Advertisement

ಇಲಾಖೆ ಸ್ಪಂದಿಸದಿದ್ದರೂ ಅಪಾಯಕಾರಿ ಮರ ತೆರವು

04:25 PM Jun 17, 2018 | Team Udayavani |

ಉಪ್ಪಿನಂಗಡಿ : ಇಲ್ಲಿನ ಅರಣ್ಯ ಇಲಾಖೆಯ ವಸತಿ ಗೃಹದ ಆವರಣ ಗೋಡೆಯ ಬದಿಯಲ್ಲಿದ್ದ ಮರದ ಗೆಲ್ಲುಗಳು ರಸ್ತೆಯ ಬದಿಗೆ ಬಾಗಿ ಅಪಾಯಕಾರಿಯಾಗಿ ಪರಿಣಮಿಸಿದ್ದು, ಅರಣ್ಯ ಇಲಾಖೆ ಇದರ ತೆರವಿಗೆ ಗಮನ ನೀಡದ ಹಿನ್ನೆಲೆಯಲ್ಲಿ ಗ್ರಾ.ಪಂ. ಸದಸ್ಯರೇ ಸ್ವತಃ ಮುತುವರ್ಜಿ ವಹಿಸಿ ಮರವನ್ನು ಕತ್ತರಿಸಿದ್ದಲ್ಲದೆ, ರಸ್ತೆಗೆ ವಾಲಿಕೊಂಡಿದ್ದ ಗೆಲ್ಲುಗಳನ್ನು ತೆರವುಗೊಳಿಸಿದ್ದಾರೆ.

Advertisement

ಉಪ್ಪಿನಂಗಡಿ- ಹಿರೇಬಂಡಾಡಿ ರಸ್ತೆಯ ಬದಿ ಅರಣ್ಯ ಇಲಾಖೆಯ ವಸತಿ ಗೃಹವಿದ್ದು, ಇದರ ಬದಿಯಲ್ಲಿಯೇ ರಸ್ತೆಗೆ ಮರವೊಂದು ಬಾಗಿ ಅಪಾಯಕಾರಿಯಾಗಿ ನಿಂತಿತ್ತು. ಇದೊಂದು ವೇಳೆ ಧರೆಗುರುಳಿದ್ದರೆ, ವಿದ್ಯುತ್‌ ಕಂಬಗಳು ತುಂಡಾಗುವ ಸಾಧ್ಯತೆಯಿತ್ತಲ್ಲದೆ, ರಸ್ತೆಯಲ್ಲಿ ಹೋಗುವವರಿಗೂ ಅಪಾಯವುಂಟಾಗುವ ಸಾಧ್ಯತೆ ಎದುರಾಗಿತ್ತು. ಈ ಬಗ್ಗೆ ಪತ್ರಿಕೆಗಳು ವರದಿ ಮಾಡಿ ಎಚ್ಚರಿಸಿದ್ದವು. ಆದರೆ ಅರಣ್ಯ ಇಲಾಖೆಯಾಗಲೀ, ಮೆಸ್ಕಾಂ ಆಗಲೀ ಇದಕ್ಕೆ ಯಾವುದೇ ಸ್ಪಂದನೆ ನೀಡಿರಲಿಲ್ಲ. ಇದನ್ನು ಮನಗಂಡ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಚಂದ್ರಶೇಖರ ಮಡಿವಾಳ ಸ್ವತಃ ಮುತುವರ್ಜಿ ವಹಿಸಿ, ಕೂಲಿ ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಮರವನ್ನು ತೆರೆವುಗೊಳಿಸಿದ್ದಲ್ಲದೆ, ಅಲ್ಲಿ ರಸ್ತೆ ಕಡೆ ಬಾಗಿ ನಿಂತಿದ್ದ ಮರದ ಗೆಲ್ಲುಗಳನ್ನು ಕತ್ತರಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next