Advertisement

ಸಮುದ್ರದಾಳದಲ್ಲಿದ್ದರೂ ಹಡಗು ದಾಳಿಕೋರರ ಹೆಡೆಮುರಿ ಕಟ್ಟುವೆವು: ರಾಜನಾಥ್‌ ಸಿಂಗ್‌ ಎಚ್ಚರಿಕೆ

10:35 PM Dec 26, 2023 | Team Udayavani |

ಮುಂಬೈ: ಮಂಗಳೂರಿಗೆ ಬರುತ್ತಿದ್ದ ಇಸ್ರೇಲ್‌ ಹಡಗು ಎಂವಿ ಕೆಮ್‌ ಫ್ಲುಟೋ, ಮತ್ತೂಂದು ಹಡಗು ಎಂವಿ ಸಾಯಿ ಬಾಬಾ ಮೇಲೆ ಡ್ರೋನ್‌ ದಾಳಿ ನಡೆಸಿದವರನ್ನು ಸಮುದ್ರದ ಆಳದಲ್ಲಿ ಇದ್ದರೂ ಸೆರೆ ಹಿಡಿದು ಹೆಡೆಮುರಿ ಕಟ್ಟುವೆವು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಮುಂಬೈನ ಹಡಗು ಕಟ್ಟೆಯಲ್ಲಿ “ಐಎನ್‌ಎಸ್‌ ಇಂಫಾಲ್‌” ಹೆಸರಿನ ಕ್ಷಿಪಣಿ ವಿಧ್ವಂಸಕ ಯುದ್ಧ ನೌಕೆಯನ್ನು ನೌಕಾಪಡೆಯ ಪಶ್ಚಿಮ ಕಮಾಂಡ್‌ಗೆ ಹಸ್ತಾಂತರ ಮಾಡಿ ಅವರು ಮಾತನಾಡಿದರು.
‌ಈ ಪ್ರದೇಶದಲ್ಲಿ ಭಾರತ ಆರ್ಥಿಕವಾಗಿ ಮತ್ತು ವ್ಯೂಹಾತ್ಮಕವಾಗಿ ಪ್ರಬಲವಾಗುತ್ತಿದೆ. ಹೀಗಾಗಿ, ಕೆಲವೊಂದು ಶಕ್ತಿಗಳು ನಮ್ಮನ್ನು ನೋಡಿ ಹೊಟ್ಟೆಕಿಚ್ಚು ಪಡುವಂತಾಗಿದೆ ಎಂದರು ಸಚಿವ ರಾಜನಾಥ್‌ ಸಿಂಗ್‌. ಕೇಂದ್ರ ಸರ್ಕಾರ ಸರಕು ಸಾಗಣೆ ಹಡಗುಗಳ ಮೇಲಿನ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದೆ. ಇತ್ತೀಚಿನ ದಾಳಿಗಳ ನಂತರ ಭಾರತೀಯ ನೌಕಾ ಪಡೆ ಅರಬೀ ಸಮುದ್ರ ವ್ಯಾಪ್ತಿಯಲ್ಲಿ ತನ್ನ ಗಸ್ತನ್ನು ಹೆಚ್ಚಿಸಿದೆ’ ಎಂದರು. “ಸಂಪೂರ್ಣ ಹಿಂದೂಮಹಾಸಾಗರ ಪ್ರದೇಶಕ್ಕೆ ಪ್ರಮುಖವಾಗಿ ಭಾರತವು ಭದ್ರತೆಯನ್ನು ಒದಗಿಸುತ್ತಿದೆ. ಪ್ರದೇಶದಲ್ಲಿ ಕಡಲ ವ್ಯಾಪಾರ ಸುರಕ್ಷತೆಯನ್ನು ಖಾತ್ರಿಪಡಿಸಲು ನಾವು ಮಿತ್ರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತೇವೆ” ಎಂದರು.

ಪಶ್ಚಿಮ ನೌಕಾ ಕಮಾಂಡ್‌ಗೆ ಸೇರ್ಪಡೆಯಾದ “ಐಎನ್‌ಎಸ್‌ ಇಂಫಾಲ್‌”ನಲ್ಲಿ ಸೂಪರ್‌ಸಾನಿಕ್‌ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾಯಿಸುವ ಸಾಮರ್ಥ್ಯ ಸೇರಿ ಹಲವಾರು ವೈಶಿಷ್ಟéಗಳನ್ನು ಹೊಂದಿದೆ. ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯದ ಹೆಸರನ್ನು ನೌಕೆಗೆ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next