Advertisement
ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಈ ಎರಡೂ ಕೇಂದ್ರದ ಸರ್ಕಾರದ ಇಲಾಖೆಗಳು ಹೆಚ್ಚು ಕಾರ್ಯಪ್ರವೃತ್ತರಾಗಿ ಕಿಸಾನ್‌ದಾರರ ಪಾಲಿಗೆ ವರವಾಗಿ ಪರಿಣಮಿಸಿವೆ.ರೈತರು ಅನಗತ್ಯವಾಗಿ ರಸಗೊಬ್ಬರ ಹಾಕುವ ಮೂಲಕ ಕೃಷಿ ಭೂಮಿಯನ್ನು ವಿಷವನ್ನಾಗಿ ಮಾಡುತ್ತಿರುವುದ ಗಮನಿಸಿದ ಮೋದಿ ಸರ್ಕಾರ ಕೃಷಿ ಭೂಮಿ ಮಣ್ಣು ಪರೀಕ್ಷೆಗೆ ಮುಂದಾಗಿತ್ತು.
Related Articles
Advertisement
ಆರು ಹೋಬಳಿಯಲ್ಲಿ ಅಭಿಯಾನ: ರೈತರು ಕೃಷಿಗೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರ ಹಾಕುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಣ್ಣು ಪರೀಕ್ಷೆಗೆ ಮುಂದಾಗಿದ್ದು ಮಣ್ಣು ಆರೋಗ್ಯ ಅಭಿಯಾನದಿಂದ ತಾಲೂಕಿನ ಆರು ಹೋಬಳಿಯಲ್ಲಿ ಅಭಿಯಾನ ನಡೆಸಿ ಕೃಷಿಕರಿಗೆ ಜಾಗೃತಿ ಮೂಡಿಸಿದ್ದರು. ಪ್ರಮಾಣ ಪತ್ರ ಸಕಾಲಕ್ಕೆ ತಲುಪದೇ ಇರುವುದರಿಂದ ಯೋಜನೆ ಮಣ್ಣು ಪಾಲಾಗಿದೆ.
ಮುಂಗಾರು ಪ್ರಾರಂಭಕ್ಕೆ ಮುನ್ನ ನೀಡಿ: ಈಗಾಗಲೇ 2 ವರ್ಷದಿಂದ ಮಣ್ಣು ಪರೀಕ್ಷೆ ಚೀಟಿಯನ್ನು ರೈತರಿಗೆ ತಲುಪಿಲ್ಲ. ಈ ವರ್ಷ ಮುಂಗಾರು ಪ್ರಾರಂಭಕ್ಕೆ ಮುನ್ನವಾದರೂ ರೈತರ ಕೈ ತಲುಪಿದರೆ ಬೆಳೆಗಳಿಗೆ ಅಗತ್ಯವಿರುವವ ಗೊಬ್ಬರ ಹಾಕುಲು ರೈತರು ಮುಂದಾಗುತ್ತಾರೆ. ಇಲ್ಲವಾದಲ್ಲಿ ಕೃಷಿ ಔಷಧಿ ಅಂಗಡಿ ಹಾಗೂ ರಾಸಾಯನಿಕ ಗೊಬ್ಬರ ಮಾರಾಟಗಾರರ ಮಾತಿಗೆ ಮರುಳಾಗಿ ಅನವಶ್ಯಕವಾಗಿ ರಾಸಾಯನಿಕ ಗೊಬ್ಬರ ಹಾಗೂ ಔಷಧಿಯನ್ನು ಹೆಚ್ಚು ಸಿಂಪಡಿಸುತ್ತಾರೆ.
ಕೃಷಿ ಇಲಾಖೆಗೆ ಮಣ್ಣು ಪರೀಕ್ಷೆ ಚೀಟಿ ಕೇಂದ್ರದಿಂದ ಬಂದಿವೆ. ಅವುಗಳನ್ನು ಹೋಬಳಿವಾರು ಖಾತೆದಾರರ ಹೆಸರಿನಂತೆ ವಿಂಗಡಣೆ ಮಾಡಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಲಾಗಿದೆ. ಅಲ್ಲಿಂದ ಹಳ್ಳಿಗಳಿಗೆ ತಲುಪಿಸಬೇಕು ತಲುಪದೆ ಇದ್ದರೆ ಕೂಡಲೇ ತಲುಪಿಸುವ ಕಾರ್ಯ ಮಾಡಲಾಗುತ್ತದೆ.-ಗುರುಸಿದ್ದಪ್ಪ, ಸಹಾಯಕ ಕೃಷಿ ನಿರ್ದೇಶಕ. * ಶಾಮಸುಂದರ್ ಕೆ. ಅಣ್ಣೇನಹಳ್ಳಿ