Advertisement
ನಾನು ಹೇಳಲು ಬಯಸುತ್ತಿರುವುದು ನಾನು ಕಳೆದ ನನ್ನ ಕಾಲೇಜ್ ಲೈಫ್ನ ಬಗ್ಗೆ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಬೇಜಾರಾಗಿದ್ದ ಜೀವನದಲ್ಲಿ ಖುಷಿಯ ಕ್ಷಣಗಳನ್ನು ತಂದ ಆ ದಿನಗಳ ಕುರಿತಾಗಿ. ಜೀವನದ ಎಲ್ಲಾ ಘಟ್ಟಗಳನ್ನು ಕಳೆದು ನಿರುತ್ಸಾಹದಿಂದ ಸಾಗುತ್ತಿದ್ದ ಜೀವನಕ್ಕೆ ಪುನರ್ ಉತ್ಸಾಹ ನೀಡಿದ್ದೇ ಆ ಕ್ಷಣಗಳು.
Related Articles
Advertisement
ಮರುದಿನ ಅಂತೂ ಕಾಲೇಜು ಹೋಗುವ ಪ್ರಶ್ನೆಯೇ ಇರಲಿಲ್ಲ. ಸಂಜೆ ಕೆಲಸ ಮುಗಿದ ನಂತರ ಚಹಾ ಕುಡಿಯಲು ಹೊಟೇಲಿನಲ್ಲಿ ಕೂತೆ, ಆಗ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದದ್ದು ಕಾಲೇಜಿನ ನನ್ನ ಮೊದಲ ದಿನದ ಫ್ರೆಂಡ್. ಅವನು ತನ್ನ ಕೆಲಸ ಮುಗಿಸಿ ಕಾಲೇಜಿಗೆ ಹೊರಟಿದ್ದ ನನ್ನನ್ನು ನೋಡಿ ಕಾಲೇಜಿಗೆ ಒಟ್ಟಿಗೆ ಹೋಗುವ ನಿರ್ಧಾರ ಕೈಗೊಂಡನು. ನನಗೆ ಏನು ಹೇಳಬೇಕೆಂದು ತೋಚದೆ ಅವನ ಜೊತೆಗೆ ಕಾಲೇಜಿಗೆ ಬಂದೆನು.
ಇದು ನನ್ನ ಕಾಲೇಜಿನ ಎರಡನೇ ದಿನ. ಬೆಂಚ್-ಡೆಸ್ಕಾಗಳ ನಡುವೆ ಪುನಃ ನನ್ನನ್ನು ನಾನು ಕಟ್ಟಿಕೊಂಡು ಕೂತೆನು. ಹೊಸ ಪೆನ್ನು, ಹೊಸ ಬುಕ್ಕು, ಹೊಸ ಬ್ಯಾಗುಗಳೊಂದಿಗೆ ಹೊಸ ಸಹಪಾಠಿಗಳು, ಹೊಸ ಅಧ್ಯಾಪಕರು. ಎಲ್ಲಾ ಹೊಸತನಗಳೊಂದಿಗೆ ನನ್ನ ಜೀವನ ಒಂದು ಹೊಸ ತಿರುವು ಪಡೆದುಕೊಂಡಿತು. ಅಂದಿನಿಂದ ಪ್ರಾರಂಭವಾದ ನನ್ನ ಕಾಲೇಜು ಲೈಫ್ ನನ್ನೆಲ್ಲಾ ಜೀವನದ ತೊಂದರೆಗಳಿಗೆ, ಕಷ್ಟಗಳಿಗೆ, ಬೇಜಾರಿಗೆ, ಜವಾಬ್ದಾರಿಗಳಿಗೆ ಉತ್ತಮ ಔಷಧವಾಯಿತು. ಮೂರು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ನಾನು ಕಳೆದುಕೊಂಡಿದ್ದ ಸಂತೋಷದ ಕ್ಷಣಗಳು ಇಲ್ಲಿ ಸಿಕ್ಕಿದವು.
ಇನ್ನು ಕ್ಲಾಸ್‌ಮೇಟ್‌ಗಳ ಬಗ್ಗೆ ಹೇಳುವುದೇ ಬೇಡ. ನಾವು ಪಂಚಪಾಂಡವರು. ನಮ್ಮ 5 ಜನರ ಗುಂಪು ಕಾಲೇಜಿನ ಐವತ್ತು ಜನಗಳಿಗೆ ಸಮ, ಎಂದು ಇಡೀ ಕಾಲೇಜು ಮಾತನಾಡತೊಡಗಿತು. ಒಬ್ಬ ಕಲಾವಿದ, ಒಬ್ಬ ಕವಿ, ಒಬ್ಬ ಗಲಾಟೆ ವೀರ ಇನ್ನೊಬ್ಬ ಅಂತೂ ನಮ್ಮೆಲ್ಲರ ಬಾಸ್. ನಾವು ಮಾಡದ ಕೆಲಸವೇ ಇಲ್ಲ. ಕಾಲೇಜಿನ ಎಲ್ಲಾ ರಂಗ ಕ್ಷೇತ್ರಗಳಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದೆವು. ಇಡೀ ಕಾಲೇಜಿನಲ್ಲಿ ಕಡಿಮೆ ಸ್ಟ್ರೆಂತ್ ಹೊಂದಿದ್ದ ನಾವು ಎಲ್ಲರಿಗೂ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದೆವು. ಜೀವನದಲ್ಲೇ ಸೇrಜ್ ಹತ್ತದ ನಾವು ಈ ಮೂರು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ನೀಡಿದೆವು. ನನ್ನ ಮುಖಕ್ಕೆ ಬಣ್ಣ ಹಚ್ಚುವುದಲ್ಲದೆ ಬೇರೆಯವರಿಗೂ ಬಣ್ಣ ಹಚ್ಚಿದೆ. ಆಟೋಟಗಳಲ್ಲಿ ಎಲ್ಲರ ಕೇಂದ್ರಬಿಂದು ಆಗಿದ್ದೆವು. ನಮ್ಮ ಕಾಲೇಜ್‌ನ ಮ್ಯಾಗಜಿನ್‌ಗೂ ನಮ್ಮ ಬಾಪುವಿನಿಂದ ಹೆಸರು ಸಿಕ್ಕಿತ್ತು. ಮಂಗಳ ಸಂಧ್ಯಾ. “ಅಹ್ ನನಗೂ ನನ್ನ ಶೀರ್ಷಿಕೆ ಸಿಕ್ಕಿತು’
ಕಾಲೇಜು ಜೀವನದ ಮೂರು ವರ್ಷಗಳಲ್ಲಿ ಹಲವಾರು ಸಿಹಿ-ಕಹಿ ಅನುಭವಗಳನ್ನು ಕೂಡ ಅನುಭವಿಸಿದ್ದೇವೆ. ಎಲ್ಲ ಅನುಭವಗಳೂ ಕೂಡ ನಮಗೆ ಒಂದು ಜೀವನ ಪಾಠ ಎಂದೇ ಭಾವಿಸಿದ್ದೇನೆ. ಕಾಲೇಜು ಜೀವನದ ಮರೆಯಲಾಗದ ಘಳಿಗೆ ಎಂದರೆ ನಾನು ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ನೇಮಕಗೊಂಡಿದ್ದು. ನಾನು ಸಂಧ್ಯಾ ಕಾಲೇಜಿನ ಇತಿಹಾಸದಲ್ಲಿ ವಿದ್ಯಾರ್ಥಿ ಸಂಘದ ಪ್ರಥಮ ವಿದ್ಯಾರ್ಥಿ ನಾಯಕನಾಗಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎಂದೆನಿಸುತ್ತದೆ. ಅದೇ ರೀತಿಯಾಗಿ ನಮ್ಮ ಬ್ಯಾಚ್ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಥಮ ಬ್ಯಾಚ್ ಎನ್ನುವುದು ಇನ್ನೊಂದು ಹಿರಿಮೆಯ ಸಂಗತಿ. ಇವೆಲ್ಲದರ ಜೊತೆಗೆ ಹಿರಿಮೆಗೆ ಇನ್ನೊಂದು ಗರಿ ಎಂಬಂತೆ ನನ್ನ ಸಹಪಾಠಿ ಸಹನಾಳೊಂದಿಗೆ ಕಾಲೇಜಿನ ಬೆಸ್ಟ್ ಔಟ್‌ಗೊಯಿಂಗ್ ಸ್ಟೂಡೆಂಟ್ ಎಂದು ಗುರುತಿಸಲ್ಪಟ್ಟಿದ್ದು. ಒಂದು ವೇಳೆ ನಾನು ಮೊದಲ ದಿನದ ಅನುಭವದಿಂದ ಕಾಲೇಜಿಗೆ ಹೋಗದೇ ಇರುವ ನಿರ್ಧಾರ ತೆಗೆದುಕೊಂಡಿದ್ದರೆ ನನ್ನ ಬದುಕಿನ ಈ ಅವಿಸ್ಮರಣಿಯ ಕ್ಷಣಗಳನ್ನು ನಾನು ಕಳೆದುಕೊಳ್ಳುತ್ತಿದ್ದೆ.
ಉಲ್ಲಾಸ್ ಕುಮಾರ್ಅಂತಿಮ ಬಿ.ಎ., ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು