Advertisement

ಇನ್ನೂ ಕಾರ್ಯಾರಂಭಿಸದ ವಾಯುಗುಣಮಟ್ಟ ಮಾಪನ ಕೇಂದ್ರ

06:15 AM Apr 10, 2018 | Team Udayavani |

ಉಡುಪಿ: ಪರಿಸರದಲ್ಲಿ ಸೇರಿರಬಹುದಾದ ಮಲಿನಕಾರಕಗಳ ಪ್ರಮಾಣ ಮಾಪನ ಮಾಡುವ ಉದ್ದೇಶದಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗ ಸೂಚಿಯಂತೆ ಉಡುಪಿಯಲ್ಲಿ ಆರಂಭಿಸಲಾಗಿರುವ ವಾಯು ಗುಣಮಟ್ಟ ಮಾಪನ ಕೇಂದ್ರ ನಗರದ ಬೋರ್ಡ್‌ ಹೈಸ್ಕೂಲ್‌ ಆವರಣದಲ್ಲಿ ಉದ್ಘಾಟನೆಗೊಂಡು ತಿಂಗಳಾಗುತ್ತಾ ಬರುತ್ತಿದ್ದರೂ ಕಾರ್ಯ ಆರಂಭಿಸಿಲ್ಲ.
 
ರಾಜ್ಯದ ಎಲ್ಲ  ಜಿಲ್ಲೆಗಳಲ್ಲಿಯೂ ಇಂತಹ ಕೇಂದ್ರ ಸ್ಥಾಪಿಸಲು ಮಂಡಳಿ ನಿರ್ಧರಿಸಿದ್ದು ಅದರಂತೆ  ಉಡುಪಿಯಲ್ಲಿಯೂ ಸ್ಥಾಪಿಸ ಲಾಗಿದೆ. ಕೇಂದ್ರ ಸ್ಥಾಪನೆಗೆ 1.36 ಕೋ.ರೂ. ವೆಚ್ಚ ಮಾಡಿದ್ದು 5 ವರ್ಷಗಳ ಕಾಲ ನಿರ್ವಹಣೆಗೆ ಒಂದು ಕೋ.ರೂ. ವೆಚ್ಚವಾಗುತ್ತದೆ.

Advertisement

ಈ ಕೇಂದ್ರ ಕಾರ್ಯಾರಂಭ ಮಾಡಿದ ಅನಂತರ  24 ಗಂಟೆಗಳ ಕಾಲ ನಿರಂತರ  ಕಾರ್ಯನಿರ್ವಹಿಸಲಿದೆ. ವಾರಕ್ಕೆ 2 ಬಾರಿ ಮಾಪನ ಮಾಡಲಾಗುತ್ತದೆ. ಯಾವುದೇ ಸಮಯದಲ್ಲಿ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಗಾಳಿಯ ವೇಗ,ದಿಕ್ಕು, ಒತ್ತಡ, ವಾತಾವರಣದ ತೇವಾಂಶ, ಉಷ್ಣತೆ ಕೂಡ ಇದರಲ್ಲಿ ಮಾಪನ ಮಾಡಲು ಸಾಧ್ಯ. ಸಾರ್ವಜನಿಕರು, ವಿದ್ಯಾರ್ಥಿಗಳು ಕೂಡ ಇದರಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. 

ಪರಿಸರ ಸಹ್ಯ  ಕೊಡುಗೆ ಈ ಕೇಂದ್ರದಿಂದ ದೊರೆಯುವ ದತ್ತಾಂಶಗಳಿಂದ ನಗರದ ಪರಿಸರ ಸಹ್ಯ ಅಭಿವೃದ್ಧಿಗೂ ಅನುಕೂಲವಾಗಲಿದೆ. ಉದಾಹರಣೆಗೆ ವಾಹನಗಳ ದಟ್ಟಣೆ ಅತಿಯಾಗಿರುವ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸಬೇಕಾಗುತ್ತದೆ. ಆಗ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ. ಈ ರೀತಿಯ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಮಾಪನ ಕೇಂದ್ರ ನೆರವಾಗುತ್ತದೆ. ಮಾಲಿನ್ಯ ಕಡಿಮೆ ಮಾಡಲು ಅಗಲವಾದ ರಸ್ತೆ ಅಥವಾ ಫ್ಲೈ ಒವರ್‌ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲು ಮಾಪಕದ ವರದಿಯೂ ಪೂರಕವಾಗಿರುತ್ತದೆ. ಅದೇ ರೀತಿ ನಿರ್ದಿಷ್ಟ ವ್ಯಾಪ್ತಿಯೊಳಗೆ ವಾತಾವರಣವನ್ನು ಕಲುಷಿತಗೊಳಿಸುವ ಚಟುವಟಿಕೆಗಳು ನಡೆಯುವುದು ಗಮನಕ್ಕೆ ಬಂದರೆ ಅದನ್ನು ತಡೆಯುವುದಕ್ಕೂ ಇಂತಹ ಮಾಪಕಗಳ ವರದಿಗಳು ಪೂರಕವಾಗಿರುತ್ತವೆ. ಮಾಲಿನ್ಯದ ಪ್ರಮಾಣವನ್ನು ಮಾಪಕ ಕೇಂದ್ರ ತೋರಿಸಿಕೊಡುತ್ತದೆ. ಆದರೆ ಮಾಲಿನ್ಯ ನಿಯಂತ್ರಣವನ್ನು ಸಂಬಂಧಪಟ್ಟ ಇಲಾಖೆಗಳು, ಇತರ ಆಡಳಿತ ಸಂಸ್ಥೆಗಳು ಮಾಡಬೇಕಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ಕಾಲ ಕೂಡಿ ಬಂದಿಲ್ಲ
ಮಾಪನ ಕೇಂದ್ರ ಚುನಾವಣೆ ನೀತಿ ಸಂಹಿತೆಗಿಂತ ಮೊದಲೇ ಉದ್ಘಾಟನೆ ಗೊಳ್ಳಬೇಕೆಂಬ ಉದ್ದೇಶದಿಂದ ಅಧಿಕಾರಿ ಗಳು ಅತ್ಯುತ್ಸಾಹ ತೋರಿಸಿದ್ದರು. ಅದರ ಪರಿಣಾಮವಾಗಿ ನಿರ್ಮಾಣ ಕಾಮಗಾರಿಯೂ ವೇಗವಾಗಿ ಸಾಗಿತ್ತು. ಅನಂತರ ಡಿಸ್‌ಪ್ಲೇ ಸಾಧನವನ್ನು ಕೂಡ ಅಳವಡಿಸಿ ಈಗ ಅದರ ಸುತ್ತ ಆವರಣ ಬೇಲಿ ರಚನೆಯ ಕೆಲಸವೂ ನಡೆಯುತ್ತಿದೆ. ಆದರೆ ಕೇಂದ್ರ ಕಾರ್ಯಾರಂಭಕ್ಕೆ ಕಾಲ ಇನ್ನೂ ಕೂಡಿ ಬಂದಿಲ್ಲ. 

“ಒಂದು ತಾಂತ್ರಿಕ ಕಾರಣಕ್ಕಾಗಿ ವಿಳಂಬವಾಗಿದೆ’ ಎಂಬುದು ಅಧಿಕಾರಿಗಳ ಪ್ರತಿಕ್ರಿಯೆ. ಕೋಟಿ ಖರ್ಚು ಮಾಡಿ ನಿರ್ಮಾಣಗೊಂಡ ಮಾಪನ ಕೇಂದ್ರ ನಿಷ್ಪ್ರಯೋಜಕವಾಗಿ ಉಳಿಯದಿರಲಿ. 

ದತ್ತಾಂಶ ಸಂಗ್ರಹ 
ಈ ಕೇಂದ್ರವು ಸುತ್ತಲಿನ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಗಾಳಿ/ಪರಿಸರದಲ್ಲಿರಬಹುದಾದ ಮಲಿನಕಾರಕಗಳಾದ ಗಂಧಕದ ಡೈ ಆಕ್ಸೆ„ಡ್‌, ಸಾರಜನಕದ ಡೈ ಆಕ್ಸೆ„ಡ್‌, ಧೂಳಿನ ಕಣಗಳು, ಇಂಗಾಲದ ಮೊನಾಕ್ಸೆ„ಡ್‌, ಓಝೋನ್‌(ಒ3), ಅಮೋನಿಯಾ,  ಬೆನ್‌ಜಿàನ್‌ ಸೇರಿದಂತೆ 8 ಅಂಶಗಳನ್ನು ಮಾಪನ ಮಾಡಿ ದತ್ತಂಶಗಳನ್ನು ಸಂಗ್ರಹಿಸಿ ಅದನ್ನು ಬೆಂಗಳೂರು ಮತ್ತು ಹೊಸದಿಲ್ಲಿಯ ತನ್ನ ಕೇಂದ್ರಗಳಿಗೆ ಕಳುಹಿಸಿಕೊಡುತ್ತದೆ.

Advertisement

ಕೇಬಲ್‌ನಿಂದಾಗಿ ಬಾಕಿ !
ಕೇಂದ್ರದ ಕೆಲಸಗಳು ಪೂರ್ಣಗೊಂಡಿವೆ. ಆದರೆ ಮಾಹಿತಿಯನ್ನು ಪ್ರದರ್ಶಿ ಸುವುದಕ್ಕಾಗಿ ಫೊಟೋ ಕ್ಯೂಬ್‌ ಕೇಬಲ್‌ವೊಂದರ ಅವಶ್ಯಕತೆ ಇದೆ. ಇದನ್ನು ಮುಂಬೈನಿಂದ ತರಬೇಕಾಗಿದೆ ಎಂದು ಕೇಂದ್ರದ ನಿರ್ವಹಣೆ ಹೊತ್ತಿರುವ ಚೆನ್ನೈ ಮೂಲದ ಸಂಸ್ಥೆಯವರು ತಿಳಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಾಪನ ಕೇಂದ್ರ ಕಾರ್ಯಾರಂಭ ಮಾಡುವ ವಿಶ್ವಾಸವಿದೆ.
– ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಉಡುಪಿ

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next