಲಿ ಮದುವೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ದಾಖಲಾಗಿ ಕಾನೂನಾತ್ಮಕವಾಗಿ ಇವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ಎಲ್ಲ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದ ಇವರ ಸ್ನೇಹಿತ ಹಾಗೂ ಅದೇ ಊರಿನ ಮತ್ತೂಬ್ಬ ಜನಪ್ರತಿನಿ ಧಿ ತನ್ನ ಮಗಳ ಪ್ರೀತಿಯ ವಿಷಯ ತಿಳಿದು ತಾನೂ ಬಾಲ್ಯವಿವಾಹ ಮಾಡಿದ್ದಾರೆ.
Advertisement
ಬಡತನವೇ ಮುಖ್ಯ ಕಾರಣ!ಬಾಲ್ಯವಿವಾಹಗಳಿಗೆ ಬಡತನವೇ ಮುಖ್ಯ ಕಾರಣ ಎಂಬುದು ರಾಯಚೂರು ಜಿಲ್ಲೆಯ ಅಧಿ ಕಾರಿಗಳ ವಿಶ್ಲೇಷಣೆ. ಹೆಣ್ಣು ಹೆತ್ತ ಪಾಲಕರು ಹೆಣ್ಣು ಮಕ್ಕಳು ವಯಸ್ಸಿಗೆ ಬಂದ ಒಂದೆರಡು ವರ್ಷ ದಲ್ಲೇ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಬಹುತೇಕ ಹಳ್ಳಿಗಳಲ್ಲಿ ಮಕ್ಕಳು ಹೆಚ್ಚಿನ ವ್ಯಾಸಂಗಕ್ಕೆ ಅಕ್ಕಪಕ್ಕದ ಊರುಗಳಿಗೆ ಹೋಗ ಬೇಕು. ಬೇರೆ ಊರಿಗೆ ಓದಲು ಕಳುಹಿಸದೆ ಮದುವೆ ಮಾಡುತ್ತಿ ದ್ದಾರೆ. ಹಲವೆಡೆ ಮನೆಯಲ್ಲಿನ ವೃದ್ಧರ ಒತ್ತಾಯಕ್ಕೆ ಮಣಿದು, ಸಂಬಂಧಿ ಕರಲ್ಲೇ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಚಿನ್ನ , ಹಣದ ಆಮಿಷ
ವಿಜಯಪುರ ಜಿಲ್ಲೆ ಸಿಂದಗಿ ಮೂಲದ 14 ವರ್ಷದ ಬಾಲಕಿಯನ್ನು ಒಂದು ಕಣ್ಣಿಲ್ಲದ 40 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆದಿತ್ತು. ಪತಿಯಿಂದ ದೂರವಾಗಿದ್ದ ಮಹಿಳೆ ತನ್ನ ಮೂರು ಹೆಣ್ಣುಮಕ್ಕಳನ್ನು ಸಾಕುವಲ್ಲಿ ಹೆಣಗಾಡುತ್ತಿದ್ದಳು. ಈ ಹಂತದಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ 1 ಕಣ್ಣಿಲ್ಲದ 40 ವರ್ಷದ ವ್ಯಕ್ತಿ 14ರ ಬಾಲೆಯನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದ. 40 ಎಕರೆ ಜಮೀನಿದ್ದ ಆತ ಬಾಲಕಿ ತಾಯಿಗೆ ಚಿನ್ನ ಹಾಗೂ ಹಣ ನೀಡುವ ಆಸೆ ತೋರಿಸಿ ಅಪ್ರಾಪ್ತಳನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಕೊನೆಗೂ ಬಾಲ್ಯ ವಿವಾಹ ತಡೆಯುವಲ್ಲಿ ಜಿಲ್ಲೆಯ ಅಧಿ ಕಾರಿಗಳು ಯಶಸ್ವಿಯಾಗಿದ್ದರು. ಪ್ರೇಮದ ಬಲೆ
ದಾವಣಗೆರೆ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿರುವ ಮೊಬೈಲ್ ಮೋಹ ಹದಿ ಹರೆಯದ ಮಕ್ಕಳ ಮೇಲೂ ಗಾಢ ಪರಿಣಾಮ ಬೀರತೊಡಗಿದೆ. ಸಣ್ಣ ವಯಸ್ಸಿನಲ್ಲೇ ಪ್ರೀತಿ, ಪ್ರೇಮದ ಬಲೆಗೆ ಬೀಳುವುದು ಹೆಚ್ಚುತ್ತಿದೆ. ಕುಟುಂಬದ ಮರ್ಯಾದೆ ಮಣ್ಣು ಪಾಲಾಗುವುದಕ್ಕಿಂತ ಮದುವೆ ಮಾಡುವುದೇ ಲೇಸು ಎಂದು ಕೆಲವು ಪೋಷಕರು ಬಾಲ್ಯವಿವಾಹಕ್ಕೆ ಮುಂದಾಗುತ್ತಿದ್ದಾರೆ. 42 ಬಾಲ್ಯ ವಿವಾಹಕ್ಕೆ ತಡೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸ್ಥಾಪಿಸಿರುವ ಮಕ್ಕಳ ರಕ್ಷಣಾ ಘಟಕ 2012ರಿಂದ ಈವರೆಗೆ 309 ಬಾಲ್ಯ ವಿವಾ ಹಗಳನ್ನು ತಡೆಗಟ್ಟಿದೆ. 2012-13ರಲ್ಲಿ 7, 2014-15ರಲ್ಲಿ 16, 2015-16ರಲ್ಲಿ 35, 2016-17ರಲ್ಲಿ 33, 2017-18ರಲ್ಲಿ 46, 2018-19ರಲ್ಲಿ 44, 2019-20ರಲ್ಲಿ 86 ಹಾಗೂ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 42 ಬಾಲ್ಯ ವಿವಾಹ ನಿಲ್ಲಿಸ ಲಾಗಿದೆ. ಕೌಂಟುಬಿಕ ಅನಿವಾರ್ಯತೆ ಹಾಗೂ ಸಾಮಾಜಿಕ ಕಾರಣಗಳಿಂ ದಲೇ ಬೀದರ್ ಜಿಲ್ಲೆಯಲ್ಲಿ ಹೆಚ್ಚು ಬಾಲ್ಯ ವಿವಾಹ ಆಗುತ್ತಿದೆ. ಮಕ್ಕಳ ಭವಿಷ್ಯ ಬಲಿ
ಆರ್ಥಿಕ ಸಂಕಷ್ಟ, ಬಡತನ ಒಂದು ಕಡೆಯಾದರೆ ಇನ್ನೊಂದು ಕಡೆ ಮೂಢನಂಬಿಕೆ, ಆಸ್ತಿ ಉಳಿಸಿಕೊಳ್ಳಲು ಹಾಗೂ ಭಾವನಾತ್ಮ ಕ ಸಂಬಂಧಗಳು ಸಹ ಅನೇಕ ಕಡೆ ಬಾಲ್ಯ ವಿವಾಹಕ್ಕೆ ಕಾರಣವಾಗುತ್ತಿವೆ. ಯಾರದೋ ಮಾತು ಕೇಳಿ ಮೂಢನಂಬಿಕೆಗೆ ಬಲಿಯಾಗುತ್ತಿರುವ ಗ್ರಾಮೀಣ ಪ್ರದೇಶದ ಜನರು ಇದಕ್ಕೆ ತಮ್ಮ ಮಕ್ಕಳ ಭವಿಷ್ಯ ಬಲಿಕೊಡುತ್ತಿದ್ದಾರೆ. ಒಂದೆರಡು ತಾಲೂಕು ಗಳಿಗೆ ಸೀಮಿತವಾಗಿದ್ದ ಬಾಲ್ಯ ವಿವಾಹ ಪಿಡುಗು ಈಗ ಬೆಳಗಾವಿಯ ಇಡೀ ಜಿಲ್ಲೆಯನ್ನು ಆವರಿಸಿಕೊಂಡಿದೆ. ಮಧ್ಯರಾತ್ರಿ ಮದುವೆಗೆ ತಡೆ
ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದಕ್ಕೆ ಹೋಗುತ್ತಿದ್ದವು. ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ ದೂರದ ಚಿಕ್ಕ ಹಳ್ಳಿ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಆ ಹಳ್ಳಿಯ ಮುಗ್ಧ ಬಾಲಕಿಗೆ ಪೋಷಕರು ಮದುವೆ ನಿಗದಿ ಮಾಡಿದರು. ಹೆಣ್ಣು ಮಕ್ಕಳು ಮನೆಯಲ್ಲಿ ಬಹಳ ದಿನ ಇರಬಾರದು. ದೊಡ್ಡವಳಾದ ಬಳಿಕ ಮದುವೆ ಮಾಡಿ ಕೊಟ್ರೆ ಒಳ್ಳೆಯದೆಂಬ ಭಾವನೆ ಮನೆಯ ವರಿಗೆ. ಜೂನ್ 24ರಂದು ಮಧ್ಯರಾತ್ರಿ ಮದುವೆ ನಿಗದಿಯೂ ಆಯಿತು. ಅಧಿಕಾರಿಗಳ ಮಧ್ಯಪ್ರವೇಶದಿಂದ ಮದುವೆ ರದ್ದಾಯಿತು. 9 ಪ್ರಕರಣ ಪತ್ತೆ: ಲಾಕ್‌ಡೌನ್ ವಿಧಿಸಿದ್ದ ಆರು ತಿಂಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು ಒಂಭತ್ತು ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿವೆ. ಲೋಕೂರು ಗ್ರಾಮದ ವಾಲ್ಮೀಕಿ ಸಮುದಾಯದ 16 ವರ್ಷದ ಬಾಲಕಿಯ ಮದುವೆ ವರನ ಸ್ವಗೃಹದಲ್ಲಿಯೇ ನಿಶ್ಚಯವಾಗಿತ್ತು. ಆದರೆ ಮದುವೆಗೆ ಎರಡು ದಿನ ಮುಂಚೆಯೇ ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮದುವೆ ನಿಲ್ಲಿಸಿದರು. ಚಿತ್ರದುರ್ಗದಲ್ಲಿ 50 ಪ್ರಕರಣ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸರಕಾರ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಅಧಿ ಕಾರಿಗಳು ಕೂಡ ಒಂದು ಕಡೆಯಿಂದ ಮತ್ತೂಂದು ಕಡೆಗೆ ಓಡಾಡುವುದಿಲ್ಲ. ಈಗ ಮದುವೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗಿರುವುದನ್ನು ತಡೆದಿರುವ 50 ಪ್ರಕರಣಗಳನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.