Advertisement
ಮನುಷ್ಯನ ಭಾವನೆಗಳ ಆಭಿವ್ಯಕ್ತಿ ಮಾಧ್ಯಮವಾದ ಧ್ವನಿಯನ್ನು ಉಂಟು ಮಾಡುವ ಅಂಗವೇ ಧ್ವನಿಪೆಟ್ಟಿಗೆ. ಫ್ಯಾರಿಂಕ್ಸ್ (ಗಂಟಲು) ಮತ್ತು ಟ್ರೇಕಿಯಾ (ಶ್ವಾಸ ನಾಳ) ನಡುವಿನ ಅಂಗ ಧ್ವನಿಪೆಟ್ಟಿಗೆ ಅಥವಾ ಲಾರಿಂಕ್ಸ್. ಶ್ವಾಸಕೋಶದಿಂದ ಗಾಳಿ ಒಳಹೊರಗೆ ಹೋಗುವುದಕ್ಕೆ ಧ್ವನಿಪೆಟ್ಟಿಗೆ ಅನುವು ಮಾಡಿಕೊಡುತ್ತದೆ. ನಾವು ಸೇವಿಸುವ ಆಹಾರ ಶ್ವಾಸನಾಳ ಪ್ರವೇಶಿಸದಂತೆ ಧ್ವನಿಪೆಟ್ಟಿಗೆ ತಡೆಯುತ್ತದೆ. ಧ್ವನಿಪೆಟ್ಟಿಗೆಯಲ್ಲಿ ಬೆಳೆಯುವ ದುರ್ಮಾಂಸವೇ ಲಾರಿಂಜಿಯಲ್ ಕ್ಯಾನ್ಸರ್.ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ನಿಖರವಾದ ಕಾರಣವನ್ನು ಕಂಡುಕೊಳ್ಳಲು ಈ ವರೆಗೆ ಸಾಧ್ಯವಾಗಿಲ್ಲ. ಧೂಮಪಾನ ಮತ್ತು ಮದ್ಯಪಾನ ಧ್ವನಿಪೆಟ್ಟಿಗೆ ಕ್ಯಾನ್ಸರ್‌ಗೆ ಉಂಟುಮಾಡಬಲ್ಲ ಅಪಾಯಕಾರಿ ಅಂಶಗಳು ಎನ್ನಲಾಗಿದೆ. ಇದರೊಂದಿಗೆ ಮರದ ಹುಡಿ (ವುಡ್ ಡಸ್ಟ್), ಪೇಂಟ್, ರಾಸಾಯನಿಕಗಳಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು, ಸೋಂಕು ಹಾಗೂ ಕಡಿಮೆ ರೋಗ ನಿರೋಧಕ ಶಕ್ತಿ ಧ್ವನಿಪೆಟ್ಟಿಗೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಇತರ ಅಂಶಗಳು. ಧ್ವನಿ ಕರ್ಕಶವಾಗುವುದು, ನುಂಗುವಾಗ ತೊಂದರೆ, ಕುತ್ತಿಗೆ ಉರಿಯೂತ, ವಾಸಿಯಾಗದ ಕಫ, ಗಂಟಲು ಉರಿಯೂತ, ಕಿವಿ ನೋವು, ಉಸಿರಾಟದಲ್ಲಿ ತೊಂದರೆ, ಉಸಿರಾಡುವಾಗ ಸದ್ದಾಗುವುದು, ತೂಕದಲ್ಲಿ ಅತಿಯಾದ ಇಳಿಕೆ ಮತ್ತು ಅತಿಯಾದ ಆಯಾಸ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು.
ಸಂಪೂರ್ಣ ಲಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯ ವೇಳೆ ಮಾಡಲಾದ ರಂಧ್ರದ ಒಳಗೆ ಮತ್ತೂಂದು ಸಣ್ಣ ರಂಧ್ರವನ್ನು ಮಾಡಲಾಗುತ್ತದೆ. ಇದನ್ನು ಟ್ರೇಕಿಯಾ-ಈಸೋಫಾಜಿಯಲ್ ಪಂಕ್ಚರ್ ಎಂದು ಕರೆಯಲಾಗುತ್ತದೆ. ಈ ರಂಧ್ರದೊಳಗೆ ಕವಾಟದ ರಚನೆಯಿರುವ ಸಿಲಿಕಾನ್ ಉಪಕರಣವೊಂದನ್ನು ಇರಿಸಲಾಗುತ್ತದೆ. ಇದನ್ನು ಇರಿಸಿದಾಕ್ಷಣ ಧ್ವನಿ ಹೊರಡುವುದಿಲ್ಲ. ಉಪಕರಣವು ಗಾಳಿಯನ್ನು ಶ್ವಾಸಕೋಶದಿಂದ ಅನ್ನನಾಳಕ್ಕೆ ಹೋಗಲು ಅನುವು ಮಾಡಿಕೊಡುತ್ತದೆ. ಇದರಿಂದ ಗಂಟಲು ಭಾಗದ ಅನ್ನನಾಳದಲ್ಲಿ ಕಂಪನ ಉಂಟಾಗಿ ಧ್ವನಿ ಉಂಟಾಗುತ್ತದೆ.
Related Articles
Advertisement
ಹಾಗಾದರೆ ಮಾತನಾಡುವುದು ಹೇಗೆ?ಕ್ಯಾನ್ಸರ್ ಬಾಧಿತ ಧ್ವನಿಪೆಟ್ಟಿಗೆಯನ್ನು ತೆಗೆದ ಬಳಿಕ ರೋಗಿ ಮಾತನಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಾಗಾದರೆ ಈ ಸ್ಥಿತಿ ಶಾಶ್ವತವೇ? ಅಲ್ಲ. ಆತ ಮತ್ತೆ ಮಾತನಾಡುವಂತಾಗಲು ಹಲವು ರೀತಿಯ ಉಪಕ್ರಮಗಳಿವೆ. ಅವೆಂದರೆ, ಈಸೋಫೇಜಿಯಲ್ ಸ್ಪೀಚ್, ಎಲೆಕ್ಟ್ರೋ ಲಾರಿಂಕ್ಸ್, ಟ್ರೇಕಿಯೋ-ಈಸೋಫೇಜಿಯಲ್ (ಟಿಇ) ವಾಯ್ಸ ಪ್ರಾಸೆಸಿನ್. ಈಸೋಫೇಜಿಯಲ್ ಸ್ಪೀಚ್ ಅಂದರೆ ಅನ್ನನಾಳದಿಂದ ಗಾಳಿಯನ್ನು ಹೊರಗೆಡಹುವ ಮೂಲಕ ಧ್ವನಿಯನ್ನುಂಟುಮಾಡುವುದು. ಈ ವಿಧಾನದಲ್ಲಿ ಗಾಳಿಯನ್ನು ಹೊರಸೂಸುವಾಗ ಅದನ್ನು ಗಂಟಲು ಭಾಗದ ಅನ್ನನಾಳದಲ್ಲಿ ನಿಲ್ಲಿಸಿ, ಬಾಯಿಯಿಂದ ಹೊರಸೂಸುವಾಗ ಶಬ್ದವನ್ನುಂಟುಮಾಡಲಾಗುತ್ತದೆ. ಎಲೆಕ್ಟ್ರೋ ಲ್ಯಾರಿಂಕ್ಸ್ ಎಂಬುದು ಬ್ಯಾಟರಿ ಚಾಲಿತ, ಕೈಯಲ್ಲಿ ಹಿಡಿದುಕೊಳ್ಳಬಹುದಾದ ಒಂದು ಉಪಕರಣವಾಗಿದೆ. ಈ ಉಪಕರಣವನ್ನು ಗಂಟಲು ಭಾಗದಲ್ಲಿ ಹಿಡಿದುಕೊಂಡು ಬಾಯಿಯಿಂದ ಉಚ್ಚರಿಸಿದರೆ ರೋಬೊಟಿಕ್ ಸ್ವರ ಹೊರಬರುತ್ತದೆ. -ಡಾ| ಶೀಲಾ ಎಸ್.,
ಅಸಿಸ್ಟೆಂಟ್ ಪ್ರೊಫೆಸರ್
ಎಸ್.ಒ.ಎ.ಎಚ್.ಎಸ್., ಮಣಿಪಾಲ ವಿವಿ