Advertisement

Maharashtra Polls: ಮಹಾರಾಷ್ಟ್ರದಲ್ಲಿ ನಾಮಿನೇಶನ್‌ ಮುಗಿದರೂ ಟಿಕೆಟ್‌ ಗೊಂದಲ!

10:47 PM Oct 29, 2024 | Team Udayavani |

ಮುಂಬೈ: ಮಹಾರಾಷ್ಟ್ರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಮುಕ್ತಾಯವಾಗಿದೆ.  ಆಡಳಿತ ಹಾಗೂ ವಿಪಕ್ಷ ಮೈತ್ರಿಕೂಟದಲ್ಲಿನ ಟಿಕೆಟ್‌ ಹಂಚಿಕೆ ಗೊಂದಲ ಮಾತ್ರ ಮುಕ್ತಾಯವಾಗಿಲ್ಲ. ಮಂಗಳವಾರ ಸಾಯಂಕಾಲದ ಸಮಯಕ್ಕೆ ಮಹಾಯುತಿ 4 ಸ್ಥಾನಗಳನ್ನು ತಪ್ಪಿಸಿಕೊಂಡಿದ್ದರೆ, ಮಹಾ ವಿಕಾಸ ಅಘಾಡಿ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

Advertisement

ಬಿಜೆಪಿ ಒಟ್ಟು 152 ಸ್ಥಾನಗಳಲ್ಲಿ, ಅಜಿತ್‌ ಪವಾರ್‌ ಬಣದ ಎನ್‌ಸಿಪಿ 52 ಮತ್ತು ಏಕನಾಥ ಶಿಂಧೆ ಬಣದ ಶಿವಸೇನೆ 80 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಒಟ್ಟು 284 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 4 ಸ್ಥಾನಗಳಿಗೆ ಅಭ್ಯರ್ಥಿ ಗಳನ್ನು ಘೋಷಣೆ ಮಾಡಿಲ್ಲ. ಮಹಾ ವಿಕಾಸ ಅಘಾಡಿ ಮೈತ್ರಿಯಲ್ಲಿರುವ ಕಾಂಗ್ರೆಸ್‌ 103, ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ಶರದ್‌ ಪವಾರ್‌ ಅವರ ಎನ್‌ಸಿಪಿ ತಲಾ 87 ಸ್ಥಾನಗಳಲ್ಲಿ ಸ್ಪರ್ಧಿಸಿವೆ. 277 ಸ್ಥಾನ ಗಳಲ್ಲಿ ಸ್ಪರ್ಧಿಸಿದ್ದು, 11 ಸ್ಥಾನಗಳನ್ನು ತಪ್ಪಿಸಿಕೊಂಡಿವೆ.

ಈ ಮೈತ್ರಿಕೂಟಗಳು ಬಾಕಿಯಾಗಿರುವ 15 ಕ್ಷೇತ್ರಗಳನ್ನು ತಮ್ಮ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳಿಗೆ ಬಿಟ್ಟುಕೊಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2 ನಾಮಪತ್ರ ಸಲ್ಲಿಸಿದ ನವಾಬ್‌ ಮಲಿಕ್‌ ಎನ್‌ಸಿ ಪಿ ಯಿಂದ ಸ್ಪರ್ಧಿಸಿರುವ ನವಾಬ್‌ ಮಲಿಕ್‌, ಮುಂಬೈನ ಮನ್‌ಖದ್‌ì ಶಿವಾಜಿ ನಗರ ಕ್ಷೇತ್ರದಿಂದ 2 ನಾಮ ಪತ್ರ ಸಲ್ಲಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಎನ್‌ಸಿಪಿ ಮತ್ತು ಪಕ್ಷೇತ್ರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಸ್ಪಷ್ಟನೆ ನೀಡಿದ ಅವರು, ಎನ್‌ಸಿಪಿಯಿಂದ ನನಗೆ ಬಿ ಫಾರ್ಮ್ ಸಿಕ್ಕಿದೆ. ನಾನು ಎನ್‌ಸಿಪಿ ಅಭ್ಯರ್ಥಿ ಎಂದು ಹೇಳಿದ್ದಾರೆ. ನವಾಬ್‌ಗ ಟಿಕೆಟ್‌ ವಿರೋಧಿಸಿದ್ದ ಬಿಜೆಪಿಗೆ ಮುಖಭಂಗವಾಗಿದೆ.

ಟಿಕೆಟ್‌ ಸಿಗದ್ದಕ್ಕೆ ಉದ್ಧವ್‌ ಹೊಗಳಿದ ಶಿಂಧೆ ಬಣದ ಶಾಸಕ

Advertisement

ಕಳೆದ ವರ್ಷ ಉದ್ಧವ್‌ ಬಣ ತೊರೆದು ಏಕನಾಥ್‌ ಶಿಂಧೆ ಬಣ ಸೇರಿದ್ದ ಶಾಸಕ ಶ್ರೀನಿವಾಸ್‌ ವಂಗಾ ಟಿಕೆಟ್‌ ಸಿಗದ ಕಾರಣ ಈಗ ಪಶ್ಚಾತಾಪ ವ್ಯಕ್ತ ಪಡಿಸಿದ್ದಾರೆ. ಶಿಂಧೆ ಬಣವನ್ನು ತೊರೆದಿರುವ ಅವರು, ಉದ್ಧವ್‌ ಬಣ ಸೇರುವುದಾಗಿ ಹೇಳಿದ್ದಾರೆ. ಬಿಜೆಪಿ ಮಹಾರಾಷ್ಟ್ರ ಘಟಕದ ವಕ್ತಾರೆ ಶೈನಾ.ಎನ್‌.ಸಿ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಅಭ್ಯರ್ಥಿಯಾಗಿ ಮುಂಬಾ ದೇವಿ ಕ್ಷೇತ್ರದಿಂದ ನಾಮ ಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next