Advertisement
ಸೇವಾನುಭವದ ಆಧಾರದಲ್ಲಿ ಇವರಿಗೆ ಭಡ್ತಿಯಾಗಲಿ, ಕನಿಷ್ಠ ವೇತನವಾಗಲಿ ಇಲ್ಲವೇ ಇಲ್ಲ. ಇದು ರಾಜ್ಯದ 119 ವಾಲ್ಮೀಕಿ ಆಶ್ರಮ ಶಾಲೆಗಳ ಸುಮಾರು 350 ಶಿಕ್ಷಕರ ಸ್ಥಿತಿ.
Related Articles
ಹೊರಗುತ್ತಿಗೆಯಲ್ಲಿರುವ ತಮ್ಮ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಈ ಶಿಕ್ಷಕರ ನಿಯೋಗದ ಬೇಡಿಕೆ¿ಚು ಮೇರೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಸ್ಪಂದಿಸಿದ್ದಾರೆ. ಈ ಶಿಕ್ಷಕರ ಗೌರವ ಧನವನ್ನು 2 ಸಾವಿರ ರೂ.ಗಳಿಗೆ ಏರಿಕೆ ಮಾಡುವ ಕುರಿತು ಅವರು ಫೆ. 21ರಂದು ಟ್ವೀಟ್ ಮಾಡಿದ್ದರು. ಜತೆಗೆ ಈ ಶಿಕ್ಷಕರ ನೇರ ನೇಮಕಾತಿ, ಸೇವಾ ಭದ್ರತೆ ಮತ್ತು ಕನಿಷ್ಠ ವೇತನ 25,000 ರೂ.ಗಳ ಬೇಡಿಕೆಯನ್ನು ಪರಿಗಣಿಸುವುದಾಗಿಯೂ ಹೇಳಿ ದ್ದರು. ಅಲ್ಲದೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಕಳೆದ ವರ್ಷ ಸಭೆ ನಡೆದು ವೇತನ ಹೆಚ್ಚಳ ಹಾಗೂ ಶಿಕ್ಷಕರ ಸೇವಾನುಭವದ ಆಧಾರದಲ್ಲಿ ಖಾಯಂಗೊಳಿಸುವ ಕುರಿತಂತೆ ಒಪ್ಪಿಗೆ ನೀಡಲಾಗಿತ್ತು. ಕಳೆದ ಸೆಪ್ಟಂಬರ್ ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾವವಾಗಿತ್ತು. ವಿಶೇಷ ಪ್ರಕರಣದಡಿ ಶಿಕ್ಷಕರ ಪರವಾಗಿ ಸೇವಾ ಭದ್ರತೆ ಮತ್ತು ಮೂಲವೇತನ ಕೊಡಲು ಮಂಜೂರು ಮಾಡಿ ಕಡತ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಬೇಡಿಕೆ ಮಾತ್ರ ಇನ್ನೂ ಕಡತಗಳಲ್ಲೇ ಬಾಕಿಯಾಗಿದೆ.
Advertisement
ಸುರತ್ಕಲ್ ಮಧ್ಯ: ರಾಜ್ಯದಏಕಮಾತ್ರ ಆಶ್ರಮ ಹೈಸ್ಕೂಲ್
ದ.ಕ. ಜಿಲ್ಲೆಯ ಸುರತ್ಕಲ್‌ನ ಮಧ್ಯ ಆಶ್ರಮ ಶಾಲೆ ಹೈಸ್ಕೂಲ್ ತರಗತಿಗಳನ್ನೂ ಹೊಂದಿದ್ದು, ಇದು ರಾಜ್ಯದಲ್ಲಿ ಪ್ರೌಢ ಶಾಲಾ ತರಗತಿ ಹೊಂದಿರುವ ಏಕ ಮಾತ್ರ ಆಶ್ರಮ ಶಾಲೆ. ಇಲ್ಲಿ ಒಟ್ಟು 177 ಮಕ್ಕಳಿದ್ದು, 12 ಶಿಕ್ಷಕರಿದ್ದಾರೆ. ಈ ಶಾಲೆಯ 10ನೇ ತರಗತಿಯಲ್ಲಿ 12 ಮಕ್ಕಳು ಕಲಿಯುತ್ತಿದ್ದು, ಶಿಕ್ಷಕರು ಶಾಲಾ ವಧಿಯ ಬಳಿಕವೂ ವಿಶೇಷ ತರಗತಿ ನಿರ್ವ ಹಿಸು ತ್ತಾರೆ. ದ.ಕ. ಜಿಲ್ಲೆಯ 12 ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಒಟ್ಟು 44 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿದ್ದ ಐದು ಶಾಲೆಗಳಲ್ಲಿ ಪ್ರಸ್ತುತ ಒಂದು ಮಾತ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಮೂವರು ಶಿಕ್ಷಕರಿದ್ದಾರೆ. ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕರಿಗೆ 8,500 ರೂ. ಗೌರವಧನ ಸಿಗುತ್ತಿದ್ದು, 2 ಸಾವಿರ ರೂ. ಏರಿಸ ಲಾ ಗಿದೆ. ಬಹಳ ವರ್ಷ ಗಳಿಂದ ದುಡಿ ಯು ತ್ತಿರುವ ಶಿಕ್ಷಕರ ಬೇಡಿಕೆ ಯಂತೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನದ ಬಗ್ಗೆ ಮುಖ್ಯ ಮಂತ್ರಿಗಳ ಜತೆ ಚರ್ಚಿ ಸಿದ್ದು, ಸಮ್ಮತಿ ಸೂಚಿಸಿದ್ದಾರೆ. ಶಿಕ್ಷಕರಿಗೆ ಪೂರಕ ವಾದ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳ ಲಾಗುವುದು.
– ಬಿ. ಶ್ರೀರಾಮುಲು,
ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ - ಸತ್ಯಾ ಕೆ.