Advertisement

ಚಿಣ್ಣರೊಂದಿಗೆ ಮುಸ್ಸಂಜೆ ಕಾರ್ಯಕ್ರಮ

05:31 PM Dec 19, 2018 | Team Udayavani |

ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡದ ಬಾಲಮಂದಿರಗಳು, ತೆರೆದ ತಂಗುದಾಣಗಳು ಹಾಗೂ ಹು-ಧಾ ವೀಕ್ಷಣಾಲಯಗಳ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಆಲೂರು ಭವನದಲ್ಲಿ ಚಿಣ್ಣರೊಂದಿಗೆ ಮುಸ್ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಈಶಪ್ಪ ಭೂತೆ ಮಾತನಾಡಿ, ಬಾಲಮಂದಿರದಲ್ಲಿರುವ ಮಕ್ಕಳು ಭಗವಂತನ ಮಕ್ಕಳಾಗಿದ್ದು, ಅನಾಥರೆಂದು ಭಾವಿಸಬಾರದು. ಸರ್ಕಾರ ಹಾಗೂ ಇಲಾಖೆಗಳು ಅನೇಕ ಯೋಜನೆ ಮೂಲಕ ಪ್ರತಿ ಹೆಜ್ಜೆಗೂ ಮಕ್ಕಳ ಏಳ್ಗೆಗಾಗಿ ಕಾರ್ಯನಿರ್ವಹಿಸುತ್ತಿವೆ. ಬಾಲಮಂದಿರದ ಪ್ರತಿಯೊಂದು ಮಗುವಿಗೂ ಗಮನ ನೀಡುವುದು ಮುಖ್ಯ ಎಂದರು.

ಹಿರಿಯ ಸಿವಿಲ್‌ ನ್ಯಾಯಾ ಧೀಶ ಆರ್‌.ಎಸ್‌. ಚಿಣ್ಣನ್ನವರ, ಬಸವಾನಂದ ಸ್ವಾಮೀಜಿ, ಮಕ್ಕಳ ಸಾಹಿತಿ ಶಂಕರ ಹಲಗತ್ತಿ, ಹಿರಿಯ ಜಾನಪದ ತಜ್ಞ ಡಾ| ಶ್ರೀಶೈಲ ಹುದ್ದಾರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ ಅಧ್ಯಕತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣಾ ಸಂಗಳದ ಸ್ವಾಗತಿಸಿದರು. ನಿಂಗಪ್ಪ ಮಡಿವಾಳರ ನಿರೂಪಿಸಿದರು. ದೀಪಾ ಜಾವೂರ ವಂದಿಸಿದರು. ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next