Advertisement

ವರ್ಕ್‌ ಫ್ರಮ್‌ ಹೋಮ್‌: ಚಿಕ್ಕಪುಟ್ಟ ಸಂಗತಿಯೂ ಬದಲಾವಣೆ ತರಬಲ್ಲದು

12:36 PM Apr 27, 2020 | mahesh |

ಮನೆಯಿಂದ ಕೆಲಸ ಮಾಡುವುದು. ಕೇಳಲು ತುಂಬಾ ಸರಳ ಎಂಬಂತೆ ತೋರುತ್ತದೆ. ಆದರೆ, ಇಷ್ಟು ದಿನ ಆಫೀಸುಗಳಲ್ಲಿ, ಕ್ಯಾಬಿನ್ನುಗಳಲ್ಲಿ ಕೆಲಸ ಮಾಡಿ ರೂಢಿಯಿದ್ದವರಿಗೆ, ಏಕಾಏಕಿ
ಮನೆಯಿಂದ ಕೆಲಸ ಮಾಡುವ ಕಾನ್ಸೆಪ್ಟ್ ಗೆ ಒಗ್ಗಿಕೊಳ್ಳುವುದು ಸುಲಭವಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ವರ್ಕ್‌ ಫ್ರಮ್‌ ಹೋಂ ಅಂದರೆ, ಅಲ್ಲಿ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ ಪ್ರಮುಖ ಪಾತ್ರ ವಹಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಮನುಷ್ಯನ ಸ್ವಭಾವ- ಗುಣ. ಒಂದಷ್ಟು ವಿಷಯಗಳ ಕುರಿತು ಗಮನ ಹರಿಸಿದರೆ, ವರ್ಕ್‌ ಫ್ರಮ್‌ ಹೋಂನಲ್ಲೂ ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಯನ್ನು  ಹೆಚ್ಚಿಸಿಕೊಳ್ಳಬಹುದು.

Advertisement

1. ಲ್ಯಾಪ್‌ಟಾಪನ್ನು, ಟೇಬಲ್‌ ಮೇಲೆ ಸ್ವಲ್ಪ ಎತ್ತರದ ಸ್ಥಳದಲ್ಲಿ ಇರಿಸಿ. ಇದರಿಂದ ನೀವು ಕುತ್ತಿಗೆಯನ್ನು ಬಗ್ಗಿಸುವ ಅಗತ್ಯ ಇರುವುದಿಲ್ಲ. ದೀರ್ಘ‌ ಕಾಲ ಕಂಪ್ಯೂಟರ್‌ ಪರದೆಯನ್ನು
ನೋಡಬೇಕಾಗಿರುವುದರಿಂದ, ಈ ರೀತಿಯ ಚಿಕ್ಕ ಬದಲಾವಣೆ ಕೂಡ ದೊಡ್ಡ ಸಹಾಯವನ್ನು ಮಾಡಬಲ್ಲುದು.

2. ಕುಳಿತುಕೊಳ್ಳುವ ಕುರ್ಚಿ ಮೇಲೆ ಕುಷನ್‌ ಇದ್ದರೆ ಉತ್ತಮ. ರೆಡಿಮೇಡ್‌ ಕುಷನ್‌ ಇಲ್ಲದೇ ಹೋದರೆ ಚಿಂತೆಯಿಲ್ಲ. ಮನೆಯಲ್ಲಿರುವ ತಲೆದಿಂಬು, ಬೆಡ್‌ಶೀಟುಗಳನ್ನೇ ಕುಷನ್‌ ರೀತಿ ಉಪಯೋಗಿಸಬಹುದು. ಸೋಫಾ ಮೇಲೆ ಕುಳಿತುಕೊಂಡು, ಲ್ಯಾಪ್‌ಟಾಪ್‌ ಅನ್ನು ತೊಡೆಯ ಮೇಲಿರಿಸಿಕೊಂಡು ಕೆಲಸ ಮಾಡುವುದು ಅಷ್ಟು ಒಳ್ಳೆಯದಲ್ಲ.

3. ನಿಂತು ಕೆಲಸ ಮಾಡಿ ಎನ್ನುತ್ತಾರೆ ಪರಿಣತರು. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ, ಇದು ವಿಚಿತ್ರವಾಗಿ ಕಾಣಿಸಬಹುದು. ದಿನದಲ್ಲಿ ಒಂದಷ್ಟು ಸಮಯ ನಿಂತುಕೊಂಡು ಕೆಲಸ ಮಾಡಿದರೆ, ಸ್ನಾಯುಗಳಿಗೆ ವ್ಯಾಯಾಮ ದೊರೆಯುತ್ತದೆ ಎನ್ನುವುದು ಇದರ ಹಿಂದಿನ ಲೆಕ್ಕಾಚಾರ.

4. ಮನೆಯಲ್ಲಿನ ಕುರ್ಚಿಗಳನ್ನು ಕಚೇರಿಯ ಕುರ್ಚಿಗಳಂತೆ ವೈಜ್ಞಾನಿಕವಾಗಿ ರೂಪಿಸಲಾಗಿರುವುದಿಲ್ಲ. ಹೀಗಾಗಿ, ನೇರವಾಗಿ ಕೂರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.

Advertisement

5. ಈ ಸನ್ನಿವೇಶ ತಮಗೊಬ್ಬರಿಗೇ ಬಂದಿಲ್ಲ ಎಂಬ ಸತ್ಯವನ್ನು ಉದ್ಯೋಗಿಗಳು ಅರಿತುಕೊಳ್ಳಬೇಕು. ಇದರಿಂದಾಗಿ, ತಾವು ಏಕಾಂಗಿ ಎನ್ನುವ ಭಾವನೆ ಹೋಗಿ, ಕೆಲಸದಲ್ಲಿ ಆಸಕ್ತಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

6. ಲ್ಯಾಪ್‌ಟಾಪ್‌ ಇದ್ದರೂ, ಅದಕ್ಕಿಂತ ದೊಡ್ಡ ಗಾತ್ರದ ಕೀಬೋರ್ಡ್‌ ಮತ್ತು ಮೌಸ್‌ ಇದ್ದರೆ ತುಂಬಾ ಒಳ್ಳೆಯದು. ಇದರಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next