Advertisement

ಬೆಂಗಳೂರಿನಲ್ಲೂ ಸಮ-ಬೆಸ ನಿಯಮ ಜಾರಿಗೆ ತಂದರೆ ಲಾಭವಾಗಬಹುದೇ ?

04:05 PM Oct 13, 2019 | Team Udayavani |

ಮಣಿಪಾಲ: ದೆಹಲಿ ಮಾದರಿಯಂತೆ ಬೆಂಗಳೂರಿನಲ್ಲೂ ಸಮ-ಬೆಸ ನಿಯಮ ಜಾರಿಗೆ ತರುವುದರಿಂದ ವಾಯುಮಾಲಿನ್ಯ ಮತ್ತು ಟ್ರಾಫಿಕ್ ಸಮಸ್ಯೆ ನಿಯಂತ್ರಿಸಬಹುದೇ ? ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ.

Advertisement

ರಾಜ ಅಶೋಕ್ : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ರೀತಿಯಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗಳು ಒಳ್ಳೆಯ ಗುಣಮಟ್ಟದ ರಸ್ತೆಗಳಾದರೆ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಬಹುದು.

ನಾರಾಯಣ ದೇವಾಡಿಗ: ಸಮ ಬೆಸ ನಿಯಮದ ಬದಲು ವಾಹನ ಹೊಂದಿರುವ ಪ್ರತಿಯೊಬ್ಬ ಸವಾರನು ವಾರದ ಒಂದು ದಿನ ತನ್ನ ಸ್ವಂತ ವಾಹನ ತ್ಯಜಿಸಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಉಪಯೋಗಿಸಿದರೆ ಪೆಟ್ರೋಲ್, ಡಿಸೇಲ್ ಸಹ ಉಳಿತಾಯವಾಗುವುದಲ್ಲದೆ, ವಾಯು ಮಾಲಿನ್ಯವನ್ನು ತಡೆಗಟ್ಟಲು ಸಹ ಸಹಕಾರಿಯಾಗಬಲ್ಲದು. ಇದಕ್ಕಾಗಿ ಮೊದಲು ಸರಕಾರಗಳು, ಖಾಸಗಿ ಕಂಪೆನಿಗಳು ಮೊದಲು ಇದನ್ನು ಕಾರ್ಯರೂಪಕ್ಕೆ ತಂದರೆ ಬೇರೆ ಬೇರೆ ಸ್ವಂತ ಕಸುಬುದಾರರಿಗೂ ಇದು ಪ್ರೇರಣೆಯಾಗಬಲ್ಲದು. ಇದನ್ನು ಸಮರ್ಪಕವಾಗಿ ಸರಕಾರ ಜಾರಿಗೆ ತಂದಲ್ಲಿ ತ್ಯೆಲದ ಆಮದು ವೆಚ್ಚ ಕಡಿಮೆಯಾಗಿ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಸಹಕಾರಿಯಾಗಬಲ್ಲದು.

ಮಂಜುನಾಥ್ ದೊಡ್ಡಮನಿ: ಒಂದೇ ಕಾರನ್ನ ಓಡಿಸಿಕೊಂಡು ಅದರಿಂದಲೇ ಜೀವನ ನಡೆಸುವವರಿಗೆ ತೊಂದರೆಯಾಗುತ್ತೆ.

ಚಂದ್ರಣ್ಣ ಶಾಮಣ್ಣ: ಮನೆಗೊಂದೇ ಕಾರು ನಾವು ಕಾರುಬಾರು ಮಾಡಲು ನಮಗೆ ಎರಡೂ ಮೂರು ಕಾರುಗಳಿಲ್ಲ ನಾವು ಬಾಡಿಗೆ ಕಾರು ಬರಬೇಕಾದರೇ ಒಂದಕ್ ಎರಡು ಪಟ್ಟು ಕೇಳುವನು ಇದನ್ನ ಸರ್ಕಾರ ಅಥವಾಾ ಮತ್ತೆ ಯಾರು ನಮ್ಮ ಖರ್ಚು ವೆಚ್ಚ ಬರಿಸುವನೂ

Advertisement

ಲೋಕೇಶ್ ಗುಡ್ಡೇಮನೆ: ಖಂಡಿತವಾಗಿ ಸಮ-ಬೆಸ ನಿಯಮದಿಂದ ಸ್ವಲ್ಪ ಮಟ್ಟಿಗೆ ಆದರೂ ವಾಯು ಮಾಲಿನ್ಯ ಹಾಗು ವಾಹನದ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯ. ಆದಷ್ಟು ಬೇಗ ಕಾನೂನು ಜಾರಿಗೆ ತಂದರೆ ಒಳ್ಳೆಯದು. ಹಾಗೆಯೆ ಸರ್ಕಾರಿ ವಾಹನಗಳಿಗೆ ಈ ನಿಯಮ ಅನ್ವಯ ಆಗಬೇಕು

ಸೈಮನ್ ಫೆರ್ನಾಂಡಿಸ್ : ಅದು ಪರಿಹಾರ ಅಲ್ಲ. ಸಾಧುವು ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next