Advertisement

Assembly Election: ಮಹಾರಾಷ್ಟ್ರ, ಜಾರ್ಖಂಡ್‌ನ‌ಲ್ಲಿ ವಂಶಾಡಳಿತಕ್ಕೆ ಪಕ್ಷಗಳ ಮಣೆ!

03:42 AM Oct 29, 2024 | Team Udayavani |

ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯಗಳು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿವೆ. ಈವರೆಗೆ ಘೋಷಣೆಯಾದ ಪಟ್ಟಿಯನ್ನು ಗಮನಿಸಿದರೆ ಎಲ್ಲ ಪಕ್ಷಗಳೂ ವಂಶಾಡಳಿತ  ರಾಜಕೀಯಕ್ಕೆ ಮಣೆ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಮಹಾರಾಷ್ಟ್ರದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಭಾವಿ ರಾಜಕೀಯ ಕುಟುಂಬಗಳಿಗೆ ಸೇರಿದವರೇ ಆಗಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

Advertisement

ಬಿಜೆಪಿ
ರಾಜಕೀಯ ಹಿನ್ನೆಲೆ ಇರದ 1 ಲಕ್ಷ ಯುವಕರನ್ನು ರಾಜಕೀಯಕ್ಕೆ ಕರೆತರಬೇಕೆಂಬ ಪ್ರಧಾನಿ ಮೋದಿಯವರ ಕರೆಯ ಹೊರತಾಗಿಯೂ ಬಿಜೆಪಿ ರಾಜಕೀಯ ನಾಯಕರ ಕುಡಿಗಳಿಗೆ ಟಿಕೆಟ್‌ ನೀಡಿದೆ. ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚವಾಣ್‌ ಪುತ್ರಿ ಶ್ರೀಜಯಾ ಚವಾಣ್‌, ಬಿಜೆಪಿ ಮುಂಬೈ ಅಧ್ಯಕ್ಷ ಆಶಿಷ್‌ ಶೇಲಾರ್‌,  ಅವರ ಸೋದರ ವಿನೋದ್‌ ಶೇಲಾರ್‌, ಮಾಜಿ ಸಿಎಂ ಶಿವಾಜಿರಾವ್‌ ಪಾಟೀಲ್‌ ಮೊಮ್ಮಗ ಸಂಭಾಜಿ ಪಾಟೀಲ್‌, ಮಾಜಿ ಸಿಎಂ ನಾರಾ ಯಣ ರಾಣೆ ಪುತ್ರನಿಗೂ ಬಿಜೆಪಿ ಟಿಕೆಟ್‌ ಸಿಕ್ಕಿದೆ.

ಶಿವಸೇನೆ
ಸಚಿವ ಉದಯ್‌ ಸಾಮಂತ್‌ ಸೋದರ ಕಿರಣ್‌ ಸಾಮಂತ್‌, ಸಂಸದರಾದ ಸಂದೀಪನ್‌, ರವೀಂದ್ರ ವೈಕರ್‌ ಅವರ ಕುಟುಂಬ ಸದಸ್ಯರಿಗೆ ಈ ಬಾರಿ ಟಿಕೆಟ್‌ ಸಿಕ್ಕಿದೆ.

ಎನ್‌ಸಿಪಿ (ಅಜಿತ್‌ ಪವಾರ್‌)
ಶರದ್‌ ಪವಾರ್‌ ಅವರ ಕುಟುಂಬದ ಭದ್ರ ಕೋಟೆ ಬಾರಾಮತಿಯಲ್ಲಿ ಈ ಬಾರಿ ಡಿಸಿಎಂ ಅಜಿತ್‌ ಪವಾರ್‌ ಮತ್ತು ಅವರ ಸಂಬಂಧಿ ಯುಗೇಂದ್ರ ಪವಾರ್‌ ನಡುವೆ ಹಣಾ ಹಣಿ ಏರ್ಪಟ್ಟಿದೆ. ಇದ ಲ್ಲದೇ, ಬಿಜೆಪಿ ಹಿರಿಯ ನಾಯಕ ದಿವಂಗತ ಗೋಪಿ ನಾಥ್‌ ಮುಂಡೆ ಅವರ ಸಂಬಂಧಿ ಧನಂಜಯ್‌ ಮುಂಡೆ ವರ್ಲಿಯಲ್ಲಿ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್‌
ಮುಂಬೈ ಕಾಂಗ್ರೆಸ್‌ ಅಧ್ಯಕ್ಷರಾದ ವರ್ಷಾ ಗಾಯಕ್ವಾಡ್‌ ಸೋದರಿ ಜ್ಯೋತಿ, ಮಾಜಿ ಸಿಎಂ ವಿಲಾಸ್‌ರಾವ್‌ ದೇಶ್‌ಮುಖ್‌ ಪುತ್ರರಾದ ಅಮಿತ್‌ ಮತ್ತು ಧೀರಜ್‌ಗೆ ಟಿಕೆಟ್‌ ನೀಡಲಾಗಿದೆ. ಪಂಜಾಬ್‌ ರಾವ್‌ ದೇಶ್‌ಮುಖ್‌ ಪುತ್ರ ಸುನೀಲ್‌, ಶಾಸಕ ಸುನೀಲ್‌ ಕೇದಾರ್‌ ಪತ್ನಿ ಅನುಜಾ ಅವರೂ ಕಾಂಗ್ರೆಸ್‌ನಿಂದ ಕಣಕ್ಕಿಳಿದಿ ದ್ದಾರೆ.

Advertisement

ಎನ್‌ಸಿಪಿ (ಶರದ್‌ ಪವಾರ್‌)
ಮಾಜಿ ಡಿಸಿಎಂ ಆರ್‌.ಆರ್‌.ಪಾಟೀಲ್‌ ಅವರ ಪುತ್ರ ರೋಹಿತ್‌ ಪಾಟೀಲ್‌ ಅವ ರಿಗೆ ಅವರ ತಾಯಿ ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ನೀಡ ಲಾ ಗಿದೆ. ಎನ್‌ಸಿಪಿ (ಎಸ್‌ಪಿ) ಪಕ್ಷದ ಭಾಗ್ಯಶ್ರೀ ಅತ್ರಂ ಅವರು ತಮ್ಮ ತಂದೆ ಧರ್ಮ ರಾವ್‌ ಬಾಬಾ ಅತ್ರಂ ವಿರುದ್ಧವೇ ಕಣಕ್ಕಿಳಿದಿದ್ದಾ ರೆ.

ಶಿವಸೇನೆ (ಯುಬಿಟಿ)
ವರ್ಲಿ ಕ್ಷೇತ್ರ ದಲ್ಲಿ ಮಾಜಿ ಸಿಎಂ ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ ಸ್ಪರ್ಧಿ ಸಿದ್ದು, ಅವರ ಸಂಬಂಧಿ ವರುಣ್‌ ಸರ್ದೇಸಾಯಿಗೆ ವಂದ್ರೇ ಪೂರ್ವದಲ್ಲಿ ಟಿಕೆಟ್‌ ನೀಡ ಲಾಗಿದೆ. ಸಂಸದ ಸಂಜಯ್‌ ರಾವತ್‌ ಸೋದರ ಸುನೀಲ್‌ ರಾವತ್‌ ಅವರೂ ವಿಖೊÅàಲಿಯಲ್ಲಿ ಕಣಕ್ಕಿಳಿದಿದ್ದಾರೆ.

ಜಾರ್ಖಂಡ್‌ ನಲ್ಲೂ ಪ್ರಭಾವಿಗಳಿಗೆ ಟಿಕೆಟ್‌!
ಜಾರ್ಖಂಡ್‌ ಮಾಜಿ ಸಿಎಂ ಅರ್ಜುನ್‌ ಮುಂಡಾ ಪತ್ನಿ ಮೀರಾ ಮುಂಡಾ, ಚಂಪೈ ಸೊರೇನ್‌ ಪುತ್ರ ಬಾಬು ಲಾಲ್‌, ರಘುಬರ್‌ ದಾಸ್‌ ಸೊಸೆ ಪೂರ್ಣಿಮಾ ದಾಸ್‌, ಶಿಬು ಸೊರೇನ್‌ ಸೊಸೆ ಸೀತಾ ಸೊರೇನ್‌, ಮಧು ಕೋಡಾ ಪತ್ನಿ ಗೀತಾ ಕೋಡಾಗೆ ಬಿಜೆಪಿ ಟಿಕೆಟ್‌ ಸಿಕ್ಕಿ ದೆ. ಇನ್ನು, ಜೆಎಂಎಂನಿಂದ ಸಿಎಂ ಹೇಮಂತ್‌ ಪತ್ನಿ ಕಲ್ಪನಾ ಸೊರೇನ್‌, ಸೋದರ ಬಸಂತ್‌ ಕಣಕ್ಕಿಳಿದಿದ್ದಾರೆ. ಮಾಜಿ ಡಿಸಿಎಂ ಸುಧೀರ್‌ ಮಹತೋ ಅವರ ಪತ್ನಿ ಸವಿತಾ, ಮಾಜಿ ಸಚಿವ ಜಗನ್ನಾಥ್‌ ಮಹತೋರ ಪತ್ನಿ ಬೇಬಿಗೂ ಜೆಎಂಎಂ ಟಿಕೆಟ್‌ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next